Asianet Suvarna News Asianet Suvarna News

ಪ್ರೇಮಿಗಾಗಿ ಪತಿಯನ್ನೇ ಹತ್ಯೆ ಮಾಡಿದ ಕೊಲೆಗಾತಿ ಪತ್ನಿ, ಹೆಸರು ಪಾವನಾ!

ಪ್ರೇಮಿ ಜೊತೆ ಸೇರಲು ಅಡ್ಡಿಯಾಗಿದ್ದ ಪತಿಯನ್ನ ಪತ್ನಿಯೇ ಲವರ್ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ  ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.‌ 

A wife who killed husband for her lover in kadooru at chikkamagaluru rav
Author
First Published Aug 14, 2023, 12:10 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.14) : ಪ್ರೇಮಿ ಜೊತೆ ಸೇರಲು ಅಡ್ಡಿಯಾಗಿದ್ದ ಪತಿಯನ್ನ ಪತ್ನಿಯೇ ಲವರ್ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ  ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.‌ 

ಮೃತನನ್ನ 28 ವರ್ಷದ ನವೀನ್ ಎಂದು ಗುರುತಿಸಲಾಗಿದೆ. ಮೃತ ನವೀನ್ ಹಾಗೂ ಕೊಲೆಗಾತಿ ಪಾವನಾಗೆ ಆರು ವರ್ಷದ ಹಿಂದೆ ಮದುವೆಯಾಗಿತ್ತು. 4 ವರ್ಷದ ಹೆಣ್ಣು ಮಗು ಕೂಡ ಇತ್ತು. ಮದುವೆ ನಂತರದ ಪ್ರೇಮಿಯಿಂದ ಗಂಡ ಹೆಂಡತಿಯ ಬಗ್ಗೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಊರಿನ ಹಿರಿಯರು ಹಾಗೂ ಕುಟುಂಬಸ್ಥರು ಮಧ್ಯಸ್ಥಿಕೆವಹಿಸಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ, ಪ್ರೇಮಿಯನ್ನು ಬಿಡಲು ಒಪ್ಪದ ಪಾವನ, ಪ್ರಿಯಕರನ ಜೊತೆ ಸೇರಿ ಗಂಡನನ್ನ ಮುಗಿಸಿದ್ದಾಳೆ.

ಪತ್ನಿ ಶೀಲಶಂಕಿಸಿ ಕೊಲೆಗೆ ಯತ್ನಿಸಿದ ದುರಳ ಗಂಡ; ಸಲ್ಮಾ ಸಾವು ಬದುಕಿನ ಹೋರಾಟ!

ಜ್ಞಾನ ತಪ್ಪಿದ ಬಳಿಕ ಪತಿ ದೇಹ ಕೆರೆಗೆ 

ಚಪಾತಿ ಕಲಸುವ ನೀರಿಗೆ ನಿದ್ದೆ ಮಾತ್ರೆಯನ್ನ ಬೆರೆಸಿ ಆ ನೀರಿನಿಂದ ಚಪಾತಿ ಹಿಟ್ಟನ್ನ ಕಲೆಸಿ ಚಪಾತಿ ಮಾಡಿದ್ದಳು. ಆ ಚಪಾತಿಯನ್ನು ಪತಿಗೆ ತಿನ್ನಿಸಿದ್ದಳು. ಪತಿ ಜ್ಞಾನ ತಪ್ಪಿದ ಬಳಿಕ ಅವನದ್ದೇ ಬೈಕಿನಲ್ಲಿ ಪ್ರೇಮಿ ಜೊತೆ ಸೇರಿ ಊರಿನಿಂದ ಮೂರು ಕಿಲೋಮೀಟರ್ ದೂರವಿರುವ ಕೆರೆಗೆ ತಂದು ಎಸೆದಿದ್ದಾರೆ. ಆತ್ಮಹತ್ಯೆಯೆಂದು ಬಿಂಬಿಸಲು ಆತನ ಚಪ್ಪಲಿ, ಬ್ಯಾಟರಿ ಸೇರಿದಂತೆ ಇತರೆ ವಸ್ತುಗಳನ್ನ ಕೆರೆಯ ದಡದಲ್ಲಿ ಅಲ್ಲಲ್ಲೇ ಎಸೆದಿದ್ದಾರೆ. ಆಗಸ್ಟ್ 5 ಶನಿವಾರ ರಾತ್ರಿ ಪಜ್ಞೆ ತಪ್ಪಿದ ಪತಿಯನ್ನ ಕೆರೆಗೆ ಎಸೆದಿದ್ದ ಕೊಲೆಗಾತಿ ಪತ್ನಿ. ಭಾನುವಾರ ಮಧ್ಯಾಹ್ನ ನವೀನ್ ಮೃತದೇಹ ಪತ್ತೆಯಾಗಿತ್ತು. ಕುಟುಂಬಸ್ಥರು 28 ವರ್ಷದ ಮಗ, ಸಾಲವೂ ಇರಲಿಲ್ಲ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದರು.‌

ಬೆಂಗಳೂರು: ಅನೈತಿಕ ಸಂಬಂಧದ ಶಂಕೆ, ಪತ್ನಿಯ ಕೊಂದು ಅತ್ತೆಗೆ ಕರೆ ಮಾಡಿದ..!

ಮರಣೋತ್ತರ ಪರೀಕ್ಷೆಯಲ್ಲಿ ಸತ್ಯಾಂಶ ಹೊರಗೆ : 

ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡೂರು ತಾಲೂಕು ಆಸ್ಪತ್ರೆಯಲ್ಲಿ ಮಾಡಿಸದೆ, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ತಂದಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪ್ರೇಮಿ ಜೊತೆ ಸೇರಿ ಹೆಂಡತಿ ಮಾಡಿದ ಕಣ್ಣ ಮುಚ್ಚಾಲೆ ಆಟ ಬಟಾ ಬಯಲಾಗಿತ್ತು ಇಬ್ಬರು ಪ್ರೇಮಿಗಳಾದ ಕಿರಣ್ ಮತ್ತು ಪವಾನ ಕೈದಿಗಳು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌

Follow Us:
Download App:
  • android
  • ios