
ಬೆಂಗಳೂರು (ಡಿ.16): ಫ್ಯಾಕ್ಟರಿಯಲ್ಲಿ ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೊಬ್ಬ ಮರಣಪತ್ರ ಬರೆದಿಟ್ಟು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಟಿ.ದಾಸರಹಳ್ಳಿ ನಿವಾಸಿ ಗೋವಿಂದ ರಾಜು (24) ಮೃತ ದುರ್ದೈವಿ. ಗುರುವಾರ ಸಂಜೆ 5.30ರ ಸುಮಾರಿಗೆ ಟಿ. ದಾಸರಹಳ್ಳಿಯ ಆರ್‌ಪಿಎಂ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.
ಆಂಧ್ರಪ್ರದೇಶದ ಮಡಕಶಿರಾ ಮೂಲದ ಗೋವಿಂದರಾಜು ಕಳೆದ ಆರು ವರ್ಷಗಳಿಂದ ಪೀಣ್ಯದ ಕೆಆರ್ಡಿಆರ್ ವಾಚ್ ತಯಾರಿಕಾ ಫ್ಯಾಕ್ಟರಿ(KRDR Watch Manufacturing Factory peenya ) ಯಲ್ಲಿ ಕೆಲಸ ಮಾಡುತ್ತಿದ್ದ. ಇದರ ಜತೆಗೆ ಆರ್‌ಪಿಎಂ ಅಪಾರ್ಟ್‌ಮೆಂಟ್ ನಿರ್ವಹಣೆ ಕೆಲಸ ಮಾಡುತ್ತಿದ್ದ. ಹೀಗಾಗಿ ರಾತ್ರಿ ವೇಳೆ ಅದೇ ಅಪಾಟ್ ೯ಮೆಂಟ್‌ನಲ್ಲಿ ಮಲಗುತ್ತಿದ್ದ ಎಂದು ತಿಳಿದು ಬಂದಿದೆ.
ಅನೈತಿಕ ಸಂಬಂಧದ ಆರೋಪ; ಮರ್ಯಾದೆಗಂಜಿ ನೇಣುಬಿಗಿದು ಯುವಕ ಆತ್ಮಹತ್ಯೆ!
ಕಿರುಕುಳ ಆರೋಪ: ಕೆಲ ದಿನಗಳ
ಹಿಂದೆ ಕೆಆರ್‌ಡಿಆರ್ ವಾಚ್ ತಯಾ ರಿಕಾ ಫ್ಯಾಕ್ಟರಿಯ ಮ್ಯಾನೇಜರ್‌ಮತ್ತು ಸೂಪರ್‌ವೈಸರ್ ಬಳಿ ರಜೆ ಬೇಕೆಂದು ಕೇಳಿದ್ದಾನೆ. ಆದರೆ, ಅವರು ರಜೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಜೆ ಕೇಳಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಸಿದ್ದರು. ಇದರಿಂದ ಗೋವಿಂದರಾಜು ಬೇಸರಗೊಂಡಿದ್ದ ಎನ್ನಲಾಗಿದೆ.
ಗುರುವಾರ ಫ್ಯಾಕ್ಟರಿ ಕೆಲಸಕ್ಕೆ ಹೋಗದೆ ಅಪಾರ್ಟ್‌ಮೆಂಟ್‌ನಲ್ಲೇ ಇದ್ದ. ಸಂಜೆ 5.30ರ ಸುಮಾರಿಗೆ ಸೀರೆ ಯಿಂದ ಸ್ಟೇರ್‌ಕೇಸ್‌ನ ಕಂಬಿಗೆ ಕಟ್ಟಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷ ಸೇವಿಸಿ ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆ!
ಮರಣಪತ್ರ ಪತ್ತೆ: ಮೃತ ಗೋವಿಂದರಾಜು ಬಳಿ ಮರಣಪತ್ರ ಸಿಕ್ಕಿದೆ. ಫ್ಯಾಕ್ಟರಿಯ ಮ್ಯಾನೇಜರ್ ಮತ್ತು ಸೂಪರ್‌ವೈಸರ್ ರಜೆ ನೀಡದೆ ಕಿರುಕುಳ ನೀಡುತ್ತಿದ್ದಾರೆ. ರಜೆ ಕೇಳಿದರೆ ಕೆಲಸದಿಂದಲೇ ತೆಗೆದು ಹಾಕುವುದಾಗಿ ಬೆದರಿಸುತ್ತಿದ್ದಾರೆ. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಫಾಕ್ಟರಿ ಮ್ಯಾನೇಜರ್ ಮತ್ತು ಸೂಪರ್‌ವೈಸರ್ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಲಿಸಿದ್ದು, ಮುಂದುವರೆಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ