ಐಎಂಎ ವಂಚನೆ; ರೋಷನ್ ಬೇಗ್ ಆಸ್ತಿ  ಜಪ್ತಿ, ಒಟ್ಟು ಮೌಲ್ಯ!

By Suvarna NewsFirst Published Jul 7, 2021, 5:57 PM IST
Highlights

* ಐಎಂಎ ಬಹುಕೋಟಿ ವಂಚನೆ ಪ್ರಕರಣ
* ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ
* ಸರ್ಕಾರಕ್ಕೆ ಕಟು ಎಚ್ಚರಿಕೆ ನೀಡಿದ ಹೈಕೋರ್ಟ್
* ಸಿಬಿಐನಿಂದ  ಬಂಧನಕ್ಕೆ ಒಳಗಾಗಿದ್ದ ಬೇಗ್

ಬೆಂಗಳೂರು(ಜು. 07)   ಕ್ಕೆ ಸಂಬಂಧಿಸಿ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಮಾಡಲಾಗಿದೆ. ಆಸ್ತಿ ಜಪ್ತಿಗೆ ಹೈಕೋರ್ಟ್ ಈ ಮೊದಲೇ ಸೂಚನೆ ನೀಡಿತ್ತು.

ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ತೆಗೆದುಕೊಳ್ಳುವ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ. ಸರ್ಕಾರ ಸಹ ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ಹಿಂಜರಿಯುತ್ತಿದೆ. ಸರ್ಕಾರದ ನೀತಿ ನಿಜಕ್ಕೂ ನ್ಯಾಯಾಲಯಕ್ಕೆ ಅಚ್ಚರಿ ತರಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.

 ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ 2020ರ ನವೆಂಬರ್ 22 ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು.

ಐಎಂಎ ಕೇಸ್ ನಲ್ಲಿ ದೊಡ್ಡ ದೊಡ್ಡವರ ಹೆಸರಿದೆ!

ರೋಷನ್ ಬೇಗ್ ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್ ಜಪ್ತಿ  ಮಾಡಲಾಗಿದೆ.  ಐಎಂಎ ಯಿಂದ  ಸರ್ಕಾರಿ ಶಾಲೆಗೆ 10 ಕೋಟಿ ದೇಣಿಗೆ ಪಡೆದಿದ್ದರು. ದೇಣಿಗೆ ನೀಡಿರುವುದರಿಂದ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ವಾದ ಮಾಡಿದ್ದಾರೆ.

ಶಾಸಕರ ಆಸ್ತಿ ಜಪ್ತಿ ಮಾಡಲು ವಿಳಂಬ ಮಾಡಿದ್ದೀರಿ? ಅರ್ಧ ಡಜನ್ ಆದೇಶ ನೀಡಿದ ನಂತರ ಜಪ್ತಿ  ಯಾಕೆ? ಸರ್ಕಾರಿ ಶಾಲೆಗೆ ನೀಡಿದ ದೇಣಿಗೆ ಹಿಂತಿರುಗಿಸಿಲ್ಲ?  ಠೇವಣಿದಾರರ ಹಣ ದೇಣಿಗೆ ಪಡೆದಿರುವುದು ಸರಿಯೇ.? ಐಎಂಎ ಬಗ್ಗೆ ಮೃದು ಧೋರಣೆ ಯಾಕೆ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿರುವ ಹೈಕೋರ್ಟ್  ದೇಣಿಗೆ ಹಿಂತಿರುಗಿಸುವ ಬಗ್ಗೆ ನಿಲುವು ತಿಳಿಸಲು ಸೂಚನೆ ನೀಡಿದ್ದು ವಿಚಾರಣೆಯನ್ನು ಜುಲೈ 19 ಕ್ಕೆ ಮುಂದೂಡಿದೆ.

ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್  ಅವರ ಆಸ್ತಿ ಜಪ್ತಿ  ಮಾಡಲಾಗಿದ್ಸ್ತುದು ಬೇಗ್ ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್ ಜಪ್ತಿ ಮಾಡಲಾಗಿದ್ದು ಎಷ್ಟು ಪ್ರಮಾಣದ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ ಎನ್ನುವುದು ತಿಳಿಯಬೇಕಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ರಾಜಕಾರಣಿಗಳ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಮನ್ಸೂರ್ ಕೋಟ್ಯಂತರ ರೂ. ವಂಚನೆ ಮಾಡಿದ್ದು ಜೈಲಿನಲ್ಲಿದ್ದಾರೆ. 

click me!