Udupi: ನಿಷೇಧಿತ ಪಚ್ಚಿಲೆ ಅಜೀರ್ ಮೀನುಗಾರಿಕೆ: ಏಳು ಮಂದಿ ಬಂಧನ

By Girish GoudarFirst Published Mar 19, 2022, 10:41 AM IST
Highlights

*  ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ಸಮುದ್ರತೀರದಲ್ಲಿ ಅಕ್ರಮ ಮೀನುಗಾರಿಕೆ 
*  ಒಂದು ಪುಟ್ಟ ಗೋಣಿಚೀಲ ಮೀನಿಗೆ 9 ರಿಂದ 10 ಸಾವಿರ ರೂ. ಬೆಲೆ
*  ಮೀನುಗಾರಿಕೆಯ ಹಿತದೃಷ್ಟಿಯಿಂದ ಇವುಗಳ ರಕ್ಷಿಣೆ    

ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ(ಮಾ.19):  ಉಡುಪಿ(Udupi) ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ಸಮುದ್ರತೀರದಲ್ಲಿ ನಿಷೇಧಿತ ಪಚ್ಚಿಲೆ ಅಜೀರ್ ಮೀನು ತೆಗೆಯುತ್ತಿದ್ದ ಏಳು ಮಂದಿಯನ್ನು ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ. ಅಕ್ರಮ ಮೀನುಗಾರಿಕೆ(Illegal Fishing) ನಡೆಸುತ್ತಿದ್ದ ಅನ್ಯರಾಜ್ಯದ ಮೀನುಗಾರರು ಸದ್ಯ ಪೊಲೀಸರ ವಶದಲ್ಲಿದ್ದಾರೆ. ಬಂಡೆ ಕಲ್ಲಿಗೆ ಅಂಟಿಕೊಂಡಿರುವ ಪಚ್ಚಿಲೆ ಮೀನು ತೆಗೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮೀನುಗಾರರು ಅವರನ್ನು ಉಚ್ಚಿಲದ ಸುಭಾಷ್ ರಸ್ತೆ ಬಳಿಯ ಸಮುದ್ರ ಕಿನಾರೆಗೆ ತಂದಿದ್ದರು. ಬಳಿಕ ಪಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ನೀಡಿದ್ದಾರೆ.

ಸದ್ಯ ಅವರು ಮೀನು(Fish) ಹಿಡಿಯಲು ಬಳಸುತ್ತಿದ್ದ ದೋಣಿಯನ್ನು ಕೂಡ ದಂಡೆಗೆ ತಂದು ನಿಲ್ಲಿಸಲಾಗಿದೆ. ಕರ್ನಾಟಕ ಕರಾವಳಿ ಪರಿಸರದಲ್ಲಿ ಬಂಡೆಗೆ ಅಂಟಿಕೊಂಡಿರುವ ಈ ಜಾತಿಯ ಮೀನನ್ನು ಹಿಡಿಯುವುದು ನಿಷೇಧಿಸಲಾಗಿದೆ. ಬಂಡೆಗೆ ಆಂಟಿಕೊಂಡಿರುವ ಪಚ್ಚಿಲೆ ಮೀನನ್ನು ತಿನ್ನಲು ನಾನಾ ಜಾತಿಯ ಮೀನುಗಳು ತೀರ ಪ್ರದೇಶಕ್ಕೆ ಬರುತ್ತವೆ. ತೀರ ಪ್ರದೇಶಕ್ಕೆ ಬರುವ ಇಂತಹ ಮೀನುಗಳನ್ನು ಹಿಡಿದು ಮೀನುಗಾರರು ತಮ್ಮ ದೈನಂದಿನ ಮೀನುಗಾರಿಕೆ ನಡೆಸುತ್ತಾರೆ. ಒಂದು ವೇಳೆ ಪಚ್ಚಿಲೆ ಮೀನನ್ನು ತೆರವುಗೊಳಿಸಿದರೆ ತೀರ ಪ್ರದೇಶಕ್ಕೆ ಬರುವ ಮೀನುಗಳ ಸಂಖ್ಯೆ ಇಳಿಮುಖವಾಗುತ್ತದೆ. ಹಾಗಾಗಿ ಸ್ಥಳೀಯ ಮೀನುಗಾರರು(Fishermen) ಯಾರೂ ಪಚ್ಚಿಲೆ ಮೀನನ್ನು ತೆಗೆಯುವುದಿಲ್ಲ. 
ಹೆಚ್ಚಾಗಿ ತಮಿಳುನಾಡು(Tamil Nadu) ಭಾಗದಿಂದ ಬರುವ ಮೀನುಗಾರರು ಇವುಗಳ ಅಕ್ರಮ ಮೀನುಗಾರಿಕೆ ನಡೆಸುತ್ತಾರೆ ಸ್ಥಳೀಯ ಭಾಷೆಯಲ್ಲಿ ಪಚ್ಚಿಲೆ ಅಜೀರ್ ಅಥವಾ ನೀಲಿಕಲ್ ಎಂದು ಕರೆಯಲಾಗುವ ಈ ಮೀನಿನ ವೈಜ್ಞಾನಿಕ ಹೆಸರು ಪರ್ನವಿಡೀಸ್.

Karnataka Budget 2022: ಮೀನುಗಾರಿಕೆ ಕ್ಷೇತ್ರಕ್ಕೆ "ಮತ್ಸ್ಯ ಸಿರಿ" ಎಂಬ ವಿ‍ಶೇಷ ಯೋಜನೆ  ಘೋಷಿಸಿದ ಬೊಮ್ಮಾಯಿ

ಒಂದು ಪುಟ್ಟ ಗೋಣಿಚೀಲ ಮೀನಿಗೆ ಸುಮಾರು 9 ರಿಂದ 10 ಸಾವಿರ ರೂಪಾಯಿ ಬೆಲೆ ಇರುತ್ತೆ. ಕೇರಳದಲ್ಲಿ ಈ ಮೀನು ಸುಮಾರು 15 ಸಾವಿರಕ್ಕೂ ಮಾರಾಟವಾಗುತ್ತದೆ ಸಂತತಿ ಉಳಿಸುವ ದೃಷ್ಟಿಯಿಂದ ಈ ಮೀನನ್ನು ಕರ್ನಾಟಕ(Karnataka) ಕರಾವಳಿಯ ಮೀನುಗಾರರು ಉಳಿಸಿಕೊಂಡು ಬಂದಿದ್ದಾರೆ ಆದರೆ ತಮಿಳುನಾಡಿದ ಮೀನುಗಾರರು ಇದನ್ನು ಹಿಡಿದು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ. ವೈಲ್ಡ್ ಲೈಫ್(Wild Life Act) ಆಕ್ಟ್ ಪ್ರಕಾರ ಈ ಮೀನುಗಾರಿಕೆ ಮೀನನ್ನು ಹಿಡಿಯುವುದು ನಿಷೇಧಿಸಿಲ್ಲ. ಅದರ ಮೀನುಗಾರಿಕೆಯ ಹಿತದೃಷ್ಟಿಯಿಂದ ಇವುಗಳನ್ನು ರಕ್ಷಿಸಿಕೊಂಡು ಬರಲಾಗಿದೆ.

ಭಾರಿ ಗಾತ್ರದ ಮೀನನ್ನು ಒಂಟಿಯಾಗಿ ದೋಣಿಗೇರಿಸಿದ ಮೀನುಗಾರ ಮಹಿಳೆ

ಮೀನುಗಾರ ಮಹಿಳೆಯೊಬ್ಬರು  450 ಕೆ.ಜಿ ತೂಗುತ್ತಿದ್ದ ಬ್ಲೂಫಿನ್ ಟ್ಯೂನ ಮೀನನ್ನು ಒಬ್ಬಂಟಿಯಾಗಿ ಮೇಲೆತ್ತಿ ತನ್ನ ದೋಣಿಗೆ ಎಳೆದುಕೊಂಡು ಹೋಗಿ ಹಾಕಿದ್ದು, ನೆಟ್ಟಿಗರು ಆಕೆಯ ಧೈರ್ಯ ಹಾಗೂ ಸಾಮರ್ಥ್ಯಕ್ಕೆ ವಿಸ್ಮಯಗೊಂಡಿದ್ದಾರೆ. ಮಿಚೆಲ್ ಬ್ಯಾನ್ಸ್ವಿಕ್ಜ್ ಸಿಕಾಲೆ (Michelle Bancewicz Cicale) ಎಂಬ ಮೀನುಗಾರಿಕಾ ಮಹಿಳೆ ನ್ಯೂ ಹ್ಯಾಂಪ್‌ಶೈರ್‌ನ ( New Hampshire) ಹ್ಯಾಂಪ್ಟನ್ ಬೀಚ್‌ನಲ್ಲಿ (Hampton Beach) ದೈತ್ಯಾಕಾರದ ಮೀನನ್ನು ಹಿಡಿದಿದ್ದಾಳೆ. ಈ ಮೀನು ಬರೋಬರಿ   450 ಕೆಜಿ ತೂಕವಿತ್ತು. ಅಲ್ಲದೇ ಕಳೆದ ಆಕ್ಟೋಬರ್‌ನಲ್ಲಿ 643 ಕೆಜಿ ತೂಕದ ಮೀನನ್ನು ಕೂಡ ಈ ಮಹಿಳೆ ಹಿಡಿದಿದ್ದಳಂತೆ. 

ಈ ಮೀನನ್ನು ಒಂದೇ ಬಾರಿಗೆ ಹಿಡಿದು ದೋಣಿಗೆ ಹಾಕಲು ಅಗಾಧ ಪ್ರಮಾಣದ ಶಕ್ತಿ ಹಾಗೂ ಕೌಶಲ್ಯಪೂರ್ಣ ಸಾಮರ್ಥ್ಯ ಬೇಕಾಗುತ್ತದೆ. ಸಣ್ಣ ಮೀನುಗಳನ್ನು ಸುಲಭವಾಗಿ ಹಿಡಿದು ರಾಡ್‌ನ ತ್ವರಿತ ಎಳೆತದಿಂದ ಒಮ್ಮೆಗೆ ದೋಣಿಗೇರಿಸಬಹುದು. ಆದರೆ ದೊಡ್ಡ ಗಾತ್ರದ ಮೀನುಗಳಿಗೆ ಸಂಪೂರ್ಣ ವಿಭಿನ್ನವಾದ ಉಪಕರಣಗಳು ಮತ್ತು ಹೆಚ್ಚಿನ ಶ್ರಮ ಬೇಕಾಗುತ್ತದೆ.
 

click me!