ಪಂಜಾಬ್‌ ಪೊಲೀಸರಿಂದ 7 ಲಕ್ಷ ಡ್ರಗ್ಸ್ ಕ್ಯಾಪ್ಸೂಲ್‌ ವಶ

By Govindaraj S  |  First Published Jul 24, 2022, 11:51 AM IST

ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯಲ್ಲಿ ದಾಳಿ ನಡೆಸಿರುವ ಪಂಜಾಬ್‌ ಪೊಲೀಸರು ಸುಮಾರು 7 ಲಕ್ಷ ಮಾದಕ ವಸ್ತು ತುಂಬಿದ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಂತಾರಾಜ್ಯ ಮಾದಕವಸ್ತು ಜಾಲವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಚಂಡೀಗಢ (ಜು.24): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯಲ್ಲಿ ದಾಳಿ ನಡೆಸಿರುವ ಪಂಜಾಬ್‌ ಪೊಲೀಸರು ಸುಮಾರು 7 ಲಕ್ಷ ಮಾದಕ ವಸ್ತು ತುಂಬಿದ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಂತಾರಾಜ್ಯ ಮಾದಕವಸ್ತು ಜಾಲವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಪೂರೈಕೆದಾರನಾದ ಆಶಿಶ್‌ ವಿಶ್ಕಾರ್ಮ ಅವರನ್ನು ಬಂಧಿಸಲಾಗಿದೆ. ಈತ ಕ್ಯಾಪ್ಸೂಲ್‌ಗಳಲ್ಲಿ ಮಾದಕ ವಸ್ತುಗಳನ್ನು ತುಂಬಿ ಪಂಜಾಬ್‌ನ ಫತೇಘಢ ಸಾಹೀಬ್‌, ಎಸ್‌ಎಎಸ್‌ ನಗರ, ರೂಪಾನಗರ, ಪಟಿಯಾಲ ಮತ್ತು ಲೂಧಿಯಾನ ಸೇರಿದಂತೆ ಹಲವು ಜಿಲ್ಲೆಗಳಿಗೆ ಕಳೆದ 5 ವರ್ಷಗಳಿಂದ ಪೂರೈಕೆ ಮಾಡುತ್ತಿದ್ದ. ಶನಿವಾರ 4.98 ಲಕ್ಷ ಲೊಮೋಟಿಲ್‌ ಟ್ಯಾಬ್ಲೆಟ್‌, 97 ಸಾವಿರ ಅಲಾರಜೋಲಮ್‌, 75 ಸಾವಿರ ಪ್ರೋಕ್ಸಿವೋನ್‌, 21 ಸಾವಿರ ಅವಿಲ್‌ ಮತ್ತು 16,725 ಬುಪ್ರೆನೋಪ್ರೀನ್‌ ಇಂಜೆಕ್ಷನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಒಡಿಶಾದ ಮೂವರು ಸೇರಿ 8 ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ

ಬುಕ್ ಸ್ಟಾಲ್ ನಲ್ಲಿ ಡ್ರಗ್ಸ್ ಮಾರುತ್ತಿದ್ದವರ ಬಂಧನ: ಅದು ಹೇಳಿಕೊಳ್ಳಕ್ಕೆ ಬುಕ್ ಸ್ಟಾಲ್. ಆದ್ರೆ ಅಲ್ಲಿ ನಡಿತಿದ್ದ ದಂಧೆ ಬೇರೆಯದೇ ರೀತಿಯದ್ದು.  ಬಡ ಹುಡುಗನೊಬ್ಬ ಮತ್ತಲ್ಲಿ ತೇಲೋದಕ್ಕೆ ಈ‌ ಸ್ಟಾಲ್ ಕಾರಣವಾಗುತ್ತಿದ್ದದ್ದು ಈ ಸ್ಟಾಲ್.‌ ಈ ಸ್ಟಾಲ್ ಗೆ ಬಂದು ಅದೆಷ್ಟು ಜನ ಯುವಕರು ದಾರಿ ತಪ್ಪಿದ್ದಾರೆ ಎನ್ನುವುದೇ ಲೆಕ್ಕಕ್ಕಿಲ್ಲ. ದುಬಾರಿ ಬೆಲೆ ಕೊಟ್ಟು ಹೈ ಎಂಡ್‌  ಡ್ರಗ್ಸ್ ಖರೀದಿ ಮಾಡಲು ಆಗದೇ ಇದ್ದವರ ಪಾಲಿಗೆ ಈ ಸ್ಟಾಲ್‌ ಸರ್ಗದ ರೀತಿ ಕಾಣುತ್ತಿತ್ತು. ಇಂಥದ್ದೊಂದು ಬುಕ್‌ ಸ್ಟಾಲ್‌ ಸೋಗಿನ ಡ್ರಗ್ಸ್ ಅಡ್ಡವನ್ನು ಸದಾಶಿವನಗರ ಪೊಲೀಸರು ಭೇದಿಸಿದ್ದಾರೆ. 

ಸ್ಲಂ ಹುಡುಗರಿಗೆ ಬೇಕಾದಂಥ ಸಲ್ಯೂಷನ್‌ಗಳು ಈ ಬುಕ್‌ಸ್ಟಾಲ್‌ನಲ್ಲಿ ಮಾರಾಟವಾಗುತ್ತಿದ್ದವು ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿ ಲೋಕೇಶ್ ಅರೆಸ್ಟ್ ಮಾಡಿದ್ದಾರೆ. ಯಶವಂತಪುರ ಆರ್ ಟಿ ಓ ಕಚೇರಿ ಬಳಿ ಪುಟ್ಟಪ್ಪ ಬುಕ್ ಸ್ಟಾಲ್ ಇರಿಸಿಕೊಂಡಿದ್ದ ಆರೋಪಿ, ಅಲ್ಲಿಂದಲೇ ಇಂಥ ಸಲ್ಯೂಷನ್‌ಗಳನ್ನು ಮಾರಾಟ ಮಾಡುತ್ತಿದ್ದ.  ಇತ್ತೀಚೆಗೆ ರಾಬರಿಗೆ ಯತ್ನಿಸಿ ಸದಾಶಿವನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ತಬ್ರೇಜ್‌ ಹಾಗೂ ತೌಸಿಫ್‌ರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳು ಜಡ್ಜ್ ಮುಂದೆಯೇ ಸಾರ್ವಜನಿಕರು ಥಳಿಸಿದ್ದರ ಬಗ್ಗೆ ಹೇಳಿದ್ದರು. 

Bengaluru: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬೃಹತ್ ಕಾರ್ಯಾಚರಣೆ

ಆತನ ಹೇಳಿಕೆ ಹಿನ್ನೆಲೆ ಥಳಿಸಿದ್ದ ಸಾರ್ವಜನಿಕರ ಮೇಲೆಯೂ ದೂರು ದಾಖಲು ಮಾಡಲಾಗಿತ್ತು. ನಶೆಯಲ್ಲಿ ತೇಲ್ತಿದ್ದವರು ಖಾಕಿ ಕೈಗೆ ಸಿಕ್ಕಿ ಬೆಪ್ಪಾಗಿದ್ರು.  ಸರಿಯಾದ ಊಟ ತಿಂಡಿ ಕೂಡ ಮಾಡದೇ ಕಾಟ ಕೊಡ್ತಿದ್ದರು .ನೀರು ಕುಡಿದರೂ ಕೂಡ ವಾಂತಿ ಮಾಡಿಕೊಳ್ಳುತ್ತಿದ್ದರು. ವಾರ ಪೂರ್ತಿ ಊಟ ಮಾಡದೆ ಸೆಲ್ಯೂಷನ್ ನಶೆಯಲ್ಲೇ ಇರ್ತಿದ್ದರು. ಹಾಗಾಗಿ ಇವರ ಹಿನ್ನೆಲೆ ತಿಳಿದುಕೊಳ್ಳಲು ಸದಾಶಿವನಗರ ಪೊಲೀಸರು ಮುಂದಾದ ವೇಳೆ, ನಶೆಯಲ್ಲಿಯೇ ಇವರು ರಾಬರಿಗೆ ಇಳಿದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿತ್ತು.

click me!