ಆಂಧ್ರ ಪ್ರದೇಶದ ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ: ಮೂವರು ಪೊಲೀಸರ ಸಾವು

By Govindaraj SFirst Published Jul 24, 2022, 8:50 AM IST
Highlights

ಆಂಧ್ರ ಪ್ರದೇಶದ ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಮೂವರು ಬೆಂಗಳೂರು ಪೊಲೀಸರು ಸಾವನಪ್ಪಿದ ಘಟನೆ ಪೂತಲಪಟ್ಟು ಮಂಡಲ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ನಡೆದಿದೆ. 

ಬೆಂಗಳೂರು (ಜು.24): ಆಂಧ್ರ ಪ್ರದೇಶದ ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಮೂವರು ಬೆಂಗಳೂರು ಪೊಲೀಸರು ಸಾವನಪ್ಪಿದ ಘಟನೆ ಪೂತಲಪಟ್ಟು ಮಂಡಲ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ನಡೆದಿದೆ. ಅಪಘಾತದಲ್ಲಿ ಸಬ್ ಇನ್ಸ್ಪೆಕ್ಟರ್ ಅವಿನಾಶ್, ಅನಿಲ್ ಹಾಗೂ ಡ್ರೈವರ್ ಸ್ಥಳದಲ್ಲೇ ಸಾವನಪಿದ್ದು, ದೀಕ್ಷಿತ್ ಹಾಗೂ ಕಾನ್ಸಟೇಬಲ್ ಶರಣ ಬಸವ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಇವರನ್ನು ಆಸ್ಪತ್ರಗೆ ದಾಖಲಾಗಿಸಲಾಗಿದೆ. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಚಿತ್ತೂರು ಬಳಿ ಕಾರು ಅಪಘಾತವಾಗಿದ್ದು, ಕೇಸ್ ಸಂಬಂಧ ಆಂಧ್ರ ಪ್ರದೇಶದ ಚಿತ್ತೂರಿಗೆ ನಿನ್ನೆ (ಶನಿವಾರ) ರಾತ್ರಿ ಶಿವಾಜಿನಗರ ಪೊಲೀಸರ ತಂಡ ತೆರಳಿದ್ದರು. ಕರ್ನಾಟಕದಿಂದ ತಿರುಮಲಕ್ಕೆ ಇನ್ನೋವಾದಲ್ಲಿ ಹೋಗುತ್ತಿದ್ದಾಗ ಅವಘಡ ಸಂಭವಿಸಿದ್ದು, ನಿದ್ದೆ ಮಂಪರಿನಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತವಾಗಿದೆ. ಸದ್ಯ ಸ್ಥಳೀಯ ಪೊಲೀಸರಿಂದ ಬೆಂಗಳೂರು ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಬರ್ತಡೇ ಮುಗಿಸಿಕೊಂಡು ಹೊರಟಿದ್ದವರು ಮಸಣದ ಪಾಲು

ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ: ಇಂದು ಮುಂಜಾನೆ ಚಿತ್ತೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿಗಳು ಮರಣ ಹೊಂದಿ, ಇತರ ಐದು ಸಿಬ್ಬಂದಿಗಳು ಗಾಯಗೊಂಡ ಘಟನೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದ್ದಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಕ್ರಕೈಗೊಳ್ಳುವಂತೆ ಸೂಚಿಸಿದ್ದಾರೆ. ಇವರೆಲ್ಲರೂ ಬೆಂಗಳೂರಿನ ಶಿವಾಜಿ ನಗರದ ಪೊಲೀಸ್ ಠಾಣೆಯ ಸಿಬ್ಬಂದಿಗಳಾಗಿದ್ದು, ತನಿಖೆಯ ಸಂಬಂಧ ತೆರಳುತ್ತಿದ್ದರು. 

ಅಪಘಾತದಲ್ಲಿ ಜಜ್ಜಿ ಹೋಗಿದ್ದ ವ್ಯಕ್ತಿಯ ಮುಖ ಜೋಡಿಸಿ ಪ್ರಕರಣ ಭೇದಿಸಿದ ಪೊಲೀಸರು!

ಗಾಯಗೊಂಡ ಸಿಬ್ಬಂದಿಗಳ ನೆರವಿಗೆ ಧಾವಿಸಿ, ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಎಲ್ಲಾ ಅಗತ್ಯ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ. ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ ಪಾಸ್ತಿಗಳ ರಕ್ಷಿಸುವ ಕಾರ್ಯದಲ್ಲಿ, ಪೊಲೀಸ್ ಸಿಬ್ಬಂದಿ ಮೃತ ಪಟ್ಟಿರುವುದು ಅತ್ಯಂತ ನೋವು ತಂದಿದೆ, ಎಂದೂ ಸಚಿವರು ಹೇಳಿದ್ದಾರೆ. ಮಾತ್ರವಲ್ಲದೇ ಕೊಪ್ಪಳ ಜಿಲ್ಲೆಯ ಕುಕನೂರಿನ ಬಳಿ ಸಂಭವಿಸಿದ ಇನ್ನೊಂದು ಭೀಕರ ಅಪಘಾತದಲ್ಲಿ ಐದು ಮಂದಿ ಮೃತಪಟ್ಟ ಘಟನೆಯ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ದುಃಖ ತಂದಿದೆ ಎಂದೂ ಸಚಿವರು ತಿಳಿಸಿದ್ದಾರೆ. ಇನ್ನು ಸ್ಥಳೀಯ ಪೊಲೀಸರು ಘಟನೆಯ ಸಂಬಂಧ ತನಿಖೆಯನ್ನು ನಡೆಸಿದ್ದಾರೆ ಎಂದು ಹೇಳಿದ್ದಾರೆ.

click me!