
ಬೆಂಗಳೂರು (ಮಾ.21) : ಜನರ ಜೇಬಿನಲ್ಲಿ ಐಫೋನ್ ಇರುವುದು ಈ ಖದೀಮರ ಕಣ್ಣಿಗೆ ಬಿದ್ದರೆ ಮುಗಿಯಿತು. ಅದ್ಯಾವ ಜೇಬಲ್ಲಿಟ್ಕೊಂಡ್ರು ಕ್ಷಣಾರ್ಧದಲ್ಲಿ ಎಗರಿಸಿಬಿಡುವ ವೃತ್ತಿಪರ ಖದೀಮರು.
ವಿವೇಕನಗರದಲ್ಲಿ ನಡೆಯುತ್ತಿದ್ದ ಬಹುತೇಕ ರಾಬರಿಗಳಲ್ಲಿ ಈ ಖದೀಮರ ಕೈಚಳಕ ಇದ್ದೇ ಇರುತ್ತಿತ್ತು. ದಿನನಿತ್ಯ ಮೊಬೈಲ್ ಕಳುವು ಬಗ್ಗೆ ದೂರು ಬರಲಾರಂಭಿಸಿದರೂ ಆರೋಪಿಗಳು ಪತ್ತೆ ಆಗಿರಲಿಲ್ಲ. ಹೀಗಾಗಿ ಈ ಖದೀಮರ ಗ್ಯಾಂಗ್ ಹೆಡೆಮುರಿ ಕಟ್ಟಲು ವಿವೇಕನಗರದ ಖಾಕಿಪಡೆ ಕಾರ್ಯಾಚರಣೆಗಿಳಿದಿತ್ತು.
ಡಿಸಿಪಿ ಶ್ರೀನಿವಾಸ್ ಗೌಡ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅನಿಲ್ ಕುಮಾರ್, ಪಿಎಸ್ಐ ಪ್ರಕಾಶ್ ಹಾಗೂ ಕ್ರೈಂ ತಂಡಕಾರ್ಯಾಚರಣೆಗಿಳಿದಿತ್ತು. ವಿವೇಕನಗರದಲ್ಲಿ ಐಫೋನ್‌ಗಳನ್ನೇ ಹೆಚ್ಚು ಕದಿಯುತ್ತಿದ್ದ ಈ ಖತರ್ನಾಕ್ ಗ್ಯಾಂಗ್ ಕೊನೆಗೂ ಪೊಲೀಸರು ಬೀಸಿದ ಬಲೆ ಬಿದ್ದಿದ್ದಾರೆ.
Mysuru ಶ್ರೀರಾಂಪುರದಲ್ಲಿ ಸರಣಿ ಕಳ್ಳತನ
ಬರೋಬ್ಬರಿ 40 ಐಫೋನ್ ಸೇರಿದಂತೆ ಒಟ್ಟು 110 ಪೋನ್ ಗಳು ವಶಕ್ಕೆ ಪಡೆದಿರುವ ಪೊಲೀಸರು. ಮಹಮ್ಮದ್ ಸಕ್ಲೈನ್ , ಸುಹೇಲ್ , ಸಾಕೀಬ್ ಬಂಧಿತರು. ಎಲ್ಲರೂ ಬೆಂಗಳೂರಿನ ಗೋರಿಪಾಳ್ಯ(Goripalya) ನಿವಾಸಿಗಳು. ಮೊಬೈಲ್ ಕಳ್ಳತನ ಮಾಡುವುದು ಮುಖ್ಯ ಕಾಯಕ ಮಾಡಿಕೊಂಡಿದ್ದ ಖದೀಮರು. ದಿನ ಬೆಳಗಾದರೆ ಜನಜಂಗುಳಿ ಇರುವ ಕಡೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಇದು. ಬಂಧಿತರಿಂದ ಬರೋಬ್ಬರಿ 40 ಲಕ್ಷ ಮೌಲ್ಯದ ಮೊಬೈಲ್ ಗಳು ವಶಕ್ಕೆ ಪಡೆಯಲಾಗಿದೆ.
ವಿವೇಕನಗರ ಪೊಲೀಸರಿಂದ ಮುಂದುವರೆದ ತನಿಖೆ
ಮನೆ ಕಳ್ಳತನ: 30 ತೊಲೆ ಚಿನ್ನಾಭರಣ ಕಳವು
ಕೊಟ್ಟೂರು: ಪಟ್ಟಣದ ರೇಣುಕ ಬಡಾವಣೆಯ ಮನೆಯೊಂದರಲ್ಲಿ ದೊಡ್ಡ ಪ್ರಮಾಣದ ಕಳ್ಳತನ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ರೇಣುಕ ಬಡಾವಣೆಯಲ್ಲಿನ ವಾಸಿಯಾಗಿರುವ ಶಿಕ್ಷಕ ಪ್ರಕಾಶ ಪರಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಕಳ್ಳರು ಅವರ ಮನೆಗೆ ನುಗ್ಗಿ ಮನೆಯಲ್ಲಿನ ಬೀರುವಿನಲ್ಲಿದ್ದ 30.5 ತೊಲೆ ಚಿನ್ನ 550 ಗ್ರಾಂ ಬೆಳ್ಳಿ ಮತ್ತು .2 ಲಕ್ಷ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ಕೈಗೊಂಡಿದ್ದಾರೆ. ಕೊಟ್ಟೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udupi: ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳ್ಳತನ: ಇಬ್ಬರು ಕುಖ್ಯಾತ ಕಳ್ಳಿಯರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ