
ರಾಯಚೂರು (ಜು.25): ವಿಚ್ಛೇದಿತ ಮಹಿಳೆಯೊಂದಿಗೆ ಬೆಡ್ ಮೇಲೆ ಇದ್ದಾಗಲೇ ಪೊಲೀಸಪ್ಪ ಪತ್ನಿ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ನಡೆದಿದೆ.
ಮದುವೆಯಾಗಿದ್ರೂ ವಿಚ್ಛೇದಿತ ಮಹಿಳೆಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಲವ್ವಿಡವ್ವಿ ನಡೆಸಿದ್ದ ಪೊಲೀಸಪ್ಪ ರಾಜ್ ಮಹಮ್ಮದ್. ಸಿರವಾರ ಠಾಣೆ ಹೆಡ್ ಕಾನ್‌ಸ್ಟೇಬಲ್ ಆಗಿರುವ ರಾಜ್ ಮಹಮ್ಮದ್ ಈ ಹಿಂದೆ ಕವಿತಾಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಸ್ಪತ್ರೆ ಸ್ಟಾಫ್ ನರ್ಸ್ ಆಗಿರುವ ಸರಳ ಎಂಬಾಕೆಯ ಪರಿಚಯವಾಗಿದೆ. ಪೊಲೀಸ್ ಠಾಣೆ, ಆಸ್ಪತ್ರೆ ಎರಡೂ ಎದುರುಬದರಾಗಿದ್ದರಿಂದ ದಿನನಿತ್ಯ ನೋಡಿ ಕಣ್ಣು ಕಣ್ಣು ಕಲೆತಿವೆ. ಇಬ್ಬರ ನಡುವೆ ಮಾತುಕತೆ ಸರಳವಾಗಿ ಶುರುವಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಟ್ಟಿಗೆ ಕಾಲಕಳೆಯೋವರೆಗೆ ಸಂಬಂಧ ಬೆಳೆದಿದೆ.
ಮೊರಾರ್ಜಿ ವಸತಿ ಶಾಲೆಯಲ್ಲಿ ಹಲ್ಲಿ ಬಿದ್ದ ಪಲಾವ್ ತಿಂದು 45 ಮಕ್ಕಳು ಅಸ್ವಸ್ಥ; ಇಬ್ಬರ ಸ್ಥಿತಿ ಗಂಭೀರ
ಇನ್ನು ದೇವದುರ್ಗ ಪೊಲೀಸ್ ಠಾಣೆಯ ಪಿಸಿ ಆಗಿರುವ ಪತ್ನಿ ಪ್ಯಾರಿ ಬೇಗಂಗೆ ಹಿಂದಿನಿಂದಲೂ ಗಂಡನ ಹೆಣ್ಣಿನ ಹಿಂದೆ ಬಿದ್ದಿರುವ ಅನುಮಾನ ಇತ್ತು. ಆದರೆ ರೆಡ್ ಆಗಿ ಸಿಕ್ಕಿಬಿದ್ದಿರಲಿಲ್ಲ. ಆದರೆ ಗಂಡನ ಲವ್ವಿಲವ್ವಿ ಹೆಚ್ಚಾದಾಗ ಈ ಬಗ್ಗೆ ಎಸ್‌ಪಿ ಗಮನಕ್ಕೂ ತಂದಿದ್ದ ಪತ್ನಿ ಪ್ಯಾರಿ ಬೇಗಂ. ಅಷ್ಟೆಲ್ಲ ಆದರೂ ಸರಳ ಜೊತೆ ಲವ್ವಿ ಡವ್ವಿ ಮುಂದುವರಿಸಿದ್ದ ಪತಿ. ಪತ್ನಿ ಡ್ಯೂಟಿಯಲ್ಲಿದ್ದಾಗ ಸರಳ ಜೊತೆ ಸುಖ ಅನುಭವಿಸತ್ತಿದ್ದ ಪೊಲೀಸಪ್ಪ. ಆದರೆ
ರಾಯಚೂರಲ್ಲಿ ಏಮ್ಸ್ ಸ್ಥಾಪಿಸದೆ ಕೇಂದ್ರದಿಂದ ಮಲತಾಯಿ ಧೋರಣೆ: ಸಚಿವ ಶರಣಪ್ರಕಾಶ್ ಪಾಟೀಲ್
ನಿನ್ನೆ ಹೆಂಡ್ತಿ ಪ್ಯಾರಿ ಬೇಗಂ ಕರ್ತವ್ಯಕ್ಕೆ ಹೋಗಿದ್ದಾಳೆ. ಪತ್ನಿ ಹೋಗುತ್ತಿದ್ದಂತೆ ನರ್ಸ್ ಸರಳಳನ್ನು ಮನೆಗೆ ಕರೆಸಿಕೊಂಡಿದ್ದ ಪೊಲೀಸಪ್ಪ. ಮನೆಯಲ್ಲಿ ಲವ್ವಿ ಡವ್ವಿ ನಡೆತಿರೋದು ಪತ್ನಿಗೆ ಕಿವಿಗೆ ಯಾರೋ ಮುಟ್ಟಿಸಿದ್ದಾರೆ. ಅಲ್ಲಿಂದ ವಾಪಸಾದ ಪ್ಯಾರಿ ಬೇಗಂ, ಮನೆಗೆ ಬಂದು ಡೂರ್ ಬಡಿದಾಗ ಒಳಗಡೆ ಪ್ರಣಯಹಕ್ಕಿಗಳು ಮೈಮರೆತಿದ್ದಾರೆ. ಎಷ್ಟು ದಿನಂತ ಗಂಡನ ಆಟ ನೋಡಿಕೊಂಡು ಇರುವುದು? ಅಂತೆಯೇ ನಿನ್ನೆ ಇಬ್ಬರನ್ನು ಮನೆಯೊಳಗೆ ಕೂಡಿಹಾಕಿ ಲಾಕ್ ಮಾಡಿದ ಪತ್ನಿ. ಗಂಡನ ವಿರುದ್ಧ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ಯಾರಿ ಬೇಗಂ. ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಠಾಣೆಯಲ್ಲಿ ಇನ್ನು ಪ್ರಕರಣ ದಾಖಲಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ