ಪ್ರೀತ್ಸೆ ಪ್ರೀತ್ಸೆ ಅಂತಾ ಹಿಂದೆ ಬಿದ್ದ, ಮದುವೆ ಆಗಿದೆ ಮಕ್ಕಳಿವೆ ಎಂದವಳು ಇನ್ನೊಬ್ಬನೊಂದಿಗೆ ಲವ್ವಿಡವ್ವಿ!

By Ravi Janekal  |  First Published Dec 21, 2023, 2:47 PM IST

ಮದುವೆಯಾಗಿದ್ರೂ ಕಾನ್‌ಸ್ಟೇಬಲ್ ಜೊತೆಗೆ ಹೋಂಗಾರ್ಡ್ಸ್ ರಾಣಿ ಲವ್ವಿಡವ್ವಿ ಬಳಿಕ ಮದುವೆಯಾಗಿದೆ ಮಕ್ಕಳಿದ್ದಾರೆಂದು ಅವೈಡ್ ಮಾಡಿದ್ದ. ಇದೇ ವಿಚಾರಕ್ಕೆ ನಡೆದ ಇಬ್ಬರ ನಡುವಿನ ಜಗಳದಲ್ಲಿ ಕಾನ್‌ಸ್ಟೇಬಲ್‌ಗೆ ಬೆಂಕಿ ಹಚ್ಚಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಬೆಂಗಳೂರು (ಡಿ.21): ಮದುವೆಯಾಗಿದ್ರೂ ಕಾನ್‌ಸ್ಟೇಬಲ್ ಜೊತೆಗೆ ಹೋಂಗಾರ್ಡ್ಸ್ ರಾಣಿ ಲವ್ವಿಡವ್ವಿ ಬಳಿಕ ಮದುವೆಯಾಗಿದೆ ಮಕ್ಕಳಿದ್ದಾರೆಂದು ಅವೈಡ್ ಮಾಡಿದ್ದ. ಇದೇ ವಿಚಾರಕ್ಕೆ ನಡೆದ ಇಬ್ಬರ ನಡುವಿನ ಜಗಳದಲ್ಲಿ ಕಾನ್‌ಸ್ಟೇಬಲ್‌ಗೆ ಬೆಂಕಿ ಹಚ್ಚಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಸವನಗುಡಿ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡ್ತಿರೋ ಸಂಜಯ್, ಇನ್ನು ಅದೇ ಠಾಣೆಯಲ್ಲಿ ಹೋಂ ಗಾರ್ಡ್ ಆಗಿರೋ ರಾಣಿ. ಇಬ್ಬರೂ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸಹಜವಾಗಿ ಇಬ್ಬರ ಮಧ್ಯೆ ಪರಸ್ಪರ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಹಲವು ತಿಂಗಳುಕಾಲ ಪ್ರೇಮದಲ್ಲಿ ಮರ ಸುತ್ತಿದ್ದಾರೆ. ಆದರೆ ಮದುವೆಯಾಗಿದೆ ಮಕ್ಕಳಾಗಿವೆ ಎಂಬ ಬಗ್ಗೆ ಮಾತನಾಡದಿದ್ದ ಹೋಂಗಾರ್ಡ್ ರಾಣಿ. ಲವ್ ಅಫೇರ್ ನಲ್ಲಿ ಬಿದ್ದು ಕೆಲ ತಿಂಗಳ ಕಾಲ ಕೈಹಿಡಿದು ಸುತ್ತಾಡಿದ್ದಾರೆ. ಇತ್ತ ಪೊಲೀಸ್ ಕಾನ್‌ಸಟೇಬಲ್ ಸಂಜಯ್, ಹೋಂ ಗಾರ್ಡ್ ರಾಣಿಯ ಪ್ರೇಮಪಾಶದಲ್ಲಿ ಬಿದ್ದಿದ್ದಾನೆ.

Tap to resize

Latest Videos

ಹೆಂಡತಿಯ ತಂಗಿಯ ಜೊತೆಗೆ ಬಾವನ ಲವ್ವಿಡವ್ವಿ..! ಹುಬ್ಬಳಿ ತಿರುಗಾಡಿಸಿದವ ಕೊನೆಗೇನಾದ?

ಅವೈಡ್ ಮಾಡಲು ಶುರುಮಾಡಿದ್ದ ರಾಣಿ:

ಪರಿಚಯವಾಗಿ ಪ್ರೇಮದಲ್ಲಿ ಕೈಹಿಡಿದು ಸುತ್ತಾಡಿದರೂ ತಾಸುಗಟ್ಟಲೆ ಏಕಾಂತದಲ್ಲಿ ಕಾಲಕಳೆದರೂ ಮದುವೆಯಾಗಿ ಮಕ್ಕಳಿವೆ ಎಂಬ ಮಾತನಾಡದ ರಾಣಿ. ಇತ್ತೀಚೆಗೆ ಪ್ರಿಯಕರನನ್ನ ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಮತ್ತಷ್ಟು ನೊಂದುಕೊಂಡಿದ್ದ ಕಾನ್‌ಸ್ಟೇಬಲ್.  ಆಕೆ ಮನವೋಲಿಸಲು ನಿನ್ನೆ ರಾತ್ರಿ ಮನೆಗೆ ಹೋಗಿದ್ದ ಕಾನ್ಸ್‌ಟೇಬಲ್. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. 

ಅವನಬಿಟ್ಟು ಇವನ್ಯಾರು, ರಾಣಿಗೆ ಎರಡನೇ ಪ್ರಿಯತಮ!

ಮದುವೆಯಾಗಿದ್ರೂ, ಮಕ್ಕಳಿದ್ರೂ ಅತ್ತ ಗಂಡನಿಗೆ ಮೋಸ ಮಾಡಿ ಕಾನ್‌ಸ್ಟೇಬಲ್ ಸಂಜಯ್ ಜೊತೆ ಲವ್ ನಲ್ಲಿ ಬಿದ್ದಿದ್ದ ರಾಣಿ. ಲವ್ ನಲ್ಲಿ ಬಿದ್ದಾಗಲೇ ಮತ್ತೊಬ್ಬ ಪ್ರಿಯಕರನ ಜೊತೆ ರಾಣಿ ಲವ್ವಿಡವ್ವಿ ಶುರು ಹಚ್ಚಿಕೊಂಡಿದ್ದಾಳೆ. ಇದರಿಂದ ಕೋಪಗೊಂಡಿದ್ದ ಪ್ರಿಯಕರ ಸಂಜಯ್. ಇದೇ ಕಾರಣಕ್ಕೆ ನಿನ್ನೆ ಸಂಜೆ ಮನೆಗೆ ಹೋಗಿ ಪ್ರಶ್ನೆ ಮಾಡಿದ್ದಾನೆ. ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನಿಗೆ ಬೆಂಕಿ ಹಚ್ಚಿದಳಾ ರಾಣಿ? ಕಳೆದ ಎರಡು ದಿನದ ಹಿಂದೆಯೇ ಸಂಜಯ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದ ರಾಣಿ. ಬಳಿಕ ಅಂದು ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಇಬ್ಬರು ಏಕಾಂತದಲ್ಲಿದ್ದಾಗಲೇ ರಾಣಿಗೆ ಕರೆಮಾಡಿದ್ದ ಚೇತನ್ ಎಂಬಾತ. ಆತ ಯಾರು ಎಂದು ಪ್ರಶ್ನೆ ಮಾಡಿದ್ದ ಸಂಜಯ್. ಮೊದಲಿಗೆ ಬಾಯಿಬಿಡದ ರಾಣಿ. ಬಳಿಕ ರಾಣಿ ಮೊಬೈಲ್ ಪಡೆದು ಚೆಕ್ ಮಾಡಿದಾಗ ಮತ್ತೋರ್ವನ ಜೊತೆ ಸಲುಗೆಯಿಂದ ಚಾಟಿಂಗ್ ಮಾಡಿರುವುದು ಬಯಲಾಗಿದೆ.

ಒಂದೇ ಬಿಲ್ಡಿಂಗ್​ನಲ್ಲಿ ವಾಸ, 2 ಲಕ್ಷದ ಕಾಲ್ಗೆಜ್ಜೆ... 'ಗಜ' ನಟಿ ನವ್ಯಾ ಲವ್ವಿಡವ್ವಿ ಬಗ್ಗೆ ಡ್ರೈವರ್​ ಬಾಯ್ಬಿಟ್ಟಿದ್ದೇನು?

ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಮತ್ತೋರ್ವನೊಂದಿಗೆ ಲವ್ವಿಡವ್ವಿ ಪ್ರಶ್ನಿಸಿದ್ದಕ್ಕೆ ಪೆಟ್ರೋಲ್ ಹಾಕಿ ಸುಟ್ಟ ಪ್ರಿಯತಮೆ. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಕಾನ್ಸ್‌ಟೇಬಲ್ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಪೇದೆ. ಸದ್ಯ ಗಯಾಳು ಕಾನ್ಸ್‌ಟೇಬಲ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲು ಈ ಪ್ರಕರಣ ಸಂಬಂಧ ಹನಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಇದು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಅನ್ನೋದು ತಿಳಿದು ಬಂದಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

click me!