ಧಾರವಾಡ: ಹೆಂಡ್ತಿ ಕಿರುಕುಳಕ್ಕೆ ಬೇಸತ್ತು ಗಂಡ ಆತ್ಮಹತ್ಯೆ!

By Girish Goudar  |  First Published Jan 14, 2025, 9:53 AM IST

ಡೆತ್‌ನೋಟ್ ಶಿವರಾಜನೇ ಬರೆದಿದ್ದು ಎಂದು ಎಫ್‌ಎಸ್‌ಎಲ್‌ ವರದಿ ಬಂದ ಹಿನ್ನೆಲೆಯಲ್ಲಿ ಪತ್ನಿಯೇ ಸಾವಿಗೆ ಕಾರಣ ಎಂದು ಗರಗ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.  
 


ಧಾರವಾಡ(ಜ.14):  ಪತ್ನಿಯ ಕಿರುಕುಳಕ್ಕೆ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೇಲೂರು ಗ್ರಾಮದ ನಡೆದಿದೆ. ಶಿವರಾಜ್ ಎತ್ತಿನಗುಡ್ಡ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಶಿವರಾಜ್ ಎತ್ತಿನಗುಡ್ಡ ಕಳೆದ ವರ್ಷದ ನವೆಂಬರ್ 16 ರಂದು ನೇಣಿಗೆ ಶರಣಾಗಿದ್ದರು. ಸಾಯುವ ಮುನ್ನ ಶಿವರಾಜ್ ಡೆತ್‌ನೋಟ್ ಬರೆದಿದ್ದರು.

ಆಗ ಗರಗ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಡೆತ್‌ನೋಟ್ ಶಿವರಾಜನೇ ಬರೆದಿದ್ದು ಎಂದು ಎಫ್‌ಎಸ್‌ಎಲ್‌ ವರದಿ ಬಂದ ಹಿನ್ನೆಲೆಯಲ್ಲಿ ಪತ್ನಿಯೇ ಸಾವಿಗೆ ಕಾರಣ ಎಂದು ಗರಗ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.  

Tap to resize

Latest Videos

ಅಣ್ಣ-ಅಮ್ಮ ಸೇರಿ ತನ್ನ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಮಾರಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ!

ಶಿವರಾಜ್ ಎತ್ತಿನಗುಡ್ಡ ಕಳೆದ 2024 ರ ಜುಲೈನಲ್ಲಿ ಮದುವೆಯಾಗಿದ್ದರು. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೈಸ್ಕೂಲ್ ಶಿಕ್ಷಕಿ ಯಲ್ಲವ್ವ ಬೆಂಗೇರಿ ಎಂಬುವವಳ‌ ಜೊತೆ ಮದುವೆಯಾಗಿದ್ದರು. ಮದುವೆಯ ನಂತರ ಯಲ್ಲವ್ವ ಸರಿಯಾಗಿ ಜೀವನ ನಡೆಸದೇ ಶಿವರಾಜ್‌ನನ್ನ ಬಿಟ್ಟು ಪೋಷಕರ ಮನೆಗೆ ಹೋಗಿದ್ದರು. 

ಯಲ್ಲವ್ವ ಬೆಂಗೇರಿ ಬ್ಯಾಹಟ್ಟಿಯಲ್ಲಿ ಶಿಕ್ಷಿಕಿಯಾಗಿದ್ದಾರೆ. ಮಾನಸಿಕ‌ ಹಿಂಸೆಯಿಂದ ಶಿವರಾಜ್ ಸಾವಾಗಿದೆ ಎಂದು ಶಿವರಾಜ್ ಸಹೋದರಿಯರು ಆರೋಪಿಸಿದ್ದರು. ಮದುವೆಯಾದ 15  ದಿನದಲ್ಲೇ ಯಲ್ಲವ್ವ ಪೋಷಕರ‌ ಮನೆಗೆ ಹೋಗಿದ್ದರು. ಶಿವರಾಜ್ ಆಗ ಪತ್ನಿಗೆ ಮನೆಗೆ ಕರೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಧಾರವಾಡದಲ್ಲಿ ಬೇರೆ ಮನೆ ಮಾಡಿದರೆ ಮಾತ್ರ ನಾನು ವಾಪಸ್ ಬರುತ್ತೇನೆ ಎಂದು ಯಲ್ಲವ್ವ ಹೇಳಿದ್ದರು. ಮನೆ ಬೇರೆ ಮಾಡಿದರೂ ಪತ್ನಿ ಬರಲೇ‌‌ ಇಲ್ಲ. ಹೀಗಾಗಿ ನನ್ನ ಸಾವಿಗೆ ಪತ್ನಿ ಕಾರಣ, ನನ್ನ ಸಾವಿನ ನಂತರ ಆಕೆಗೆ ಶಿಕ್ಷೆಯಾಗಲಿ ಎಂದು ಶಿವರಾಜ್ ಡೆತ್ ನೋಟ್ ಬರೆದಿಟ್ಟಿದ್ದರು. 

ಯಲ್ಲವ್ವಳಿಗೆ ಶಿಕ್ಷೆ ಆಗಲಿ ಎಂದು ಮೃತ ಶಿವರಾಜ್ ಸಹೋದರಿಯರು ಒತ್ತಾಯಿಸಿದ್ದಾರೆ. ಶಿಕ್ಷಕಿಯಾಗಿರುವ ಯಲ್ಲವ್ವಳಿಗೆ ಅಮಾನತ್ತು ಮಾಡುವಂತೆ ಶಿಕ್ಷಣ ಇಲಾಖೆಗೆ ಶಿವರಾಜ್ ಸಹೋದರಿಯರು ಒತ್ತಾಯಿಸಿದ್ದಾರೆ. ಆಸ್ತಿಗಾಗಿ ನನ್ನ ಸಹೋದರನಿಗೆ‌ ಕಿರುಕುಳ ಕೊಟ್ಟಿದ್ದಕ್ಕೆ ಆತ ನೇಣು ಹಾಕಿಕೊಂಡಿದ್ದಾನೆ ಎಂದು ಮೃತ ಶಿವರಾಜ್ ಸಜೋದರಿಯರು ಆರೋಪಿಸಿದ್ದಾರೆ. 

click me!