
ದಾವಣಗೆರೆ (ಅ. 01): ಬಾಲಕಿಗೆ ಲೈಂಗಿಕ ಕಿರುಕುಳ (Sexual Assault) ನೀಡಿದ ಆರೋಪ ಮೇಲೆ ಶಿಕ್ಷಕನ ಬಟ್ಟೆ ಬಿಚ್ಚಿಸಿ ಗ್ರಾಮಸ್ಥರು ಥಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ತರಗತಿ ಮುಗಿದ ನಂತರ ವಿದ್ಯಾರ್ಥಿನಿಗೆ ಶಿಕ್ಷಕ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿಲಾಗಿದೆ. ಶಿಕ್ಷಕ ಹಲವು ದಿನಗಳಿಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ ನಂತರ ಶಾಲೆಗೆ ಬಂದ ಪೋಷಕರು ಸರ್ಕಾರಿ ಶಾಲೆಯ ಶಿಕ್ಷಕ ಲೋಕೇಶ್ ಹೊದಿಗೆರೆಗೆ ಥಳಿಸಿದ್ದಾರೆ.
ಶಿಕ್ಷಕನ ಬಟ್ಟೆ ಬಿಚ್ಚಿಸಿ ಗ್ರಾಮಸ್ಥರ ಹೊಡೆದಿದ್ದಾರೆ. ಸ್ಥಳಕ್ಕೆ ಚನ್ನಗಿರಿ ಬಿಇಒ ಮಂಜುನಾಥ್ ಭೇಟಿ ನೀಡಿದ್ದು, ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಲೋಕೇಶ್ ಅಮಾನತಿಗೆ ಅದೇಶಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ.
ಮಂಗಳೂರು: ಯುವತಿ ಜೊತೆ ಅನುಚಿತ ವರ್ತನೆ: ಯುವಕನಿಗೆ ಸಾರ್ವಜನಿಕರಿಂದ ಗೂಸಾ: ಮೂಲ್ಕಿ ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ಕೈ ಹಾಕಿದ್ದಕ್ಕೆ ಸಾರ್ವಜನಿಕರು ಯುವಕನನ್ನು ಬಸ್ಸಿನಿಂದ ಇಳಿಸಿ ಗೂಸಾ ನೀಡಿದ ಘಟನೆ ಸೋಮವಾರ ನಡೆದಿದೆ. ಮಂಗಳೂರಿನಿಂದ ಮೂಲ್ಕಿ ಕಡೆಗೆ ಬರುತ್ತಿದ್ದ ಸರ್ವಿಸ್ ಬಸ್ಸಿನಲ್ಲಿ ಉತ್ತರ ಪ್ರದೇಶದ ಮೂಲದ ಯುವಕನೋರ್ವ ಯುವತಿ ಮೇಲೆ ಕೈ ಹಾಕಿದ್ದು ಮೂಲ್ಕಿ ಬಸ್ ನಿಲ್ದಾಣ ಸಮೀಪಿಸುತ್ತಿದಂತೆ ಯುವತಿ ತಮ್ಮ ಸಂಬಂಧಿಕರನ್ನು ಹಾಗೂ ಸ್ಥಳೀಯರನ್ನು ಕರೆದು ಯುವಕನ ಕೃತ್ಯ ತಿಳಿಸಿದ್ದಾಳೆ.
ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಏಜೆಂಟ್ ಬಂಧನ
ಈ ಸಂದರ್ಭ ಸ್ಥಳೀಯರು ಆಕ್ರೋಶಿತರಾಗಿ ಯುವಕನನ್ನು ಹಿಗ್ಗಾ ಮಗ್ಗಾ ಥಳಿಸಿ ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಯುವಕ ಆಕಸ್ಮಿಕವಾಗಿ ಕೈತಾಗಿದೆ ಎಂದು ಹೇಳಿಕೆ ನೀಡಿ ತಪ್ಪೊಪ್ಪಿಗೆ ನೀಡಿದ್ದು ಪ್ರಕರಣ ರಾಜಿಯಲ್ಲಿ ಮುಗಿಸಲಾಗಿದೆ ಎಂದು ಮುಲ್ಕಿ ಪೊಲೀಸರು ತಿಳಿಸಿದ್ದಾರೆ.
ಶಿರಸಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ: ಅಪ್ರಾಪ್ತೆಯನ್ನು ನಂಬಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ನಗರದ ರಾಜೀವ ನಗರದಲ್ಲಿ ಚಿಕನ್ ವ್ಯಾಪಾರ ಮಾಡಿಕೊಂಡಿದ್ದ ಶಕೀಲ್ ಅಹಮ್ಮದ್ ಶೇಖ್ (20) ಬಂಧಿತ ಆರೋಪಿ. ಈತ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಒತ್ತಾಯದಿಂದ ಬೈಕ್ ಮೇಲೆ ಹೊಟೇಲ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಕೋಣೆಯಲ್ಲಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಹೊಸ ಮಾರುಕಟ್ಟೆಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ