ಹಾಸ್ಟೆಲ್‌ನಿಂದ ಕಾಣೆಯಾದ 26 ಬಾಲಕಿಯರು: ಬಲವಂತದ ಮತಾಂತರ ಆರೋಪ

By BK AshwinFirst Published Jan 6, 2024, 7:45 PM IST
Highlights

ಎನ್‌ಜಿಒ ಮಕ್ಕಳನ್ನು ರಕ್ಷಿಸಿ ಅಕ್ರಮ ಮಕ್ಕಳ ಮನೆಯಲ್ಲಿ ಇರಿಸುತ್ತಿರುವುದು ಕಂಡುಬಂದಿದೆ ಎಂದು ಮಧ್ಯ ಪ್ರದೇಶದ ಮಕ್ಕಳ ರಕ್ಷಣಾ ಆಯೋಗ ತಿಳಿಸಿದೆ. ಅಲ್ಲದೆ, ಬಲವಂತದ ಮತಾಂತರ ಮಾಡಿರುವ ಆರೋಪವೂ ಕೇಳಿಬಂದಿದೆ.

ಭೋಪಾಲ್‌ (ಜನವರಿ 6, 2024): ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಹಾಸ್ಟೆಲ್‌ ಅಥವಾ ಮಕ್ಕಳ ಮನೆಯಿಂದ ಸುಮಾರು 26 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಭೋಪಾಲ್‌ನ ಪರ್ವಾಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಮಕ್ಕಳ ಮನೆಯಿಂದ 26 ಹುಡುಗಿಯರು ನಾಪತ್ತೆಯಾದ ಪ್ರಕರಣವು ನನ್ನ ಗಮನಕ್ಕೆ ಬಂದಿದೆ ಎಂದು ಮಾಜಿ ಸಿಎಂ ಶಿವರಾಜ್‌ ಸಿಂಗ್ ಚೌಹಾಣ್ ಎಕ್ಸ್‌ (ಟ್ವಿಟ್ಟರ್‌ನಲ್ಲಿನ)  ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ವಿಷಯದ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ, ಸರ್ಕಾರವು ಗಮನಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದೂ ಅವರು ಹೇಳಿದರು.

ಇದನ್ನು ಓದಿ: ಹುಬ್ಬಳ್ಳಿ ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿದ ಮಧ್ಯಪ್ರದೇಶ ಮುಸ್ಲಿಂ ಧರ್ಮಗುರು ಬಂಧನ!

ಎನ್‌ಜಿಒ ಮಕ್ಕಳನ್ನು ರಕ್ಷಿಸಿ ಅಕ್ರಮ ಮಕ್ಕಳ ಮನೆಯಲ್ಲಿ ಇರಿಸುತ್ತಿರುವುದು ಕಂಡುಬಂದಿದೆ ಎಂದು ಮಕ್ಕಳ ರಕ್ಷಣಾ ಆಯೋಗದ ತಂಡವು ಭೋಪಾಲ್‌ನಿಂದ 20 ಕಿ.ಮೀ ದೂರದಲ್ಲಿರುವ ಆಂಚಲ್ ಬಾಲಕಿಯರ ಹಾಸ್ಟೆಲ್‌ಗೆ ಹೋದಾಗ ಕಂಡುಕೊಂಡಿತ್ತು. ಸುಮಾರು 4 - 5 ವರ್ಷಗಳಿಂದ ಇಲ್ಲಿ ಬಾಲಕಿಯರು ಇದ್ದಾರೆ ಎಂದೂ ತಿಳಿದುಬಂದಿದೆ. 

ಹಾಗೂ, ಈ ಹಾಸ್ಟೆಲ್‌ನಲ್ಲಿ ಹುಡುಗಿಯರು ಕ್ರೈಸ್ತ ಆಚರಣೆಗಳನ್ನು ಬಲವಂತವಾಗಿ ಅಭ್ಯಾಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲಿ 68 ಮಕ್ಕಳಿದ್ದಾರೆ ಎಂದು ದಾಖಲೆಗಳು ತೋರಿಸುತ್ತವೆ. ಆದರೆ 41 ಹುಡುಗಿಯರು ಮಾತ್ರ ಪತ್ತೆಯಾಗಿದ್ದಾರೆ. ಆ ಹುಡುಗಿಯರು ಮಧ್ಯಪ್ರದೇಶ, ಗುಜರಾತ್, ಜಾರ್ಖಂಡ್ ಮೂಲದವರು ಎಮದೂ ವರದಿಯಾಗಿದೆ.

ಕುಲದೇವತೆ ಎಂದು ಡೈನೋಸಾರ್‌ ಮೊಟ್ಟೆ ಪೂಜೆ ಮಾಡ್ತಿದ್ದ ಭಾರತದ ಈ ಕುಟುಂಬ!

ಈ ಮಧ್ಯೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ ಸಹ ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ ವೀರ ರಾಣಾ ಅವರಿಗೆ ಪತ್ರ ಬರೆದಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಕೋರಿದ್ದಾರೆ. ಹಾಗೂ, 2015ರ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಭೋಪಾಲ್‌ನ ಪರ್ವಾಲಿಯಾ ಸಡಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಾಲನ್ಯಾಯ ಕಾಯ್ದೆಯಡಿ ಮಕ್ಕಳ ಮನೆಯನ್ನು ನಡೆಸಲಾಗುತ್ತಿಲ್ಲ ಮತ್ತು ಅದನ್ನು ನೋಂದಾಯಿಸಲಾಗಿಲ್ಲ ಎಂದು ಎಫ್‌ಐಆರ್ ಹೇಳುತ್ತದೆ.

ಇನ್ನು, ಇತರೆ ರಾಜ್ಯಗಳಿಂದ ಇಲ್ಲಿಗೆ ಮಕ್ಕಳು ಹೇಗೆ ಬಂದರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಕಾಣೆಯಾಗಿರುವ ಮಕ್ಕಳು ಎಲ್ಲಿ ಹೋಗಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಾಗಿದೆ ಎಂದೂ ಮಧ್ಯಪ್ರದೇಶದ ಮಕ್ಕಳ ಆಯೋಗದ ಸದಸ್ಯೆ ನಿವೇದಿತಾ ಶರ್ಮಾ ಹೇಳಿದ್ದಾರೆ. ಇನ್ನೊಂದೆಡೆ, ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

click me!