
ಬೆಂಗಳೂರು (ಮಾ.21) : ಪತ್ನಿಯು ಬೇರೊಬ್ಬನ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡು ಮಗು ಮಾಡಿಕೊಂಡಿರುವ ವಿಚಾರ ಗೊತ್ತಾಗಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತ್ನಿ ತಬ್ಸಂಬಿ ಪತಿಯಿಂದ ಕೊಲೆಯಾದ ಮಹಿಳೆ. 14ವರ್ಷಗಳ ಹಿಂದೆಯೇ ಶೇಕ್ ಸೋಹಿಲ್ ಗೂ ತಬ್ಸಂಬಿಗೂ ಮದುವೆಯಾಗಿತ್ತು. ಇಬ್ಬರೂ ಕೋಲ್ಕತ್ತಾ ಮೂಲದವರಾಗಿದ್ದು, ಕೆಲಸ ಹರಸಿ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ರು. ಬೆಂಗಳೂರಲ್ಲಿ ನಹೀಮ್ ಎಂಬಾತನ ಜೊತೆ ಸಂಪರ್ಕ ಬೆಳಸಿಕೊಂಡಿದ್ದ ತಬ್ಸಂಬಿ. ಈ ವಿಚಾರ ತಿಳಿದು ಕೋಲ್ಕತ್ತಾಗೆ ಪತ್ನಿಯನ್ನ ಕರೆದೊಯ್ದಿದ್ದ ಶೇಕ್ ಸೋಹಿಲ್. ಆದರೆ ತಬ್ಸಂಬಿ ಕಳೆದ ಎರಡು ವರ್ಷಗಳ ಹಿಂದೆ ಮತ್ತೆ ಗಂಡನನ್ನು ಬಿಟ್ಟು ನಹೀಮ್ ಜತೆ ಸೇರಲು ಒಬ್ಬಳೆ ಬೆಂಗಳೂರಿಗೆ ಬಂದಿದ್ದ ತಬ್ಸಂಬಿ. ಪ್ರಿಯಕರನೊಂದಿಗೆ ಅನೈತಿಕ ಸಂಬಂಧಕ್ಕೆ ಮಗುವು ಆಗಿತ್ತು.
ಮದುವೆಯಾದ ಮಗಳನ್ನು ಕಿಡ್ನಾಪ್ ಮಾಡಿದ ಲವರ್, ಹುಡುಗನ ಮೂಗು ಕತ್ತರಿಸಿ ಶಿಕ್ಷೆ ನೀಡಿದ ಡೆಡ್ಲಿ ಫ್ಯಾಮಿಲಿ!
ಪತ್ನಿಯ ಅನೈತಿಕ ಸಂಬಂಧ ವಿಚಾರ ತಿಳಿದು ನಿನ್ನೆ ಬೆಂಗಳೂರಿಗೆ ಬಂದಿದ್ದ ಪತಿ ಶೇಖ್ ಸೋಹೈಲ್. ನಹೀಮ್ ನಿಂದ ಮಗು ಆದ ಬಗ್ಗೆ ನಿನ್ನೆ ಕುಪಿತನಾಗಿ ಪತ್ನಿಯನ್ನು ಪ್ರಶ್ನಿಸಿದ್ದ. ಈ ವೇಳೆ ಇಬ್ಬರೂ ಜಗಳವಾಡಿಕೊಂಡಿದ್ದರು. ಕುಡಿದ ಮತ್ತಿನಲ್ಲಿದ್ದ ಸೊಹೈಲ್ ಪತ್ನಿ ತಬ್ಸಂಬಿಗೆ ಚಾಕು ಹಿರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವಿಗೂ ಚಾಕು ಇರಿದಿರೋ ಆರೋಪಿ. ಚಾಕು ಇರಿತಕ್ಕೆ ಗಂಭೀರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ ಗಂಡನಿದ್ದು ಅನೈತಿಕ ಸಂಬಂಧ ಇಟ್ಟುಕೊಂಡ ತಬ್ಸಂಬಿ ಜೀವ ಕೊಲೆಯಲ್ಲಿ ಅಂತ್ಯವಾಗಿದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ
ಅಂದು ಮಕ್ಕಳಿಗಾಗಿ ಧರಣಿ ಕೂತಿದ್ದ ಐಪಿಎಸ್ ಅಧಿಕಾರಿ ಅರುಣ್, ಇಂದು ಅನೈತಿಕ ಸಂಬಂಧದಲ್ಲಿ ಸಿಕ್ಕಿಬಿದ್ದ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ