ಹುಬ್ಬಳ್ಳಿ: ಹಣದಾಸೆ ತೋರಿಸಿ ಕೈಕೊಟ್ಟ ಬಿಜೆಪಿ ಮುಖಂಡ, ಗೃಹಿಣಿ ಆತ್ಮಹತ್ಯೆ

By Suvarna News  |  First Published Sep 26, 2020, 2:25 PM IST

ಕಲಘಟಗಿ ಮೂಲದ ಬಿಜೆಪಿ ಮುಖಂಡ ಬಸವರಾಜ್ ಕೆಲಗಾರ| ಹುಬ್ಬಳ್ಳಿಯ ಸ್ವಾಗತ ಕಾಲೋನಿಯ ತಮ್ಮದೆ ಮನೆಯಲ್ಲಿ ನೇಣಿಗೆ ಶರಣಾದ ಗೃಹಿಣಿ| ಪ್ರೀತಿಸಿ ಮದುವೆಯಾಗಿ ಮಹಿಳೆಗೆ ವಂಚಿಸಿದ್ದ ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ| 


ಹುಬ್ಬಳ್ಳಿ(ಸೆ.26): ಬಿಜೆಪಿ‌ ಮುಖಂಡನ ಎರಡನೇ ಪತ್ನಿ ಎಂದು ಹೇಳಿಕೊಂಡಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸ್ವಾಗತ ಕಾಲೋನಿಯಲ್ಲಿ ಇಂದು(ಶನಿವಾರ) ನಡೆದಿದೆ. ಅನಿತಾ ರೇವಣಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾರೆ.

ಕಲಘಟಗಿ ಮೂಲದ ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ಅವರು ಹಣದಾಸೆಗೆ ಪ್ರೀತಿಸಿ ಮದುವೆಯಾಗಿ, ಕೈಕೊಟ್ಟಿದಕ್ಕೆ‌ ಅನಿತಾ ರೇವಣಕರ್ ಇಂದು ನಗರದ ತಮ್ಮದೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

Tap to resize

Latest Videos

undefined

ತಂಗಿ ಆತ್ಮಹತ್ಯೆಗೆ ಕಾರಣವೆಂದು ಭಾವನನ್ನೇ ಹತ್ಯೆಗೈದ ಯೋಧ

ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ನನ್ನನ್ನು ಪ್ರೀತಿಸಿ ಮದುವೆಯಾಗಿ ವಂಚಿಸಿದ್ದ ಎಂದು ಮೃತ ಮಹಿಳೆ ಅನಿತಾ ರೇವಣಕರ್ ಆರೋಪಿಸಿದ್ದರು. ಇತ್ತೀಚೆಗೆ ಈ ಮಹಿಳೆಯನ್ನು ಬಿಜೆಪಿ ಮುಖಂಡ ಬಸವರಾಜ ‌ಕೆಲಗಾರ ಥಳಿಸಿದ್ದರು. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ‌ ಬಸವರಾಜ್ ವಿರುದ್ಧ ದೂರು ದಾಖಲಾಗಿತ್ತು.
 

click me!