ಮೂಡಲಪಾಳ್ಯದ ಅಕ್ಷಯ್ ಕುಮಾರ್ ಎಂಬಾತನ ವಿರುದ್ಧ ಆಡುಗೋಡಿ ಪೊಲೀಸರು ಪ್ರಕರಣ ದಾಖಲು| ಸಂತ್ರಸ್ತೆ 2018ರಲ್ಲಿ ತನ್ನ ಸ್ನೇಹಿತರ ಜೊತೆ ಪಾಂಡಿಚೇರಿಗೆ ಪ್ರವಾಸಕ್ಕೆ ಹೋಗಿದ್ದಳು| ಈ ವೇಳೆ ಅಕ್ಷಯ್ ಕುಮಾರ್, ತಾನು ಬೆಂಗಳೂರಿನವನು ಎಂದು ಯುವತಿಯನ್ನು ಪರಿಚಯಿಸಿಕೊಂಡಿದ್ದ|ಇಬ್ಬರು ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ಹೀಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು|
ಬೆಂಗಳೂರು(ಜೂ.12): ಪ್ರವಾಸಕ್ಕೆ ತೆರಳಿದ್ದ ವೇಳೆ ಯುವತಿಗೆ ಪರಿಚಯವಾಗಿದ್ದ ಯುವಕನೊಬ್ಬ ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆಡುಗೋಡಿಯ ಬಾಲಪ್ಪ ಲೇಔಟ್ ನಿವಾಸಿ 32 ವರ್ಷದ ಯುವತಿ ಕೊಟ್ಟ ದೂರಿನ ಮೇರೆಗೆ, ಮೂಡಲಪಾಳ್ಯದ ಅಕ್ಷಯ್ ಕುಮಾರ್ ಎಂಬಾತನ ವಿರುದ್ಧ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.
undefined
ಸಂತ್ರಸ್ತೆ 2018ರಲ್ಲಿ ತನ್ನ ಸ್ನೇಹಿತರ ಜೊತೆ ಪಾಂಡಿಚೇರಿಗೆ ಪ್ರವಾಸಕ್ಕೆ ಹೋಗಿದ್ದಳು. ಈ ವೇಳೆ ಅಕ್ಷಯ್ ಕುಮಾರ್, ತಾನು ಬೆಂಗಳೂರಿನವನು ಎಂದು ಯುವತಿಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರು ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ಹೀಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು.
ಛಾಯಾಗ್ರಾಹಕನ ವಿರುದ್ಧ ವಂಚನೆ ಕೇಸ್; ಪ್ರೇಮ ಕಹಾನಿಗೆ ಬಿತ್ತು ಬ್ರೇಕ್?
ಆರೋಪಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಸಾಧಿಸಿದ್ದ. ಅಲ್ಲದೆ, ಬ್ಯಾಂಕಿನಲ್ಲಿ ಸಾಲ ಪಡೆದು ಆತನಿಗೆ ಕಾರು ಕೊಡಿಸಿದ್ದಳು. ಹುಟ್ಟುಹಬ್ಬದ ಆಚರಣೆಗೆ ದುಬಾರಿ ಬೆಲೆಯ ಮೊಬೈಲ್, ಬಟ್ಟೆ ಉಡುಗೊರೆಯಾಗಿ ಕೊಟ್ಟಿದ್ದಳು. ಹಂತ ಹಂತವಾಗಿ ಹಣ ಪಡೆದಿದ್ದ ಆರೋಪಿ ಮದುವೆಯಾಗದೇ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.