ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳೆಂದು ಪತ್ನಿ ಕೊಲೆ? ಅನುಮಾನಾಸ್ಪದವಾಗಿ ಗೃಹಿಣಿ ಸಾವು!

By Ravi Janekal  |  First Published Dec 12, 2023, 12:51 PM IST

ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಗೃಹಿಣಿ ಶ್ವೇತಾ (31) ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ದೈವಿ.


ಚಿಕ್ಕಮಗಳೂರು (ಡಿ.12): ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.

ಗೃಹಿಣಿ ಶ್ವೇತಾ (31) ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ದೈವಿ. ಮೃತ ಗೃಹಿಣಿ ಪೋಷಕರಿಂದ ಪತಿಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಪತ್ನಿ ಶ್ವೇತಾ ಮೃತಪಟ್ಟ ಬಳಿಕ ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದ ಪತಿ ಮನೆಯವರು. ಆದರೆ ಮಗಳ ಸಾವಿನ ಬಗ್ಗೆ ಅನುಮಾನಗೊಂಡು ಅಂತ್ಯಕ್ರಿಯೆ ತಡೆದು ಶವ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ ಮೃತಳ ಪೋಷಕರು. ಆರೋಗ್ಯವಾಗಿ ಮಗಳು ಸುಖಾಸುಮ್ಮನೆ ಸಾವಿಗೀಡಾಗಲು ಸಾಧ್ಯವಿಲ್ಲ. ನಮ್ಮ ಮಗಳಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಪತಿ, ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಶ್ವೇತಾ ಪೋಷಕರು.

Tap to resize

Latest Videos

undefined

ಬೆಂಗಳೂರಿನಲ್ಲಿ ಭೀಕರ ಕೊಲೆ; ಅವೈಡ್ ಮಾಡಿದಾಳೆಂದು ಹತ್ಯೆ ಮಾಡಿದ ಪಾಪಿ! 

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ದರ್ಶನ್‌ ಮೂರು ವರ್ಷಗಳ ಹಿಂದೆಯಷ್ಟೇ ಶ್ವೇತಾಳೊಂದಿಗೆ ಮದುವೆ ಆಗಿದ್ರೂ ಬೇರೆಯವಳೊಂದಿಗೆ ಅನೈತಿಕ ಸಂಬಂಧ? ಪತಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾರೆಂದು ಆರೋಪಿಸಿರುವ ಶ್ವೇತಾ ಪೋಷಕರು. ಸದ್ಯ ಮೃತದೇಹ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಮೂರು ವರ್ಷದ ಹಿಂದೆಯಷ್ಟೆ ದರ್ಶನ್ ಜೊತೆ ವಿವಾಹವಾಗಿದ್ದ ಶ್ವೇತಾ. ಪತಿ ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ  ಕೆಲಸ ಮಾಡುತ್ತಿರುವ ಮಾಡುತ್ತಿದ್ದ. ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ದೇವವೃಂದಕ್ಕೆ ಆಗಮಿಸಿದ್ದ ದರ್ಶನ್ ಮತ್ತು ಶ್ವೇತಾ. ಆದರೆ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾಳೆಂದು ಸಾವಿನ ಸುದ್ದಿ ಶ್ವೇತಾ ಪೋಷಕರಿಗೆ ತಿಳಿಸಿದ್ದ ದರ್ಶನ. ಪೋಷಕರು ಬರುವ ಮೊದಲೇ ಅಂತ್ಯಕ್ರಿಯೆಗೆ ತಯಾರಿ ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದ ದರ್ಶನ್, ಪೋಷಕರು. ಆದರೆ ಶ್ವೇತಾ ಪೋಷಕರು ಅಂತ್ಯಕ್ರಿಯೆ ತಡೆದಿದ್ದಾರೆ. ಇದು ಸಾವಲ್ಲ, ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ. ಶ್ವೇತಾಳ ಮೃತದೇಹ ಪರೀಕ್ಷೆ ಆಸ್ಪತ್ರೆಗೆ ಕಳುಹಿಸಿದ ಪೋಷಕರು.

ಬೆಂಗಳೂರಿನಲ್ಲಿ ಭೀಕರ ಕೊಲೆ; ಅವೈಡ್ ಮಾಡಿದಾಳೆಂದು ಹತ್ಯೆ ಮಾಡಿದ ಪಾಪಿ! 

ಶ್ವೇತಾ ಸಾವಿಗೆ ಮುನ್ನ ಮಾತಾಡಿದ ಆಡಿಯೋ ವೈರಲ್:

ಪತ್ನಿಗೆ ಹಾರ್ಟ್‌ ಅಟ್ಯಾಕ್ ಆಗಿ ಮೃತಪಟ್ಟಿದ್ದಾಳೆಂದು ಶ್ವೇತಾ ಪೋಷಕರಿಗೆ ಮಾಹಿತಿ ನೀಡಿ ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿದ್ದ ದರ್ಶನ್ ಮನೆಯವರು. ಆದರೆ ಶ್ವೇತಾ ಸಾವಿಗೆ ಮುನ್ನ ಮಾತಾಡಿರುವ ಆಡಿಯೋ ಪತಿ ಸಹೋದ್ಯೋಗಿ ಜೊತೆಗಿನ ಲವ್ ಕಹಾನಿ ಬಯಲಾಗಿದೆ. 

ದರ್ಶನ್ ಪತ್ನಿ ಶ್ವೇತಾ ಜೊತೆ ದರ್ಶನ್ ಲವರ್ ಮಾತನಾಡಿರೋ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ದರ್ಶನ ಲವರ್ ಜೊತೆ ಶ್ವೇತಾ ಮಾತಾಡಿದ್ದಾಳೆ, ನಾವು ಲವ್ ಮಾಡಿ ಮದುವೆಯಾಗಿ ಜೀವನ ಮಾಡ್ತಿದ್ದೇವೆ. ಯಾರದೋ ಕಾಲಿಡಿದು ಎಲ್ಲೋ ಮದುವೆ ಆಗಿದ್ವಿ. ಆಮೇಲೆ ಮನೆಯವರು ಮತ್ತೆ ಮದುವೆ ಮಾಡಿದ್ರು. ಕಷ್ಟಪಟ್ಟು ಮೇಲೆ ಬಂದಿದ್ದೇವೆ. ನನ್ನ ಗಂಡ ನನ್ನನ್ನು ರಿಕ್ವೆಸ್ಟ್ ಮಾಡಿ ಲವ್ ಮಾಡಿ ಮದುವೆಯಾದ್ರು. ರಾಣಿ ತರಾ ನೋಡ್ಕೊಂತಿನಿ ಕಣ್ಣೀರುಹಾಕ್ಸಲ್ಲ ಅಂದಿದ್ರು. ಆದರೆ ನೀನು ನನಗೆ ಮೋಸ ಮಾಡ್ತಿದ್ದಿಯಾ. 

ಸೌಂದರ್ಯದ ಖನಿಯಾಗಿದ್ದ ಪತ್ನಿ ಆತ್ಮಹತ್ಯೆ, ಖಿನ್ನತೆಯಲ್ಲಿದ್ದ ಪತಿಗೆ ಆ ಸತ್ಯ ಗೊತ್ತಾದಾಗ!

ನಿನಗೆ ಈಗಾಗಲೇ ತುಂಬಾ ಸಲ ಹೇಳಿದ್ದೀನಿ ಈ ತಪ್ಪು ಮಾಡಬೇಡ ಅಂತಾ ಆದ್ರೂ ಮತ್ತೆ ಸೋಮವಾರ ಅದೇ ತಪ್ಪು ಮಾಡಿದ್ದೀರಿ. ನಮ್ಮ ಬದುಕಿನಲ್ಲಿ ನೀನು ಬರಬೇಡ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡು ಎಂದು ಶ್ವೇತಾ ಬೇಡಿಕೊಂಡಿರೋದು ಆಡಿಯೋದಲ್ಲಿದೆ. ದರ್ಶನ್ ಲವರ್ ಕೊನೆ ತಪ್ಪು ಮಾಡಿದ್ದು ಒಪ್ಪಿಕೊಂಡಿರೋ ದರ್ಶನ ಲವರ್ ಇನ್ಮುಂದೆ ಆ ತಪ್ಪು ಮಾಡಲ್ಲ ಎಂದಿರೋದು ಆಡಿಯೋದಲ್ಲಿ ದಾಖಲಾಗಿದೆ.

ಸಹೋದ್ಯೋಗಿ ಜೊತೆಗಿನ ಅನೈತಿಕ ಸಂಬಂಧ ಪತ್ನಿಗೆ ಗೊತ್ತಾಗಿದ್ರಿಂದಲೇ ಕೊಲೆ ಮಾಡಿದ್ರಾ ದರ್ಶನ್? ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ದರ್ಶನ್ ಪತ್ನಿಗೆ ವಿಷದ ಇಂಜೆಕ್ಷನ್ ಚುಚ್ಚಿಕೊಲೆ. ಅದಕ್ಕೆ ಇಂಬುಕೊಡುವಂತೆ ಶ್ವೇತಾಳ ಕೈಬಣ್ಣ ಬದಲಾಗಿದೆ. ಸದ್ಯ ಶವಪರೀಕ್ಷೆಗೆ ಕಳಿಸಿರೋ ಪೋಷಕರು. ಪರೀಕ್ಷೆ ಬಳಿಕವೇ ಏನೆಂದು ಗೊತ್ತಾಗಲಿದೆ.

ಪ್ರಕರಣ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!