ಬೆಂಗಳೂರು(ಜೂ.11)  ಕಾಮಾಕ್ಷಿಪಾಳ್ಯ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು  ಪಾಪಿ ಮಗ ಹಣಕ್ಕಾಗಿ ಹೆತ್ತ ತಂದೆ ತಾಯಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಪುತ್ರ ಸಂತೋಷ್  ವಿಪರೀತ ಸಾಲ ಮಾಡಿಕೊಂಡಿದ್ದ. ತಾಯಿ ಸರಸ್ವತಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದರು 

ನಿವೃತ್ತಿಗೊಂಡ ನಂತರ ಒಂದಷ್ಟು ಹಣ ಆಪತ್ತಿಗೆ ಆಗುತ್ತದೆ ಎಂದು ಇಟ್ಟುಕೊಂಡಿದ್ದರು. ಸರಸ್ವತಿಯವರ ಬಳಿ ಪದೇ ಪದೇ ಹಣ ನೀಡುವಂತೆ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ತಾಯಿ ಸರಸ್ವತಿ ಹಾಗೂ ಸಂತೋಷ್ ನಡುವೆ ಜಗಳವಾಗಿದೆ. ಸಾಯಿಸಿದರೂ ಹಣ ಕೊಡಲ್ಲ ಎಂದು ತಾಯಿ ಹೇಳಿದ್ದಕ್ಕೆ ಕೊಂದೇ ಬಿಟ್ಟಿದ್ದಾನೆ.

ಕೊಲೆ ಮಾಡಿ ಶ್ರೀರಂಗಪಟ್ಟಣ ಸೇತುವೆಯಿಂದ ಜಿಗಿದ

ಜೂನ್ 10 ನೇ ತಾರೀಖು ನಸುಕಿನ ಜಾವ 3ಗಂಟೆ ಸಮಯದಲ್ಲಿ ಇಬ್ಬರನ್ನು ಹತ್ಯೆ ಮಾಡಿದ್ದ ಪುತ್ರ ಸಂತೋಷ್‌ ಬಳಿಕ ಶ್ರೀರಂಗಪಟ್ಟಣಕ್ಕೆ ತೆರಳಿದ್ದ.  ಶ್ರೀರಂಗಪಟ್ಟದಲ್ಲಿ ತಂದೆ ತಾಯಿಯ ಪಿಂಡವನ್ನು ನದಿಗೆ ಬಿಟ್ಟಿದ್ದ.  ಬಳಿಕ ತಾನು ಆತ್ಮಹತ್ಯೆಗೆ ಯತ್ನಸಿದ್ದ. ಶ್ರೀರಂಗಪಟ್ಟಣದ ಬ್ರಿಡ್ಜ್ ಮೇಲಿಂದ ಕೆಳಗೆ ಬಿದ್ದ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.  ಆದರೆ ಕೆಳಗೆ ಬಿದ್ದವನು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದ.  

ನರಸಿಂಹರಾಜು (70) ಮತ್ತು ಅವರ ಪತ್ನಿ ಸರಸ್ವತಿ (64) ಕೊಲೆಯಾಗಿದ್ದರು.  ಆಡಿಟರ್‌ ವೃತ್ತಿ ಮಾಡುತ್ತಿದ್ದ ಪುತ್ರ ಸಂತೋಷ್‌ಗೆ ವಿವಾಹವಾಗಿದ್ದು ಗರ್ಭಿಣಿ ಪತ್ನಿ ತವರಿಗೆ ತೆರಳಿದ್ದ ವೇಳೆ ಘಟನೆಯಾಗಿತ್ತು.