
ಕಲಬುರಗಿ(ಜ.06): ಪತ್ನಿ ಜೊತೆ ಜಗಳವಾಡಿದ ಪತಿಯನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ದೂರ (ಕೆ) ತಾಂಡಾದ ವಕೀಲ ದೇನು ಪವಾರ್ ಎಂಬುವವರನ್ನೆ ಅಪಹರಣ ಮಾಡಲಾಗಿದೆ ಎಂದು ಅವರ ಸಹೋದರ ಶ್ರೀಮಂತ ಪವಾರ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೇನು ಪವಾರ ಹಾಗೂ ನೀಲಾಬಾಯಿ ಅವರು 14 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಇದರಿಂದ ಜಗಳವಾಗಿ ನೀಲಾಬಾಯಿ ಮೂವರು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ಸಂಧಾನ ಮಾಡಲಾಗಿದೆ. ಇದಾದ ನಂತರವು ಕಿರಿಕಿರಿಯಾಗಿದ್ದು, ನೀಲಾಬಾಯಿ ಸಹೋದರರಾದ ಜೀವನ, ಸಾಗರ, ಬಬಲು, ಆನಂದ ಅವರು ದೇನು ಪವಾರ ಜೊತೆ ಜಗಳ ತೆಗೆದು ಧಮಕಿ ಹಾಕಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ: ಅಪ್ರಾಪ್ತ ಭಿಕ್ಷುಕಿಯ ಅಪಹರಣ ಶಂಕೆ, ಜನರಿಂದ ನಾಲ್ವರು ಪ್ರವಾಸಿಗರಿಗೆ ಗೂಸಾ
ಜ.3ರಂದು ನಗರದ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ವೇಳೆ ನಾಲ್ವರು ಅಪರಿಚಿತರು ಆಟೋದಲ್ಲಿ ಬಂದು ಕಣ್ಣು ಕಟ್ಟಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಅವರಿಂದ ತಪ್ಪಿಸಿಕೊಂಡು ಕಂಟಿಯಲ್ಲಿ ಬಿದ್ದಿದ್ದಾಗಿ ದೇನು ಪವಾರ ತನ್ನ ಇನ್ನೊಬ್ಬ ಸಹೋದರ ರವಿಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ದೇನು ಪವಾರ ಸಹೋದರ ಶ್ರೀಮಂತ ಪವಾರ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ನೀಲಾ ಬಾಯಿ ಸಹೋದರರಾದ ಜೀವನ, ಬಬಲು, ಸಾಗರ ಬಾಬು, ತಾಯಿ ಜೈನಾಬಿ ವಿರುದ್ಧ ದೂರು ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ