
ಬೆಂಗಳೂರು (ಆ.27): ಕಾಲೇಜು ಓದುತ್ತಿದ್ದಾಗಲೇ ಪ್ರೀತಿ ಮಾಡುತ್ತಿದ್ದ ಕೇರಳದ ಪ್ರಣಯ ಪಕ್ಷಿಗಳು, ಓದಿನ ನಂತರ ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಂಡು ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿ ಇದ್ದರು. ಇಬ್ಬರೂ ಕಳೆದ 3 ವರ್ಷಗಳಿಂದ ಜೊತೆಗಿದ್ದರೂ ಮದುವೆ ಆಗಿರಲಿಲ್ಲ. ಆದರೆ, ತಮ್ಮಿಬ್ಬರ ಪ್ರೀತಿಯಲ್ಲಿ ಅನುಮಾನ ಬಂದು ಇಬ್ಬರ ನಡುವೆ ಜಗಳ ಆರಂಭವಾಗಿದೆ. ಹೀಗೆ, ಆರಂಭವಾದ ಜಗಳ ನಿನ್ನೆ ರಾತ್ರಿ ವೇಳೆ ವಿಕೋಪಕ್ಕೆ ತಿರುಗಿದ್ದು, ತನ್ನ ಪ್ರೇಯಸಿಯನ್ನು ಕುಕ್ಕರ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಯುವತಿಯನ್ನು ದೇವಿ (24) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಆಕೆಯ ಪ್ರಿಯಕರ ವೈಷ್ಣವ್ ಆಗಿದ್ದಾನೆ. ಕೇರಳ ಮೂಲದ ವೈಷ್ಣವ್-ದೇವಿ ಇಬ್ಬರೂ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಲೀವಿಂಗ್ ಟುಗೇದರ್ನಲ್ಲಿದ್ದರು. ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದ ಈ ಜೋಡಿ, ನಂತರ ಬೆಂಗಳೂರಿನಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡು ಕಳೆದ ಮೂರು ವರ್ಷಗಳಿಂದ ಬೇಗೂರಿನ ನ್ಯೂ ಮೈಕೋ ಲೇಔಟ್‌ನಲ್ಲಿ ವಾಸವಾಗಿದ್ದರು. ಆದರೆ, ನಿನ್ನೆ ತಡರಾತ್ರಿ ಇಬ್ಬರ ನಡುವೆ ಜಗಳವಾಗಿ ಹತ್ಯೆ ನಡೆದಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೇಮಿಗಾಗಿ ಪತಿಯನ್ನೇ ಹತ್ಯೆ ಮಾಡಿದ ಕೊಲೆಗಾತಿ ಪತ್ನಿ, ಹೆಸರು ಪಾವನಾ!
ಪ್ರೀತಿಕೊಂದ ಅನುಮಾನದ ಪೆಡಂಭೂತ: ಇನ್ನು ಕಾಲೇಜು ದಿನಗಳಿಂದಲೂ ಒಟ್ಟಾಗಿ ಓದುತ್ತ, ಕೆಲಸ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ಯುವಕ-ಯುವತಿಯ ಪ್ರೇಮಕ್ಕೆ ಅನುಮಾನ ಎಂಬ ಭೂತ ಪ್ರೀತಿಯನ್ನೇ ಮಸಣಕ್ಕಟ್ಟಿದೆ. ಅನುಮಾನ ಎನ್ನುವುದು ಎಂತಹ ಘಾಡ ಪ್ರೀತಿಯನ್ನು ಕೊಂದುಬಿಡುತ್ತೆ ಎಂಬುವುದಕ್ಕೆ ಇದೇ ಸಾಕ್ಷಿಯಾಗಿದೆ. ಈ ಹಿಂದೆ ಕೂಡ ಇವರಿಬ್ಬರಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗಿತ್ತು. ಆಗ ಕುಟುಂಬದವರೇ ಕೂತು ಸರಿಪಡಿಸಿದ್ದರು. ಆದರೆ ಆರೋಪಿ ವೈಷ್ಣವ್ಗೆ ಕೆಲ ದಿನಗಳಿಂದ ಯುವತಿ ಮೇಲೆ ಅನುಮಾನ ಹುಟ್ಟಿಕೊಂಡಿತ್ತು. ರಾತ್ರಿ ವೇಳೆ ಜಗಳ ಆರಂಭಿಸಿದ ತನ್ನ ಪ್ರೇಯಸಿಯ ತಲೆಗೆ ಕುಕ್ಕರ್‌ನಿಂದ ಬಲವಾಗಿ ಹೊಡೆದು ಬರ್ಬರ ಹತ್ಯೆ ಮಾಡಿದ್ದಾನೆ. ನಂತರ, ಪಶ್ಚಾತ್ತಾಪ ಪಟ್ಟು ಆಸ್ಪತ್ರೆಗೆ ಸೇರಿಸೋಣ ಎಂದುಕೊಂಡರೂ ತನ್ನನ್ನು ನಾಲ್ಕೈದು ವರ್ಷ ಪ್ರೀತಿ ಮಾಡಿದ್ದ ಯುವತಿ ಸಾವನ್ನಪ್ಪಿದ್ದಳು.
ಹಸೆಮಣೆಯಿಂದ ಎದ್ದು ಹೋಗಿ ಪ್ರೀತಿಸಿದವನ ಮದುವೆಯಾದ ಧೈರ್ಯಗಿತ್ತಿ: ತುಮಕೂರು (ಆ.27): ತಾಳಿ ಕಟ್ಟುವ ಶುಭವೇಳೆ ಹಸೆಮಣೆಯಿಂದ ಮದುವೆ ಬೇಡವೆಂದು ಎದ್ದು ಹೋದವಳನ್ನು ಕೊನೆಗೆ ಪೊಲೀಸರ ವಿಚಾರಣೆಗೆ ಕರೆಸಿ ಪ್ರೀತಿ ಮಾಡುತ್ತಿದ್ದ ಯವಕನೊಂದಿಗೆ ಸೇರಿಸಿದ ಸಿನಿಮೀಯ ಘಟನೆ ನಡೆದಿದೆ. ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರೀತಿ ಮಾಡುತ್ತಿದ್ದರೂ ಅದನ್ನು ಮುಚ್ಚಿಟ್ಟು ಬೇರೊಬ್ಬನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಇಲ್ಲಿಯೂ ಹುಡುಗಿ ಪೋಷಕರ ಸಂತೋಷಕ್ಕಾಗಿ ಪ್ರೀತಿ ತ್ಯಾಗ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಇನ್ನೇನು ತಾಳಿ ಕಟ್ಟುವ ವೇಳೆ, ಪ್ರೀತಿಸಿದ ಹುಡುಗನಿಗೆ ಮೋಸ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ.
ಪ್ರಿಯಕರನೊಂದಿಗೆ ಸೇರಿಸಿದ ಪೋಷಕರು: ಮತ್ತೊಂದೆದಡೆ ಪ್ರೀತಿಯೊಬ್ಬನ ಜೊತೆಗೆ ಮದುವೆ ಇನ್ನೊಬ್ಬನ ಜೊತೆಗೆ ಮಾಡಿಕೊಂಡು ತನಗೆ ತಾನೂ ಮೋಸ ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ತಾಳಿ ಕಟ್ಟುವ ವೇಳೆ ಹಸೆಮಣೆಯಿಂದ ಎದ್ದುನಿಂತು ತನಗೆ ಈ ಮದುವೆ ಬೇಡ. ನಾನು ಒಂದು ಹುಡುಗನನ್ನು ಪ್ರೀತಿ ಮಾಡುತ್ತಿದ್ದು, ಅವನನ್ನೇ ಮದುವೆ ಆಗುತ್ತೇನೆಂದು ಮದುವೆಯನ್ನು ಮುರಿದಿದ್ದಾಳೆ. ಕೊನೆಗೆ ಅವರ ಪ್ರೀತಿಯನ್ನು ನೋಡಿ ಪೋಷಕರೇ ವಧುವನ್ನು ಪ್ರಿಯಕರನೊಂದಿಗೆ ಸೇರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ