ಹೆಂಡತಿಯನ್ನ ಕೊಲೆ ಮಾಡಿದ ಗಂಡ| ಬೆಂಗಳೂರಿನ ಹೊಂಗಸಂದ್ರದ ಶ್ರೀನಿವಾಸ ಲೇಔಟ್‌ನಲ್ಲಿ ನಡೆದ ಘಟನೆ| ಹತ್ಯೆಯ ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ ಕುಡುಕ ಗಂಡ| ಆರೋಪಿಯನ್ನ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲು|
ಬೆಂಗಳೂರು(ಜೂ.12): ಮದ್ಯದ ಅಮಲಿನಲ್ಲಿದ್ದ ದಂಪತಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಹೊಂಗಸಂದ್ರದ ಶ್ರೀನಿವಾಸ ಲೇಔಟ್‌ನಲ್ಲಿ ನಡೆದಿದೆ. ಎಣ್ಣೆ ನಶೆಯಲ್ಲಿದ್ದ ಸುರೇಶ್ ಎಂಬಾತ ತನ್ನ ಪತ್ನಿ ವೆಂಕಟಲಕ್ಷ್ಮಿ ಯನ್ನು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಈ ಸಂಬಂಧ ಆರೋಪಿ ಸುರೇಸ್‌ನನ್ನ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ..?
ತಮಿಳುನಾಡು ಮೂಲದ ಆರೋಪಿ ಸುರೇಶ್(23) ಕಳೆದ 6 ವರ್ಷಗಳ ಹಿಂದೆ ವೆಂಕಟಲಕ್ಷ್ಮಿಯನ್ನ ಪ್ರೀತಿಸಿ ಮದುವೆಯಾಗಿದ್ದ. ವೃತ್ತಿಯಲ್ಲಿ ಸುರೇಶ್ ಟೈಲರ್ ಆಗಿ ಕೆಲಸ ಮಾಡುತ್ತಿದ್ದನು. ದಂಪತಿಗೆ ನಾಲ್ಕು ವರ್ಷದ ಒಂದು ಗಂಡು ಮಗೂ ಸಹ ಇದೆ. ಈಗ ಅಮ್ಮ ಕೊಲೆಯಾದರೇ, ತಂದೆ ಜೈಲು ಸೇರಿದ್ದರಿಂದ ಮಗು ಅನಾಥವಾಗಿದೆ.
ಸಾಯಿಸಿದರೂ ಕೊಡಲ್ಲ ಎಂದಿದ್ದಕ್ಕೆ ಸಾಯಿಸೇಬಿಟ್ಟ; ಪಾಪಿ ಪುತ್ರ
ಆರೋಪಿ ಸುರೇಶ್ ಇದೇ ತಿಂಗಳ 7 ರಂದು ಮಧ್ಯರಾತ್ರಿ ಪತ್ನಿ ಕೊಲೆ ಮಾಡಿ ಆತ್ಮಹತ್ಯೆ ಅಂತ ಕಥೆ ಕಟ್ಟಿದ್ದನು. ಭಾನುವಾರ ಹಿನ್ನಲೆ ಗಂಡ- ಹೆಂಡತಿ ಸೇರಿ ಕುಡಿದು, ಬಿರಿಯಾನಿ ತಿಂದು ಪಾರ್ಟಿ ಮಾಡಿದ್ದರು. ಈ ಮಧ್ಯೆ ಪತ್ನಿ ವೆಂಕಟಲಕ್ಷ್ಮಿ ಜಗಳ ತೆಗೆದಿದ್ದಳು. ನನ್ನನ್ನು ಚೆನ್ನಾಗಿ ನೀನು ನೋಡಿಕೊಳ್ಳುತಿಲ್ಲ ಅಂತ ಗಂಡನ ಜೊತೆ ಕಿರಿಕ್ ತಗೆದಿದ್ದಳು. ವೃತ್ತಿಯಲ್ಲಿ ಟೈಲರ್ ಆಗಿದೆಯಾ, ನಿನ್ನಿಂದ ನನ್ನ ಜೀವನ ಹಾಳಾಯ್ತು ಅಂತ ಗಂಡ ಜಗಳಕ್ಕೆ ಇಳಿದಿದ್ದಳು. ಹೀಗಾಗಿ ಗಂಡ ಸುರೇಶ್ ಜಗಳದ ನಡುವೆ ರೂಂಗೆ ತೆರಳಿ ಮಲಗಿದ್ದನು.
ಮತ್ತೆ ಮಧ್ಯರಾತ್ರಿ 1 ಗಂಟೆ ವೇಳೆ ಸುರೇಶ ರೂಂನಿಂದ ಹೊರ ಬಂದಿದ್ದನು, ಈ ವೇಳೆ ಮತ್ತೆ ವೆಂಕಟಲಕ್ಷ್ಮಿ ಗಂಡನ ಜೊತೆ ಕಿರಿಕ್ ತಗೆದಿದ್ದಳು. ಈ ವೇಳೆ ಕುಡಿತ ಮತ್ತಿನಲ್ಲಿದ್ದ ಇಬ್ಬರು ಚಾಕು ಹಿಡಿದು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಎಣ್ಣೆ ಮತ್ತಿನಲ್ಲಿದ್ದ ಸುರೇಶ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಅದು ಆತ್ಮಹತ್ಯೆ ಎಂದು ಸುರೇಸ್ ಬಿಂಬಿಸಿದ್ದನು. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಅಸಲಿ ಸತ್ಯ ಬಯಲಾಗಿದೆ.
ಮಹಿಳೆ ಸ್ವತಃ ಕುತ್ತಿಗೆ ಕುಯ್ದುಕೊಂಡಿಲ್ಲ, ಮತ್ತೊಬ್ಬರು ಕತ್ತು ಕೊಯ್ದಿದ್ದಾರೆ ಎಂಬ ವರದಿ ಬಂದಿತ್ತು. ಈ ಹಿನ್ನಲೆಯಲ್ಲಿ ಪತಿ ಸುರೇಶ್ ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಸದ್ಯ ಆರೋಪಿ ಸುರೇಶನನ್ನ ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.