ಮದುವೆ ಮಹೂರ್ತಕ್ಕೂ ಮುನ್ನವೇ ಕುಸಿದು ಬಿದ್ದು ವಧು ಸಾವು, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದ್ದೇ ಬೇರೆ!

By Santosh Naik  |  First Published May 13, 2022, 5:43 PM IST

ಕಳೆದ ಮೂರು ದಿನಗಳಿಂದ ಮದುವೆ ಸಮಾರಂಭಗಳು ಮತ್ತು ತೀವ್ರವಾದ ಫೋಟೋ ಶೂಟ್‌ಗಳಿಂದಾಗಿ ಆಯಾಸದಿಂದ ಅವಳು ಸಾವನ್ನಪ್ಪಿರಬಹುದು ಎಂದು ಕುಟುಂಬ ಭಾವಿಸಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಸೇವಿಸಿರುವ ಆಹಾರದಲ್ಲಿ ಒಂದು ರೀತಿಯ ವಿಷವಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.


ವಿಶಾಖಪಟ್ಟಣ (ಮೇ. 13): ಜೀವನವೇ ಹಾಗೆ ಮುಂದಿನ ನಿಮಿಷದಲ್ಲಿ ಏನಾಗುತ್ತದೆ ಎನ್ನುವುದನ್ನು ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ಅಂಥದ್ದೇ ಒಂದು ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ (VisakhaPatnam) ವರದಿಯಾಗಿದೆ. ಮದುವೆಯ ದಿನ ಯಾವುದೇ ಅಡೆ ತಡೆಗಳು ಆಗದೇ ಇರಲಿ ಎಂದು ವಧು ಹಾಗೂ ವರರ ತಂದೆ ತಾಯಿಗಳು ಮತ್ತು ಸಂಬಂಧಿಕರು ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಮದುವೆಯ ದಿನವೂ ಅನಾರೋಗ್ಯಕ್ಕೆ ಒಳಗಾದರೂ ಅದನ್ನು ಯಾರಿಗೂ ಹೇಳದೇ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ.

ಮದುವೆ (Wedding) ಸಮಾರಂಭ ಮುಗಿಯುವವರೆಗೂ ವಧು-ವರರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಸಮಾರಂಭದ ದಿನ ಭಯ, ಉದ್ವೇಗದಿಂದ ಏನಾದರೂ ಸಂಭವಿಸಬಹುದು ಎನ್ನುವ ಎಚ್ಚರಿಕೆಯಲ್ಲಿ ಅವರಿರುತ್ತಾರೆ. ಆದರೆ, ವಿಶಾಖಪಟ್ಟಣದಲ್ಲಿ ನಡೆದ ಮದುವೆಯ ಸಮಾರಂಭದಲ್ಲ ಸೃಜನಾ (Srujana) ಅವರ ಕುಟುಂಬದಲ್ಲಿ ಹೀಗಾಗಲಿಲ್ಲ. ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಾಗಲೇ, ವಧು ಮಂಟಪದಲ್ಲೇ ಕುಸಿದು ಬಿದ್ದು ಸಾವು ಕಂಡಿದ್ದಾಳೆ.

ಆಂಧ್ರಪ್ರದೇಶದ ವೈಜಾಗ್‌ನ ಯುವತಿ ಸೃಜನಾ ಮದುವೆಗೆ ಸಿದ್ಧಳಾಗಿದ್ದಳು. ಮದುವೆಗೆ ಎರಡು ದಿನಗಳಿಂದ ಸಂಬಂಧಿಕರು, ಪೋಷಕರ ಪ್ರಕಾರ ಅವಳು ತುಂಬಾ ದುರ್ಬಲಳಾಗಿದ್ದಳು. ಆದರೆ ಯಾರೂ ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲು ಅಥವಾ ಸಮಸ್ಯೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ. ಮದುವೆಯ ದಿನದಂದು ಸಭಾಂಗಣದಲ್ಲಿ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ ಆಕೆ ಕುಸಿದು ಬಿದ್ದಿದ್ದಾಳೆ.

ಸರಿಯಾಗಿ ಮಹೂರ್ತದ ಸಮಯದಲ್ಲೇ ವಧು ಕುಸಿದು ಬಿದ್ದಿದ್ದರಿಂದ ವರನ ಕಡೆಯವರಿಗೆ ವೇದಿಕೆಯಲ್ಲಿ ಏನಾಗುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ತಕ್ಷಣವೇ ಅಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಆಕೆ ಮೃತಪಟ್ಟದ್ದಾಳೆ ಎಂದು ಘೋಷಣೆ ಮಾಡಿದರು. ಹೃದಯ ಸ್ತಂಭನದಿಂದಾಗಿ (cardiac arrest ) ಆಕೆ ಸಾವಿಗೀಡಾಗಿರಬಹುದು ಎಂದು ವೈದ್ಯರು ಮೊದಲು ಅಂದಾಜು ಮಾಡಿದ್ದರು.

ವರದಿಗಳ ಪ್ರಕಾರ, ವಧು ಸೃಜನಾ ಅವರನ್ನು ಉಪನಗರದ ಮಧುರವಾಡದಲ್ಲಿ ಬುಧವಾರ ರಾತ್ರಿ ನಾಗೋತಿ ಶಿವಾಜಿ ಎಂಬುವವರೊಂದಿಗೆ ವಿವಾಹವಾಗಬೇಕಿತ್ತು. ವೈದಿಕ ಪದ್ಧತಿಗಳ ಪ್ರಕಾರ, ವಧು-ವರರು ತಲೆಗೆ ಬೆಲ್ಲ ಮತ್ತು ಜೀರಿಗೆ ಪೇಸ್ಟ್ ಅನ್ನು ಹಾಕಿದರು, ಮದುವೆ ಬಹುತೇಕ ಮುಕ್ತಾಯವಾಗಿ ತಾಳಿ ಕಟ್ಟುವ ಸಮಾರಂಭ ಮಾತ್ರವೇ ಬಾಕಿ ಉಳಿದಿತ್ತು. ಈ ವೇಳೆ ಸೃಜನಾ ಕುಸಿದು ಬಿದ್ದಿದ್ದಳು. ಆಕೆಯ ಕುಟುಂಬಸ್ಥರು ಆಕೆಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಆಕೆ ಸ್ಪಂದಿಸಲಿಲ್ಲ.

EXCLUSIVE BREAKING: ಬೆಂಗಳೂರು ಯುವತಿಯ ಮೇಲೆ ಆಸಿಡ್‌ ಯರಚಿದ್ದ ನಾಗೇಶ್‌ ಬಂಧನ

ಕಳೆದ ಮೂರು ದಿನಗಳಿಂದ ಮದುವೆ ಸಮಾರಂಭಗಳು ಮತ್ತು ತೀವ್ರವಾದ ಫೋಟೋ ಶೂಟ್‌ಗಳಿಂದಾಗಿ ಆಯಾಸದಿಂದ ಅವಳು ಸಾವನ್ನಪ್ಪಿರಬಹುದು ಎಂದು ಕುಟುಂಬ ಭಾವಿಸಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಸೇವಿಸಿರುವ ಆಹಾರದಲ್ಲಿ ಒಂದು ರೀತಿಯ ವಿಷವಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ

ವರನ ಮನೆಯವರು ಹುಡುಗಿಗೆ ಏನಾದರೂ ಹೇಳಿರಬಹುದು ಎಂದು ಹುಡುಗಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆಕೆಯ ಒಪ್ಪಿಗೆಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆಯ ದಿನವೇ ಇಂಥ ಕಠಿಣ ನಿರ್ಧಾರ ತೆಗೆದುಕೊಂಡಿರುವ ಹಿಂದೆ ಬಲವಾದ ಕಾರಣವಿದೆ. ಬಹುಶಃ ವರನ ಮನೆಯ ಕಡೆಯವರು ಆಕೆಗೆ ಏನಾದರೂ ಹೇಳಿರಬಹುದು. ನಮಗೆ ಅದನ್ನು ತಿಳಿಸಲು ಸಾಧ್ಯವಾಗದೇ ವಿಷ ಸೇವಿಸಿರಬಹುದು ಎಂದು ಆರೋಪಿಸಿದ್ದಾರೆ. ಎರಡೂ ಕುಟುಂಬಗಳು ಪೊಲೀಸರನ್ನು ಸಂಪರ್ಕಿಸಿದ್ದು, ನಿಖರವಾಗಿ ಏನಾಯಿತು ಎಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

ಟಿಡಿಪಿ ನಾಯಕರು ಕೂಡ ಹಾಜರಿದ್ದರು: ಹೈದರಾಬಾದ್ ಮೂಲದ ಮುಜೇತಿ ಈಶ್ವರ ರಾವ್ ಹಾಗೂ ಅನುರಾಧಾ ಅವರ ಪುತ್ರಿಯಾಗಿದ್ದ ಸೃಜನಾ ಅವರ ವಿವಾಹವನ್ನು ತೆಲುಗುನಾಡು ಟ್ರೇಡ್ ಯೂನಿಯನ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ 29 ವರ್ಷದ ನಾಗೋತಿ ಶಿವಾಜಿ ಎನ್ನುವವರೊಂದಿಗೆ ನಿಶ್ಚಯ ಮಾಡಿದ್ದರು. ಕಳೆದ ಮೂರು ದಿನಗಳಿಂದ ನಿರಂತರವಾಗ ಮದುವೆಯ ಕುರಿತಾದ ಕೆಲಸಗಳು ನಡೆಯುತ್ತಿದ್ದವು. ತೆಲುಗು ದೇಶಂ ಪಕ್ಷದ ಸಾಕಷ್ಟು ನಾಯಕರು ಮದುವೆಯ ಆರತಕ್ಷತೆಗೆ ಬಂದಿದ್ದರು.

click me!