
ಬೈಲಹೊಂಗಲ(ಮಾ.13): ಮಗಳ ಭವಿಷ್ಯ ಉಜ್ವಲಗೊಳಿಸುವುದೇ ತಂದೆ-ತಾಯಿಗಳ ಕನಸಾಗಿರುತ್ತದೆ. ಆದರೆ, ಇಲ್ಲೊಬ್ಬ ಕಿರಾತಕ ತಂದೆಯೊಬ್ಬ ಆಸ್ತಿಯ ದುರಾಸೆಗೆ ಮಗಳ ಭವಿಷ್ಯವನ್ನೇ ಹಾಳು ಮಾಡಲು ಮುಂದಾಗಿದ್ದು, ಇದನ್ನು ಪ್ರಶ್ನಿಸಿದ ಪತ್ನಿಯ ಕೈಕಾಲು ಮುರಿದು ಹಾಕಿದ ಘಟನೆ ಮತಕ್ಷೇತ್ರದ ಹಾರೂಗೊಪ್ಪ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆ. ಬೀರಪ್ಪ ಕರೆನ್ನವರ ಹಲ್ಲೆ ಮಾಡಿದ ಆರೋಪಿ.
ನಡೆದಿದ್ದೇನು?:
ಹಲ್ಲೆಗೊಳಗಾದ ಮಾಯವ್ವ ಮತ್ತು ಆರೋಪಿ ಬೀರಪ್ಪ ಕರೇನ್ನವರ ಬೀರಪ್ಪ 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಅದೇ ಗ್ರಾಮದ ಸುಮಾರು 40 ಎಕರೆ ಆಸ್ತಿ ಹೊಂದಿದ್ದ ಕುಟುಂಬವೊಂದರ ಮನೆಯ ಮಾನಸಿಕ ಅಸ್ವಸ್ಥ ಯುವಕನಿಗೆ 13 ವರ್ಷದ ಪುತ್ರಿಯನ್ನು ಕೊಟ್ಟು ವಿವಾಹ ಮಾಡಲು ನಿರ್ಧರಿಸಿದ್ದ. ಇದಕ್ಕೆ ಪತ್ನಿ ಮಾಯವ್ವ ವಿರೋಧ ವ್ಯಕ್ತಪಡಿಸಿದ್ದು ಮಗಳು ಇನ್ನು ಚಿಕ್ಕವಳಿದ್ದಾಳೆ. ಚೆನ್ನಾಗಿ ಶಾಲೆ ಕಲಿಸೋಣ ಈಗಲೇ ವಿವಾಹ ಬೇಡ ಎಂದು ವಿರೋಧಿಸಿದ್ದಾಳೆ.
ಬೆಂಗಳೂರು ಹೊರ ವಲಯದಲ್ಲಿ ವಕೀಲರ ಬೆನ್ನಿಗೆ ಚಾಕು ಇರಿದ ದುಷ್ಕರ್ಮಿ!
ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡ ಬೀರಪ್ಪ ಕಟ್ಟಿಗೆಯಿಂದ ಮನಬಂದಂತೆ ಥಳಿಸಿ ಪತ್ನಿಯ ಕೈಕಾಲು ಮುರಿದು ಹಾಕಿದ್ದಲ್ಲದೆ, ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ. ಸದ್ಯ ಆಕೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಪತಿ, ಪತಿಯ ಸಹೋದರ ಹಾಗೂ ಅತ್ತೆ, ಮಾವ ಕಾರಣ ಎಂದು ಮಾಯವ್ವ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ