ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಕಾರ್ಮಿಕ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ರಸ್ತೆಯ ಮೇಲ್ಸೇತುವೆಯಲ್ಲಿ ನಡೆದಿದೆ. ಕೆಲಸದ ನಿಮಿತ್ತ ಪೀಣ್ಯಕ್ಕೆ ಬಂದಿದ್ದ ದಂಪತಿ ಮನೆಗೆ ತೆರಳುವಾಗ ಈ ದುರಂತ ನಡೆದಿದೆ.
ಬೆಂಗಳೂರು (ಜು.29): ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಕಾರ್ಮಿಕ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ರಸ್ತೆಯ ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ತುಮಕೂರು ರಸ್ತೆಯ ದಾಸನಪುರ ಹೋಬಳಿಯ ಸಿದ್ದನಹೊಸಹಳ್ಳಿ ನಿವಾಸಿ ರುದ್ರೇಶ್ (35) ಮತ್ತು ಸುನೀತಾ (30) ಮೃತರು. ಕೆಲಸದ ನಿಮಿತ್ತ ಪೀಣ್ಯಕ್ಕೆ ಬಂದಿದ್ದ ದಂಪತಿ ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಪರಾರಿಯಾಗಿರುವ ವಾಹನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರುದ್ರೇಶ್ ಹಾಗೂ ಸುನೀತಾ ದಂಪತಿ ಇಬ್ಬರು ಮಕ್ಕಳಿದ್ದು, ಸಿದ್ದನಹೊಸಹಳ್ಳಿಯಲ್ಲಿ ರುದ್ರೇಶ್ ಕುಟುಂಬ ನೆಲೆಸಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ರುದ್ರೇಶ್ ಗಾರೆ ಕೆಲಸಗಾರನಾಗಿದ್ದರೆ, ಗಾರ್ಮೆಂಟ್ಸ್‌ನಲ್ಲಿ ಸುನೀತಾ ದುಡಿಯುತ್ತಿದ್ದರು. ತುಮಕೂರು ರಸ್ತೆಯ ಮೇಲ್ಸೇತುವೆಯ ದಾಸರಹಳ್ಳಿ ಬಳಿ ಬುಧವಾರ ರಾತ್ರಿ 9ರ ಸುಮಾರಿಗೆ ರುದ್ರೇಶ್ ಅವರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈ ಕುಳಿ ಕಾರ್ಮಿಕ ಆತ್ಮಹತ್ಯೆಗೆ ಸಿಪಿಐ ಕಾರಣ: ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಸಿ.ಎಸ್.ಪುಟ್ಟರಾಜು ಭರವಸೆ
ಪಾಂಡವಪುರ: ಕೈ ಕುಳಿ ಮೂಲಕ ಗಣಿಗಾರಿಕೆ ಮಾಡುವ ಕೆಲಸಗಾರರಿಗೆ ಯಾರೂ ತೊಂದರೆ ಕೊಡಬಾರದು. ಈ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಿಪಿಐ ಪ್ರಭಾಕರ್ ಕಾರಣ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಆರೋಪಿಸಿದರು.
ತಾಲೂಕಿನ ಕಾವೇರಿಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ ಮಂಜು ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೈ ಕುಳಿಯೊಂದಿಗೆ ಗಣಿಯಲ್ಲಿ ಕೆಲಸ ಮಾಡುವವರಿಗೆ ತೊಂದರೆ ಕೊಡಬಾರದು ಎಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಮಾಡಿದ್ದೇನೆ. ಇಲ್ಲಿಯ ಸರ್ಕಲ್ ಇನ್ಸ್‌ಪೆಕ್ಟರ್ ಕಾರ್ಮಿಕರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಕೂಲಿ ಕಾರ್ಮಿಕರ ವಿರುದ್ಧ ದೂರು ದಾಖಲಿಸುವುದು. ಹಣ ವಸೂಲಿ ಮಾಡುವುದಕ್ಕೆ ನಿಂತಿದ್ದಾರೆ ಎಂದು ಕಿಡಿಕಾರಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಲಂಚಬಾಕತನದ ವಿರುದ್ಧ ಜಿಲ್ಲಾ ಮಂತ್ರಿ, ಐಜಿ ಮತ್ತು ಜಿಲ್ಲಾ ಎಸ್‌ಪಿ ಅವರಿಗೆ ಮಾತನಾಡಿದ್ದೇನೆ. ತಕ್ಷಣವೇ ಸಿಪಿಐ ಪ್ರಭಾಕರ್ ಸಸ್ಪೆಂಡ್ ಆಗಬೇಕು. ಈ ಸಾವಿಗೆ ಅವರೇ ನೇರ ಹೊಣೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದರು.
ತಂದೆ ಮಾಡಿದ ಸಾಲಕ್ಕಾಗಿ ಇಬ್ಬರು ಮಕ್ಕಳು ಜೀತ, ದಂಪತಿ ಸೆರೆ
ಮೃತನ ಕುಟುಂಬದವರ ಮನವೊಲಿಕೆ: ಮೃತನ ಕುಟುಂಬದವರನ್ನು ಸಮಾಧಾನ ಮಾಡಿದ್ದೇನೆ. ಶವವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸುವವರಿದ್ದರು. ಜಿಲ್ಲಾ ಮಂತ್ರಿ ಸಿಪಿಐ ಪ್ರಭಾಕರ್‌ನನ್ನು ಸಸ್ಪೆಂಡ್ ಮಾಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದೇವೆ ಎಂದು ಹೇಳಿದರು.
ಕೆಆರ್‌ಎಸ್ ವಿಷಯವೇ ಬೇರೆ. ಈ ವಿಷಯವೇ ಬೇರೆ. ಕೈ ಕುಳಿ ಕೆಲಸ ಮಾಡುವ ಸಾವಿರಾರು ಜನರು ಬೀದಿಪಾಲಾಗುವ ಸ್ಥಿತಿ ತಲುಪಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಮೂರು ಮಕ್ಕಳು. ಒಂದು ವಾರದಿಂದ ಅಲ್ಲಿ ಕೆಲಸ ಮಾಡಲು ಬಿಟ್ಟಿಲ್ಲ. ಲೋಕಾಯುಕ್ತ ಬರ್ತಾರೆ, ಗಣಿ ಅಧಿಕಾರಿಗಳು ಬರ್ತಾರೆ ಎಂದು ಹೆದರಿಸಿದ್ದಾರೆ. ಇದರಿಂದ ಈ ಸಮಸ್ಯೆಗಳು ಉದ್ಭವವಾಗಿವೆ. ಸಿಪಿಐಗೆ ತಕ್ಕ ಶಾಸ್ತಿ ಆಗಲಿದೆ ಎಂದು ಭರವಸೆ ನೀಡಿದರು.
ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾಗಿದ್ದ ಆಂಟಿಯ ಬಂಧನ
ಕೂಲಿ ಕಾರ್ಮಿಕರ ಬದುಕಿನ ರಕ್ಷಣೆ ನಮಗೆ ಮುಖ್ಯ. ಯಾವುದೇ ಕಾರಣಕ್ಕೂ ಅವರಿಗೆ ತೊಂದರೆಯಾಗಬಾರದು. ಅವರ ಬದುಕು ವ್ಯವಸ್ಥಿತವಾಗಿ ನಡೆಯಬೇಕು. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವುದಕ್ಕೂ ವ್ಯವಸ್ಥೆ ಮಾಡುತ್ತೇನೆ. ಶಾಸಕನಾಗಿ ನನ್ನ ಜವಾಬ್ದಾರಿಯೂ ಇದೆ. ಆ ಮೂರು ಮಕ್ಕಳನ್ನು ರಕ್ಷಣೆ ಮಾಡಿ ಆರ್ಥಿಕ ಭದ್ರತೆ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.