ಗಜೇಂದ್ರ​ಗ​ಡ​ದಲ್ಲಿ ಎಗ್ಗಿಲ್ಲದೆ ನಡೆದಿದೆ ಅಕ್ರಮ ಪಟಾಕಿ ಮಾರಾಟ

Published : Aug 31, 2022, 03:45 AM IST
ಗಜೇಂದ್ರ​ಗ​ಡ​ದಲ್ಲಿ ಎಗ್ಗಿಲ್ಲದೆ ನಡೆದಿದೆ ಅಕ್ರಮ ಪಟಾಕಿ ಮಾರಾಟ

ಸಾರಾಂಶ

ಹಬ್ಬದಲ್ಲಿ ಅಕ್ರಮ ಪಟಾಕಿ ಮಾರಾಟ ಮಾಡಬಾರದು ಎಂದು ಸರ್ಕಾರದ ಆದೇಶವಿದ್ದರೂ ಸಹ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಪಟಾಕಿಗಳ ಮಾರಾಟ ನಡೆದಿದೆ. ಸಂಬಂಧಪಟ್ಟಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಪರವಾನಗಿ ಪಡೆದ ಪಟಾಕಿ ಮಾರಾಟಗಾರರ ಚಿಂತೆಗೆ ಕಾರಣವಾಗಿದೆ.

ಗಜೇಂದ್ರಗಡ (ಆ.31) ಹಬ್ಬದಲ್ಲಿ ಅಕ್ರಮ ಪಟಾಕಿ ಮಾರಾಟ ಮಾಡಬಾರದು ಎಂದು ಸರ್ಕಾರದ ಆದೇಶವಿದ್ದರೂ ಸಹ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಪಟಾಕಿಗಳ ಮಾರಾಟ ಎಗ್ಗಿಲ್ಲದೆ ನಡೆದಿದೆ. ಆದರೆ ಸಂಬಂಧಪಟ್ಟಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಪರವಾನಗಿ ಪಡೆದ ಪಟಾಕಿ ಮಾರಾಟಗಾರರ ಚಿಂತೆಗೆ ಕಾರಣವಾಗಿದೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಅನುಮತಿ!

ಪಟ್ಟಣದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ರೋಣ ಸಿಪಿಐ ಶಿವಾನಂದ ವಾಲಿಕಾರ ಅವರು ತಾಲೂಕಿನ ಅಧಿಕೃತ ಪಟಾಕಿ ಮಾರಾಟಗಾರರ ಸಭೆ ನಡೆಸಿ ಪಟಾಕಿ ಮಾರಾಟ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೇಚ್ಚರಿಕೆ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದ್ದರು.ಈ ಸಂದರ್ಭದಲ್ಲಿ ಗಜೇಂದ್ರಗಡ 3 ಅಧಿಕೃತ ಪಟಾಕಿ ಮಾರಾಟಗಾರರಿದ್ದೇವೆ. ಆದರೆ ಪಟ್ಟಣದಲ್ಲಿ ಅಕ್ರಮವಾಗಿ ಪಟಾಕಿ ಮಾರಾಟಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ.ನಾವು ಗದಗ ಹಾಗೂ ಹುಬ್ಬಳ್ಳಿಯ ಅಧಿಕೃತ ಪಟಾಕಿ ಮಾರಾಟಗಾರರಿಂದ ಪಟಾಕಿ ಆಮದು ಮಾಡಿಕೊಂಡು ಮಾರಾಟ ಮಾಡುವ ದರಕಿಂತ .10-20 ಕಡಿಮೆ ಬೆಲೆಗೆ ಅನಧಿಕೃತ ಪಟಾಕಿ ಮಾರಾಟಗಾರರು ಪಟಾಕಿಗಳನ್ನು ಪಟ್ಟಣದಲ್ಲಿ ಮಾರುತ್ತಾರೆ. ಹೀಗಾದರೆ ನಾವು ಹೇಗೆ ವ್ಯಾಪಾರ ಮಾಡಬೇಕು ಎಂದು ಅಳಲು ತೊಡಿಕೊಂಡಿದ್ದರು. ಪಟಾಕಿ ಮಾರಾಟಗಾರರ ಅಹವಾಲಿಗೆ ಸ್ಪಂದಿಸಿದ್ದ ಸಿಪಿಐ ಶಿವಾನಂದ ವಾಲಿಕಾರ ಅವರು, ಪಟ್ಟಣದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಮಾರಾಟ ಮಾಡುವವರ ಮಾಹಿತಿ ನೀಡಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ದುರ್ಗಾ ಸರ್ಕಲ್‌ ಬಳಿ, ಜೋಡು ರಸ್ತೆ ಹಾಗೂ ಕುಷ್ಟಗಿ ರಸ್ತೆ ಮತ್ತು ರೋಣ ರಸ್ತೆಯ ವಾಣಿಜ್ಯ ಮಳಿಗೆಯಲ್ಲಿ ಅಕ್ರಮವಾಗಿ ಕಾನೂನಿನ ಭಯವಿಲ್ಲದೆ ಅಕ್ರಮವಾಗಿ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ.

200 ವರ್ಷದಿಂದ ಇಲ್ಲದ ಗಣೇಶೋತ್ಸವ ಈಗ ಯಾಕೆ? ಈದ್ಗಾ ಮೈದಾನದಲ್ಲಿ ಯಥಾ ಸ್ಥಿತಿಗೆ ಸುಪ್ರೀಂ ಆದೇಶ!

ಪಟ್ಟಣದಲ್ಲಿ ಅಕ್ರಮವಾಗಿ ಪಟಾಕಿ ಮಾರಾಟಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಅಧಿಕೃತ ಪಟಾಕಿ ಮಾರಾಟಗಾರರಿಗಿಂತ ಕಡಿಮೆ ದರಕ್ಕೆ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದು ನಮ್ಮ ವ್ಯಾಪಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಸ್ಥಳೀಯ ಪೊಲೀಸ್‌ ಠಾಣೆಗೆ ಅಕ್ರಮ ಪಟಾಕಿ ಮಾರಾಟಗಾರರ ಮಾಹಿತಿ ನೀಡಿ ಅವರ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ.

ಪರವಾನಿಗೆ ಪಡೆದ ಪಟಾಕಿ ಮಾರಾಟಗಾರರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?