Hubli Crime News: ಗ್ರಾಪಂ ಸದಸ್ಯ ದೀಪಕ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ
ಹುಬ್ಬಳ್ಳಿ (ಅ. 01): ಕಳೆದ ಜುಲೈ 4ರಂದು ಕೊಲೆಯಾಗಿದ್ದ ಗ್ರಾಪಂ ಸದಸ್ಯ ದೀಪಕ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೂ ಮುನ್ನ ಪುಷ್ಪಾ ಡೆತ್ ನೋಟ್ ಬರೆದಿಟ್ಟಿದ್ದು, ಡೆತ್ ನೋಟಿನಲ್ಲಿ ಸಾವಿಗೆ ಪುಷ್ಪಾ ಕಾರಣ ತಿಳಿಸಿದ್ದಾರೆ. ಜುಲೈ 4 ರಂದು ದೀಪಕ ಪಟದಾರಿ ಕೊಲೆಯಾಗಿತ್ತು. ಸೆಪ್ಟೆಂಬರ್ 28ಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಕುಟುಂಬದ ವಿರುದ್ಧವೆ ಪುಷ್ಪಾ ಡೆತ್‌ನೋಟ್ ಬರೆದಿದ್ದಾರೆ. ತಂದೆ, ಸಹೋದರರ ವಿರುದ್ಧವೇ ಪುಷ್ಪಾ ಡೆತ್ ನೋಟ್ ಬರೆದಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ದೀಪಕ ಪಟದಾರಿ ಕೊಲೆ: ಸಿಐಡಿ ತನಿಖೆ ಶುರು: ತಾಲೂಕಿನ ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ ಪಟದಾರಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಶುರು ಮಾಡಿದ್ದಾರೆ. ಇಬ್ಬರು ಡಿವೈಎಸ್ಪಿ ಅಧಿಕಾರಿಗಳ ನೇತೃತ್ವದಲ್ಲಿ ಆರು ಜನರ ತಂಡವು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದಿದೆ. ರಾಯನಾಳ ಬಳಿ ಜು. 4ರಂದು ದೀಪಕ ಪಟದಾರಿ ಎಂಬುವನನ್ನು 8ರಿಂದ 10 ಜನರ ಗುಂಪು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗೋಕಾಕ: ಬೇರೊಬ್ಬರ ಮನೆ ಮುಂದೆ ಮುಸ್ಲಿಂ ಮಹಿಳೆ ಆತ್ಮಹತ್ಯೆ
ಪೊಲೀಸರು ಐವರನ್ನು ಬಂಧಿಸಿದ್ದರು. ಆದರೆ ಮುಖ್ಯ ಆರೋಪಿಗಳು ಬಂಧಸಿಲ್ಲ ಎಂದು ಪಟದಾರಿ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ, ಈ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಆಗ್ರಹಿಸಿ ಸರ್ಕಾರ ಹಾಗೂ ಡಿಐಜಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವೂ ಈ ಪ್ರಕರಣವನ್ನು ಸಿಐಡಿಗೆ ವಹಿಸಿ ಬುಧವಾರ ಆದೇಶ ಹೊರಡಿಸಿತ್ತು. ಇದೀಗ ತನಿಖೆ ಶುರುವಾದಂತಾಗಿದೆ.
ತವರಿಗೆ ಶವ ಹಸ್ತಾಂತರ: ಆತ್ಮಹತ್ಯೆ ಮಾಡಿಕೊಂಡ ಪುಷ್ಪಾಳ ಮೃತದೇಹ ಒಯ್ಯುವ ಸಲುವಾಗಿ ಪಟದಾರಿ ಕುಟುಂಬ ಹಾಗೂ ತವರು ಮನೆಯವರ ಮಧ್ಯೆ ಇಲ್ಲಿಯ ಕಿಮ್ಸ್ ಶವಾಗಾರ ಬಳಿ ತೀವ್ರ ವಾಗ್ವಾದ ನಡೆಯಿತು. ಗಂಡನ ಮನೆಯವರು ತಾವೇ ಶವವನ್ನು ಒಯ್ದು ಅಂತ್ಯಸಂಸ್ಕಾರ ಮಾಡುತ್ತೇವೆ ಎಂದರೆ, ನಿಮ್ಮ ಕಿರುಕುಳದಿಂದಲೇ ನಮ್ಮ ಮಗಳು ಮೃತಪಟ್ಟಿದ್ದಾಳೆ. ಹೀಗಾಗಿ ನಿಮಗೆ ಒಯ್ಯಲು ಬಿಡುವುದಿಲ್ಲ ಎಂದು ತವರು ಮನೆಯವರು ಪಟ್ಟು ಹಿಡಿದಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಆತ್ಮಹತ್ಯೆ ಪ್ರಕರಣದಲ್ಲಿ ಪಟದಾರಿ ಕುಟುಂಬದವರು ಆರೋಪಿಗಳಾಗಿದ್ದಾರೆ. ಆದಕಾರಣ ಪಟದಾರಿ ಕುಟುಂಬದವರಿಗೆ ಶವ ಹಸ್ತಾಂತರಿಸಲು ಬರುವುದಿಲ್ಲ. ಹೀಗಾಗಿ ದೂರದಾರರಾದ ಪುಷ್ಪಾಳ ತಂದೆಗೆ ಶವ ಹಸ್ತಾಂತರಿಸಿದರು.