ಜಾನುವಾರು ಮೇಯಿಸಲು ಹೋದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಈಶ್ವರನಗರದ ನಿವಾಸಿ ಮಹಾದೇವಿ ನೀಲನ್ನವರ (mahadevi nilannavar) ಮೃತ ಮಹಿಳೆ.
ಹುಬ್ಬಳ್ಳಿ:ಜಾನುವಾರು ಮೇಯಿಸಲು ಹೋದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಈಶ್ವರನಗರದ ನಿವಾಸಿ ಮಹಾದೇವಿ ನೀಲನ್ನವರ (mahadevi nilannavar) ಮೃತ ಮಹಿಳೆ. ಆಕೆ ಮನೆಯಿಂದ ಊಟ ಮಾಡಿಕೊಂಡು ಜಾನುವಾರು ಮೇಯಿಸಲು ಹೊಲಕ್ಕೆ ಹೋಗಿದ್ವಳು ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಸಮೀಪದ ಕಾಡಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಂಬೂರದ ಗ್ರಾಮದ ಹೊರವಲಯದಲ್ಲಿ ಈ ಅನಾಹುತ ನಡೆದಿದೆ.
ಜಾನುವಾರು ಮೇಯಿಸಲು ಹೋದ ಈಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಗುರುತು ಪತ್ತೆಯಾಗದ ರೀತಿಯಲ್ಲಿ ಈಕೆಯ ಶವ ಪತ್ತೆಯಾಗಿದ್ದು, ಈಕೆಯ ಮನೆಯವರು ನಮಗೆ ಯಾರ ಮೇಲೆಯೂ ಅನುಮಾನ ಇಲ್ಲ ಎಂದು ಹೇಳಿದ್ದಾರೆ.
ನೂಪುರ್ ಬೆಂಬಲಿಸಿದ ಮಹಾರಾಷ್ಟ್ರ ಮೆಡಿಕಲ್ ಸ್ಟೋರ್ ಮಾಲೀಕನ ಇರಿದು ಕೊಲೆ, NIA ತನಿಖೆಗೆ ಆದೇಶ!
ಪೊಲೀಸ್ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಈ ಕುರಿತು ಕಲಘಟಗಿ (Kalagatagi) ಪೊಲೀಸ್ ಠಾಣೆಯಲ್ಲಿ(police Station) ಪ್ರಕರಣ ದಾಖಲಾಗಿದ್ದು, ಮಹಿಳೆಯ (woman) ಸ್ಥಿತಿಯನ್ನು ನೋಡಿ ಕುಟುಂಬದವರಿಗೆ ಮುಗಿಲು ಕಳಚಿ ಹೆಗಲ ಮೇಲೆ ಬಿದ್ದಂತಾಗಿದೆ.
ಕನ್ಹಯ್ಯಲಾಲ್ ಹಂತಕರಿಗೆ ಎನ್‌ಐಎ ಫುಲ್ ಡ್ರಿಲ್, ಕೋರ್ಟ್‌ನಲ್ಲಿ ವಕೀಲರಿಂದಲೇ ಹಲ್ಲೆ, ವಿಡಿಯೋ ವೈರಲ್!