ಸೂರಜ್‌ ವಿರುದ್ಧ ಆಪ್ತನಿಂದಲೇ ಸಲಿಂಗಕಾಮ ದೌರ್ಜನ್ಯ ದೂರು..!

Published : Jun 26, 2024, 06:35 AM IST
ಸೂರಜ್‌ ವಿರುದ್ಧ ಆಪ್ತನಿಂದಲೇ ಸಲಿಂಗಕಾಮ ದೌರ್ಜನ್ಯ ದೂರು..!

ಸಾರಾಂಶ

ಸಲಿಂಗಕಾಮ ಪ್ರಕರಣದಲ್ಲಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪರವಾಗಿ ಜೂ.21 ರಂದು ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾ‌ರ್ ಈಗ ಉಲ್ಟಾ ಹೊಡೆದಿದ್ದಾರೆ. ಮಂಗಳವಾರ ಸಂಜೆ ಡಾ.ಸೂರಜ್ ರೇವಣ್ಣ ವಿರುದ್ಧವೇ ಅವರು ದೂರು ನೀಡಿದ್ದು, ಸೂರಜ್‌ರಿಂದ ತನ್ನ ಮೇಲೂ 3 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. 

ಹೊಳೆನರಸೀಪುರ/ಹಾಸನ(ಜೂ.26):  ಜೆಡಿಎಸ್ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮ ದೌರ್ಜನ್ಯಕ್ಕೆ ಸಂಬಂಧಿಸಿ ದಂತೆ ಈಗ 2ನೇ ದೂರು ದಾಖಲಾಗಿದೆ. ಅವರ ಆಪ್ತನೇ ತನ್ನ ಮೇಲೆ ಮೂರು ವರ್ಷದಿಂದ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. 

ಸಲಿಂಗಕಾಮ ಪ್ರಕರಣದಲ್ಲಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪರವಾಗಿ ಜೂ.21 ರಂದು ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾ‌ರ್ ಈಗ ಉಲ್ಟಾ ಹೊಡೆದಿದ್ದಾರೆ. ಮಂಗಳವಾರ ಸಂಜೆ ಡಾ.ಸೂರಜ್ ರೇವಣ್ಣ ವಿರುದ್ಧವೇ ಅವರು ದೂರು ನೀಡಿದ್ದು, ಸೂರಜ್‌ರಿಂದ ತನ್ನ ಮೇಲೂ 3 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಸೂರಜ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಏನಿದು ಸೂರಜ್ ರೇವಣ್ಣನ ಕಾಮ ಪುರಾಣ..? ತಮ್ಮ ಹಂಗೆ..ಅಣ್ಣ ಹಿಂಗೆ..! ರೇವಣ್ಣ ಕುಟುಂಬ ವಿಲವಿಲ!

ಜೂ.21ರಂದು ಸೂರಜ್ ಪರ, ಅರಕಲಗೂಡು ಯುವಕನ ವಿರುದ್ಧ ದೂರು ದಾಖಲಿಸಿದ್ದ ಹನುಮನಹಳ್ಳಿಯ ಶಿವಕುಮಾರ್, 'ದೂರುದಾರ ನನ್ನ ಮೂಲಕ ನಮ್ಮ ನಾಯಕ ಎಂಎಲ್‌ಸಿ ಡಾ.ಸೂರಜ್‌ ರಿಗೆ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ಸೂರಜ್ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ' ಎಂದು ಆರೋಪಿಸಿದ್ದರು.

ಈಗ, ಮಂಗಳವಾರ ಹೊಳೆನರಸೀಪುರ ನಗರ ಠಾಣೆಗೆ ಆಗಮಿಸಿದ ಶಿವಕುಮಾ‌ರ್ ಅವರು ಸೂರಜ್ ವಿರುದ್ದವೇ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

Suraj Revanna sexual abuse case: ಸೂರಜ್ ರೇವಣ್ಣ ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ CID ನೀಡಿದ ಕಾರಣಗಳೇನು..?

ದೂರಿನಲ್ಲಿ ಏನಿದೆ?

ನಾಲ್ಕು ದಿನಗಳ ಹಿಂದೆ ದೂರುದಾರನ ವಿರುದ್ಧ ದೂರು ನೀಡಲು ನನಗೆ ಒತ್ತಡ ವಿತ್ತು. ಸೂರಜ್ ಒತ್ತಡಕ್ಕೆ ಮಣಿದು ಅಂದು ದೂರು ನೀಡಿದ್ದೆ. ನನಗೆ ಬೆದರಿಕೆ ಹಾಕಿ ದೂರು ಕೊಡಿಸಿದ್ದರು. 3 ವರ್ಷಗಳ ಹಿಂದೆ ಗನ್ನಿಕಡ ತೋಟದ ಮನೆಯಲ್ಲಿ ಸೂರಜ್ ನನ್ನ ಮೇಲೂ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಶಿವಕುಮಾರ್ ದೂರಿನಲ್ಲಿ ಹೇಳಿದ್ದಾರೆ.

4 ದಿನ ಎಲ್ಲಿದ್ದರು?

ಜೂ.21ರಂದು ಸೂರಜ್ ಪರ, ಅರಕಲ ಗೂಡು ಯುವಕನ ವಿರುದ್ದ ದೂರು ದಾಖಲಿಸಿದ್ದ ಶಿವಕುಮಾರ್, ಬಳಿಕ ನಾಪತ್ತೆಯಾಗಿದ್ದರು. ಅವರು ಗೌಪ್ಯ ಸ್ಥಳಕ್ಕೆ ತೆರಳಿದ್ದು, ಜೂ.25ರಂದು ಹೊರಬಂದು ಸೂರಜ್‌ ವಿರುದ್ಧದೂರುದಾಖಲಿಸಿದ್ದಾರೆ. ಸೂರಜ್ ಕುಟುಂಬದ ಮೇಲಿನ ಭಯ, ಬೆದರಿಕೆ ಬರುವ ಸಾಧ್ಯತೆ ಹಿನ್ನೆಲೆ ಅವರು ನಾಪತ್ತೆಯಾಗಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ