ಹೆಂಡತಿಯನ್ನು ಬಳಸಿಕೊಂಡು ಗಂಡನಿಂದ ಉದ್ಯಮಿಯ ಹನಿಟ್ರ್ಯಾಪ್, ಲಾಡ್ಜ್‌ನಲ್ಲಿದ್ದಾಗ ಸಿಸಿಬಿ ಬಲೆಗೆ!

By Gowthami K  |  First Published Dec 16, 2023, 10:23 AM IST

ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿದ್ದ ಗಂಡ-ಹೆಂಡತಿ ಮತ್ತು ಗ್ಯಾಂಗ್ ಒಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಡಿ.16): ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಒಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳಾಗಿದ್ದಾರೆ. ಉದ್ಯಮಿ ಅತೀವುಲ್ಲಾ ಎಂಬಾತನನ್ನು ಆರೋಪಿಗಳು ಟ್ರ್ಯಾಪ್ ಮಾಡಲು ಹೋಗಿ ಸಿಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಖಲೀಮ್ ಮತ್ತು ಸಭಾ ಇಬ್ಬರೂ ಗಂಡ‌ ಹೆಂಡತಿಯಾಗಿದ್ದಾರೆ. ಆದರೆ ಉದ್ಯಮಿ ಅತೀವುಲ್ಲಾಗೆ ಪತ್ನಿ ಸಭಾಳನ್ನ ವಿಧವೆ ಎಂದು ಗಂಡ ಖಲೀಮ್ ಪರಿಚಯ ಮಾಡಿಸಿಕೊಟ್ಟಿದ್ದನು. ಮಾತ್ರವಲ್ಲ ಆಕೆಯನ್ನ ನೋಡಿಕೊಳ್ಳುವಂತೆ ಹೇಳಿದ್ದನು. ಇದಾದ ಬಳಿಕ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು.

Tap to resize

Latest Videos

undefined

ಫ್ಯಾಕ್ಟರಿಯಲ್ಲಿ ರಜೆ ನೀಡದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಕೆಲ ದಿನಗಳ ನಂತರ ಆರ್ ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಸಭಾ ಕರೆದಿದ್ದಳು. ಆಧಾರ್ ಕಾರ್ಡ್ ಜೊತೆ ಬಾ‌ ಎಂದು ಅತೀವುಲ್ಲಾಗೆ ಹೇಳಿದ್ದಳು. ರೂಮ್ ಬುಕ್ ಮಾಡಿ ಕೆಲ ಹೊತ್ತಲ್ಲೇ ಆರೋಪಿಗಳು ಎಂಟ್ರಿ ಕೊಟ್ಟಿದ್ದರು. ಏಕಾಏಕಿ ಎಂಟ್ರಿ ಕೊಟ್ಟ ಆರೋಪಿಗಳು ಸೀನ್ ಕ್ರಿಯೇಟ್ ಮಾಡಿದ್ದರು. ಖಲೀಮ್, ರಕೀಬ್, ಅತೀಕ್ ಸುಖಾ ಸುಮ್ಮನೆ ಗಲಾಟೆ ಮಾಡಿದ್ದರು. ಈ ವಿಚಾರ ನಿಮ್ಮ ಮನೆಯವ್ರಿಗೆ ಹೇಳ್ತೀವಿ ಅಂತಾ ಆರು ಲಕ್ಷ ರೂ ಗೆ ಡಿಮ್ಯಾಂಡ್ ಮಾಡಿದ್ದರು.

ಕಾಫಿನಾಡು ಶಾಕ್‌, ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ರಾಗಿಮುದ್ದೆಯಲ್ಲಿ ಸೈನೈಡ್ ಬೆರೆಸಿ ಕೊಂದ ಪತಿ!

ಆದ್ರೆ ಈ ವೇಳೆ ಮಾಹಿತಿ ಪಡೆದು ಸಿಸಿಬಿ ಟೀಂ ದಾಳಿ ನಡೆಸಿ, ಹನಿಟ್ರ್ಯಾಪ್  ಮಾಡುತ್ತಿದ್ದ ಗ್ಯಾಂಗ್‌ ಅನ್ನು ರೆಡ್ ಹ್ಯಾಂಡ್ ಆಗಿ ಬಂಧನ ಮಾಡಿದೆ. ಇನ್ನೂ ಹಲವು ಮಂದಿಗೆ ಈ ಟೀಂ ವಂಚನೆ ಮಾಡಿರುವ  ಶಂಕೆ ಇದೆ. ಹೀಗಾಗಿ ಸದ್ಯ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದು, ಆರ್ ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

click me!