Bengaluru: ಮನೆ ಮಾರಾಟಕ್ಕೆ ಅಡ್ಡವಾಯ್ತೆಂದು ಮರಕ್ಕೆ ವಿಷ!

Kannadaprabha News   | Asianet News
Published : Feb 08, 2022, 07:03 AM IST
Bengaluru: ಮನೆ ಮಾರಾಟಕ್ಕೆ ಅಡ್ಡವಾಯ್ತೆಂದು ಮರಕ್ಕೆ ವಿಷ!

ಸಾರಾಂಶ

*  ಮನೆ ಮಾರಾಟಕ್ಕೆ ಮುಂದಾಗಿದ್ದ ಮಾಲೀಕ  *  ಗೇಟ್‌ ಮುಂಭಾಗವೇ ಮರವಿದ್ದ ಕಾರಣ ಮನೆ ಕೊಳ್ಳಲು ಅನೇಕರ ಹಿಂದೇಟು *  11 ರಂಧ್ರಗಳ ಕೊರೆದು ಮರಕ್ಕೆ ವಿಷಪ್ರಾಶನ 

ಬೆಂಗಳೂರು(ಫೆ.08):  ಗೇಟ್‌ಗೆ ಅಡ್ಡವಾಗಿ ಬೆಳೆದಿದೆ ಎಂಬ ಕಾರಣಕ್ಕೆ ಸುಮಾರು 30 ವರ್ಷದ ಹಳೆಯ ಟಬಿಬಿಯಾ ಮರಕ್ಕೆ(Tress) ವಿಷವುಣಿಸಿದ(Poison) ಘಟನೆ ನಗರದಲ್ಲಿ ನಡೆದಿದೆ. ಬಿಟಿಎಂ ಬಡಾವಣೆಯ 8ನೇ ಮುಖ್ಯರಸ್ತೆ 9ನೇ ಅಡ್ಡರಸ್ತೆಯ ಮನೆಯ ಮುಂದೆ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಮರಕ್ಕೆ 11 ರಂಧ್ರಗಳನ್ನು ಕೊರೆದು ವಿಷ ಹಾಕಲಾಗಿದೆ.

ಕಳೆದ ಒಂದೂವರೆ ತಿಂಗಳ ಹಿಂದೆ ವಿಷ ಹಾಕಿದ್ದು ಮರ ಶೇ.45ರಷ್ಟು ಈಗಾಗಲೇ ಒಣಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಸಂಪೂರ್ಣ ಮುರಿದು ಬೀಳುವ ಹಂತ ತಲುಪುತ್ತಿತ್ತು. ಸ್ಥಳೀಯರ ನೆರವಿನಿಂದ ಮರದ ರಕ್ಷಣೆ ಮಾಡಲಾಗಿದೆ ಎಂದು ಬಿಬಿಎಂಪಿ(BBMP) ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Crime: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಚಾಕು ಇರಿದವ ಅರೆಸ್ಟ್‌

ಮರ ತಜ್ಞ ವಿಜಯ್‌ ನಿಶಾಂತ್‌ ಅವರು ಎಲ್ಲ 11ರಂಧ್ರಗಳಿಂದ ವಿಷ ಹೊರ ತೆಗೆದಿದ್ದಾರೆ. ಅಲ್ಲದೆ, ಮರ ಪುನಶ್ಚೇತನಕ್ಕೆ ಅಗತ್ಯವಿರುವ ಔಷಧ(Medicine) ತುಂಬಿದ್ದಾರೆ. ಜತೆಗೆ, ಎಲ್ಲ ರಂಧ್ರಗಳನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮುಚ್ಚಿದ್ದು, ಮರ ಉಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮನೆ ಮಾಲಿಕನ ವಿರುದ್ಧ ಎಫ್‌ಐಆರ್‌:

ಮನೆ ಮಾಲಿಕರು(House Owner) ಕಟ್ಟಡ ಮಾರಾಟಕ್ಕೆ ಮುಂದಾಗಿದ್ದರು. ಮನೆ ಮುಂದೆ ಮರವಿದ್ದ ಕಾರಣ ಮಾರಾಟಕ್ಕೆ ಸಾಧ್ಯವಾಗಿರಲಿಲ್ಲ. ಇದೇ ಕಾರಣದಿಂದ ಮರ ನಾಶಕ್ಕೆ ಮುಂದಾಗಿದ್ದರು ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಆಧರಿಸಿ ಪ್ರಕರಣ(FIR) ದಾಖಲಿಸಲಾಗಿದೆ ಎಂದು ಘಟನೆ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ವಿವರಿಸಿದರು.

ಪರಿಶೀಲನೆ ವೇಳೆ ಮಾಲಿಕ ಮನೆಯಲ್ಲಿ ಇರಲಿಲ್ಲ. ಬಾಡಿಗೆದಾರರು ಮಾತ್ರ ಇದ್ದರು, ಅವರಿಂದ ಮಾಹಿತಿ ಕಲೆಹಾಕುತ್ತಿದ್ದೇವೆ. ಘಟನೆಗೆ ಕಾರಣ ತಿಳಿಯುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗುವುದು ಎಂದು ಬಿಬಿಎಂಪಿಯ ಉಪ ವಲಯ ಅರಣ್ಯಾಧಿಕಾರಿ ಗೋವಿಂದರಾಜು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ರಕ್ಷಣಗೆ ಅಗತ್ಯ ಕ್ರಮ

ಸಂವೃದ್ಧವಾಗಿ ಬೆಳೆದು ನಿಂತಿದ್ದ ಮರಕ್ಕೆ ವಿಷ ಹಾಕಿರುವ ವಿಚಾರ ಸ್ಥಳೀಯರಿಂದ ತಿಳಿದು ಬಂದಿತ್ತು. ತಕ್ಷಣ ಅರಣ್ಯ ಇಲಾಖೆಯ(Forest Department) ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮರ ಉಳಿಯುವುದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ಒಂದು ತಿಂಗಳ ಕಾಲ ಮರದ ಮೇಲೆ ನಿಗಾ ಇರಿಸಿ ಅದನ್ನು ರಕ್ಷಣೆ ಮಾಡುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮರ ತಜ್ಞ(Tree Expert) ವಿಜಯ್‌ ನಿಶಾಂತ್‌ ಮಾಹಿತಿ ನೀಡಿದರು.

Bengaluru Crime: ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಮೂವರ ಸೆರೆ: 40 ಕೆಜಿ ಗಾಂಜಾ ವಶ

ಮರ ಕಡಿಯಲು ಬಿಟ್ಟಿಲ್ಲ ಎಂದು ವಿಷದ ಇಂಜೆಕ್ಷನ್ ಕೊಟ್ಟ ಡಾಕ್ಟರ್ ದಂಪತಿ?

ಬೆಂಗಳೂರು: ಮರ ಕಡಿಯಲು ಬಿಡಲಿಲ್ಲ ಎಂದು‌‌ ದಂಪತಿ ಮರಕ್ಕೆ ವಿಷ ಇಟ್ಟ ಆರೋಪ ಕೇಳಿಬಂದಿದೆ. ಈ ಘಟನೆ ನಡೆದದ್ದು 2019 ರಲ್ಲಿ.  ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು, ಇಲ್ಲಿನ ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದಿಂದ ಬಿಬಿಎಂಪಿ‌ ಅರಣ್ಯ ಘಟಕಕ್ಕೆ ದೂರು ನೀಡಲಾಗಿತ್ತು.

ನರೇಂದ್ರ - ಮಾಲಿನಿ ದಂಪತಿ ಕಟ್ಟಡ ನಿರ್ಮಿಸುತ್ತಿದ್ದು, ‌ಅಲ್ಲೇ ಇರುವ 5 ಮರಗಳನ್ನು ಕತ್ತರಿಸಲು ಮುಂದಾಗಿದ್ದರು. ಸ್ಥಳೀಯರು ಅದರ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದ್ದರು.  ಈಗ, ಮರ ಕಡಿಯುವ ಬದಲು ವಾಮಮಾರ್ಗವನ್ನು ದಂಪತಿ ತುಳಿದಿದ್ದು,  ಮರಗಳು ತನ್ನಿಂತಾನೆ ಒಣಗಿ ಹೋಗುವಂತೆ ಕೆಮಿಕಲ್ ಇಂಜೆಕ್ಟ್ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!