ಆಸ್ತಿಗಾಗಿ ಎಚ್‌ಐವಿ ಪೀಡಿತ ಗಂಡನಿಗೆ ಗೃಹಬಂಧನ : ಪತ್ನಿ, ಮಕ್ಕಳ ವಿರುದ್ಧ ಆರೋಪ

By Gowthami KFirst Published Aug 17, 2022, 8:32 PM IST
Highlights

ಆಸ್ತಿಗಾಗಿ ಹೆಚ್‌ಐ‌ವಿ ಪೀಡಿತ ಪತಿಯನ್ನು ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಕೂಡಿಹಾಕಿದ್ದ ಘಟನೆ ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ನಡೆದಿದೆ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ಆ.17): ಆಸ್ತಿಗಾಗಿ ಹೆಚ್‌ಐ‌ವಿ ಪೀಡಿತ ಪತಿಯನ್ನು ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಕೂಡಿಹಾಕಿದ್ದ ಘಟನೆ ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ನಡೆದಿದೆ. ಪತಿ ಶಿವಸ್ವಾಮಿಯನ್ನು ಗೃಹ ಬಂಧನದಲ್ಲಿರಿಸಿದ ಆರೋಪ ಪತ್ನಿ ಹಾಗೂ ಮಕ್ಕಳ ವಿರುದ್ಧವೇ ಕೇಳಿಬಂದಿದೆ. ಶಿವಸ್ವಾಮಿ ಕಳೆದ 25 ವರ್ಷಗಳ ಹಿಂದೆ ಜಯಲಕ್ಷ್ಮಿ ಎಂಬಾಕೆಯನ್ನ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ದಂಪತಿಗೆ ಓರ್ವ ಮಗ ಹಾಗೂ ಮಗಳಿದ್ದಾರೆ. ಆರಂಭದಲ್ಲಿ ಸುಂದರವಾಗಿದ್ದ ಸಂಸಾರ 8 ವರ್ಷದ ಬಳಿಕ ಹಳಸಿತ್ತು. ಪತಿ ಚಿತ್ರಹಿಂಸೆ ಕೊಡ್ತಾರೆಂದು ಆರೋಪಿಸಿ ಜಯಲಕ್ಷ್ಮೀ ದೂರಾಗಿದ್ದರು. ಬೆಂಗಳೂರಲ್ಲೇ ವಾಸವಾಗಿದ್ದ ಪತ್ನಿ ಯಾವಾಗ ಅತ್ತೆ ಸಾವನ್ನಪ್ಪಿದ್ರು ಮತ್ತೆ ಮಂಡ್ಯಕ್ಕೆ ಬಂದು ಗಂಡನ ಮನೆಯಲ್ಲಿ ನೆಲೆಸಿದ್ರು. ಈ ವೇಳೆ ಅಪಘಾತದಲ್ಲಿ ಶಿವಸ್ವಾಮಿ ಕಾಲು ಮುರಿದು ಕೊಂಡಿದ್ದಾರೆ. ಪತಿ ಶಿವಸ್ವಾಮಿ ಹಾಗೂ ಪತ್ನಿ ಜಯಲಕ್ಷ್ಮಿ ಇಬ್ರು ಕೂಡ ಹೆಚ್‌ಐ‌‌ವಿ ಸೋಂಕಿತರಾಗಿದ್ದು, ಪತಿಯನ್ನ ಸರಿಯಾಗಿ ನೋಡಿಕೊಳ್ತಿಲ್ಲ ಆಸ್ತಿಗಾಗಿ ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ಕೊಡ್ತಿದ್ದಾರೆ ಅಂತ ಶಿವಸ್ವಾಮಿ ಅಕ್ಕ ಪುಟ್ಟತಾಯಮ್ಮ ಆರೋಪಿಸಿದ್ದಾರೆ. ಮಂಡ್ಯ ಪಶ್ಚಿಮ ಠಾಣೆ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ ಪುಟ್ಟತಾಯಮ್ಮ ಶಿವಸ್ವಾಮಿ ಪತ್ನಿ ಜಯಲಕ್ಷ್ಮಿ ಜೊತೆ ಜಗಳ ಶುರುಮಾಡಿದ್ದಾರೆ.

ಕುಡಿದು ವಿದ್ಯಾರ್ಥಿನಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ: ಭಯಾನಕ ದೃಶ್ಯ ಸಿಸಿಯಲ್ಲಿ ಸೆರೆ

ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ತಾಯಿ ತೀರಿಕೊಂಡ ಬಳಿಕ ಆಸ್ತಿ ಎಲ್ಲಾ ನನ್ನ ಪತಿ ಶಿವಸ್ವಾಮಿ ಹೆಸರಿಗೆ ಬಂದಿದೆ ಹಾಗಾಗಿ ಆಸ್ತಿ ಕಬಳಿಸಲು ಅವರ ಅಕ್ಕ ಪುಟ್ಟತಾಯಮ್ಮ ಈ ರೀತಿ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸಂತ್ರಸ್ತ ಶಿವಸ್ವಾಮಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕಾಗಿದೆ.

ಲಾರಿ ಚಾಲಕನ ಮದ್ಯದ ಅಮಲು ಚಟಕ್ಕೆ ಮಧ್ಯರಾತ್ರಿ ದುರಂತ, ಶೆಡ್‌ಗೆ ಲಾರಿ ಡಿಕ್ಕಿ ಹೊಡೆದು ಮಗು ಬಲಿ!

ಕೊಲೆ ಆರೋಪಿಯ ಪತ್ತೆಗೆ ಸಹಕರಿಸಲು ಮನವಿ
ಬೆಂಗಳೂರು: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನ ಸೋದರ ಸಂಬಂಧಿಯನ್ನು ಕೊಂದು ಪರಾರಿಯಾಗಿರುವ ಆರೋಪಿ ರಾಜೇಶ್‌ ಪತ್ತೆಗೆ ಸಹಕರಿಸುವಂತೆ ಕೊಡಗು ಜಿಲ್ಲೆ ಶ್ರೀಮಂಗಲ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ. ಮಂಗಳೂರಿನ ರಾಜೇಶ್‌ (42) ನಾಪತ್ತೆಯಾಗಿರುವ ಆರೋಪಿ ಆಗಿದ್ದು, ಆತ ಗೋಧಿ ಬಣ್ಣ, ಕೋಲು ಮುಖ ಹಾಗೂ ಅಂದಾಜು 5.7 ಅಡಿ ಎತ್ತರ ಇದ್ದಾನೆ. ಒಳ್ಳೆಯ ಅಡುಗೆ ಭಟ್ಟಸಹ ಆಗಿದ್ದಾನೆ. ಇದೇ ವರ್ಷದ ಫೆಬ್ರವರಿ 6ರಂದು ಕೊಡಗು ಜಿಲ್ಲೆ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಕೌಟುಂಬಿಕ ವಿಚಾರವಾಗಿ ತನ್ನ ಸಂಬಂಧಿ ಪ್ರೇಮಾ ಹಾಗೂ ಅವರ ಸೋದರಿ ವೇದಾ ಅಲಿಯಾಸ್‌ ವೀಣಾ ಮೇಲೆ ಮಾರಕಾಸ್ತ್ರದಿಂದ ರಾಜೇಶ್‌ ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರವಾಗಿ ರಕ್ತಸ್ರಾವದಿಂದ ವೇದಾ ಮೃತಪಟ್ಟರೆ, ಪ್ರೇಮಾ ಪ್ರಾಣಪಾಯದಿಂದ ಸುರಕ್ಷಿತರಾಗಿದ್ದಾರೆ. ಆರೋಪಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹುಡುಕಾಟ ನಡೆದಿದೆ. ಈತನ ಬಗ್ಗೆ ಮಾಹಿತಿ ಇದ್ದರೆ ಕುಟ್ಟಇನ್‌ಸ್ಪೆಕ್ಟರ್‌- 94808 04934, ಶ್ರೀಮಂಗಲ ಸಬ್‌ ಇನ್‌ಸ್ಪೆಕ್ಟರ್‌-94808 04960 ಹಾಗೂ ವೀರಾಜಪೇಟೆ ಡಿವೈಎಸ್ಪಿ- 94808 04922 ಕರೆ ಮಾಡಿ ತಿಳಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

click me!