ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾಗಿದ್ದ ಆಂಟಿಯ ಬಂಧನ

Published : Jul 29, 2022, 10:49 AM ISTUpdated : Jul 29, 2022, 10:56 AM IST
ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾಗಿದ್ದ ಆಂಟಿಯ ಬಂಧನ

ಸಾರಾಂಶ

ಮೊಬೈಲ್‌ ಫೋನ್‌ ಸಿಗ್ನಲ್‌ ಮೂಲಕ ಬಾಲಕ, ಮಹಿಳೆ ಇಬ್ಬರೂ ಇದ್ದ ಜಾಗವನ್ನು ಪತ್ತೆ ಹಚ್ಚಿದ್ದಾರೆ. ನಂತರ, ಮಂಗಳವಾರ ರಾತ್ರಿ ಹೈದರಾಬಾದ್‌ಗೆ ತೆರಳಿದ್ದ ಪೊಲೀಸ್‌ ತಂಡ, ಬುಧವಾರ ಗುಡಿವಾಡಕ್ಕೆ ವಾಪಸ್‌ ಕರೆತಂದಿದೆ ಎಂದು ತಿಳಿದುಬಂದಿದೆ.     

ಆಂಧ್ರಪ್ರದೇಶದಲ್ಲಿ 14 ವರ್ಷದ ಅಪ್ರಾಪ್ತ ಬಾಲಕನನ್ನು 31 ವರ್ಷದ ಮಹಿಳೆ ಕಿಡ್ನ್ಯಾಪ್‌ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಸದ್ಯ, ಆ ಬಾಲಕನನ್ನು ರಕ್ಷಿಸಲಾಗಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಬಾಲಕನನ ಅಪಹರಣ ಪ್ರಕರಣ ಸುಖಾಂತ್ಯವಾದಂತಿದೆ.

ನಾಲ್ಕು ಮಕ್ಕಳ ತಾಯಿ ಹಾಗೂ 4 ಮಕ್ಕಳ ತಾಯಿಯನ್ನು ಗುಡಿವಾಡ ಪೊಲೀಸರು ಬಂಧಿಸಿದ್ದು, ಬಾಲಕನನ್ನು ಆತನ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಗುಡಿವಾಡದ ಸರ್ಕಲ್‌ ಇನ್ಸ್‌ಪೆಕ್ಟರ್‌ ವಿ. ದುರ್ಗಾ ರಾವ್‌ ಹೇಳಿದ್ದಾರೆ. ಆರೋಪಿ ಮಹಿಳೆ ವಿರುದ್ಧ ಅಪಹರಣ ಪ್ರಕರಣ ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಮಹಿಳೆಯನ್ನು ಕೋರ್ಟ್‌ ಎದುರು ವಿಚಾರಣೆಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡ ಟೌನ್‌ ಮೂಲದ ಮಹಿಳೆ ಬಾಳಾನಗರ ಪ್ರದೇಶದಲ್ಲಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದರು. 

ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾದ ಎದುರು ಮನೆಯ ಆಂಟಿ!

ಈ ಬಗ್ಗೆ ಮಾಹಿತಿ ನೀಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ವಿ. ದುರ್ಗಾ ರಾವ್‌, ಬಾಲಕನನ್ನು ಪೋಷಕರಿಗೆ ಒಪ್ಪಿಸಲಾಗಿದ್ದು, ಮಹಿಳೆಯನ್ನು ಕೋರ್ಟ್‌ ಎದುರು ವಿಚಾರಣೆಗೆ ಹಾಜರುಪಡಿಸಲಾಯಿತು. ಬಳಿಕ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮಹಿಳೆ ಮೊಬೈಲ್‌ ಫೋನ್‌ನಲ್ಲಿ ತನ್ನ ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ, 14 ವರ್ಷದ ಆ ಬಾಲಕನೊಂದಿಗೆ ಆಕರ್ಷಿತಳಾಗಿದ್ದ ಮಹಿಳೆ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕ ಸಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ, ಆದರೆ ಆತ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಹಾಗೂ, ಆರೋಪಿ ಮಹಿಳೆಯ ಮನೆಗೆ ಆಗಾಗ ಹೋಗುವುದಕ್ಕೆ ಪೋಷಕರು ಬಾಲಕನನ್ನು ಬೈಯುತ್ತಿದ್ದರು. ನಂತರ, ಬಾಲಕ ಈ ಬಗ್ಗೆ ಮಹಿಳೆಗೆ ತಿಳಿಸಿದಾಗ, ಬಾಲಕನೊಂದಿಗೆ ಓಡಿಹೋಗಲು ಮಹಿಳೆ ಪ್ಲ್ಯಾನ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಪಕ್ಕದೂರಿನವನ ಜತೆ ಹೆಂಡತಿ ಚಕ್ಕಂದ; ಬೇಸತ್ತು ಗಂಡ ನೇಣಿಗೆ ಶರಣು

ಹೈದರಾಬಾದ್‌ಗೆ ಬಾಲಕನನ್ನು ಕರೆದೊಯ್ದಿದ್ದ ಮಹಿಳೆ
ಜುಲೈ 19ರಂದು ತನ್ನ ಪತಿ ಹಾಗೂ ಮಕ್ಕಳಿಗೆ ಹೇಳದೆ ಬಾಲಕನನ್ನು ಹೈದರಾಬಾದ್‌ಗೆ ಆರೋಪಿ ಮಹಿಳೆ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಬಾಲಕ ಸಹ ನಾಪತ್ತೆಯಾದ ಬಳಿಕ, ಆತನ ಪೋಷಕರು ಅನುಮಾನಗೊಂಡರು. ಈ ಹಿನ್ನೆಲೆ, ಪೊಲೀಸರಿಗೆ ದೂರು ನೀಡಿದ್ದ ಪೋಷಕರು, ಈ ಪ್ರಕರಣದಲ್ಲಿ ಮಹಿಳೆಯ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಆದರೆ, ಹೈದರಾಬಾದ್‌ನಲ್ಲಿ ಕೆಲ ದಿನಗಳು ತಂಗಿದ್ದ ಬಳಿಕ ಬಾಲಕನಿಗೆ ತನ್ನ ಮನೆಗೆ ಹೋಗುವ ಇಚ್ಚೆ ಉಂಟಾಗಿದೆ. ಈ ಬಗ್ಗೆ ಆತ ಮಹಿಳೆಗೆ ಹೇಳಿದಾಗ ಆಕೆ ವಾಪಸ್‌ ಗುಡಿವಾಡಕಕೆ ಹೋಗಲು ತನ್ನ ಬಳಿ ಹಣವಿಲ್ಲ ಎಂದಿದ್ದಾರೆ. ನಂತರ, ಬಾಲಕ ಗೆಳೆಯರಿಗೆ ಕರೆ ಮಾಡಿ ಸಹಾಯ ಮಾಡಲು ಕೇಳಿದ್ದಾನೆ. ಆದರೂ, ನೆರವು ದೊರೆಯದಾಗ ಕೊನೆಗೆ ಪೋಷಕರಿಗೆ ಕರೆ ಮಾಡಿ ಮನೆಗೆ ವಾಪಸ್‌ ಕರೆದೊಯ್ಯುವಂತೆ ಬೇಡಿಕೊಂಡಿದ್ದ ಎಂದು ತಿಳಿದುಬಂದಿದೆ. 

ನಂತರ, ಪೋಷಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಮೊಬೈಲ್‌ ಫೋನ್‌ ಸಿಗ್ನಲ್‌ ಮೂಲಕ ಅವರಿಬ್ಬರು ಇದ್ದ ಜಾಗವನ್ನು ಪತ್ತೆ ಹಚ್ಚಿದ್ದಾರೆ. ನಂತರ, ಮಂಗಳವಾರ ರಾತ್ರಿ ಹೈದರಾಬಾದ್‌ಗೆ ತೆರಳಿದ್ದ ಪೊಲೀಸ್‌ ತಂಡ, ಬುಧವಾರ ಗುಡಿವಾಡಕ್ಕೆ ವಾಪಸ್‌ ಕರೆತಂದಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ಬಾಲಕ ಸುರಕ್ಷಿತವಾಗಿ ಮನೆಗೆ ಬಂದಿದ್ದು, ಕಿಡ್ನ್ಯಾಪ್‌ ಪ್ರಕರಣ ಸುಖಾಂತ್ಯವಾದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು