ಅಂತಧರ್ಮೀಯರಾಗಿದ್ದರೂ ಪರಸ್ಪರ ಪ್ರೀತಿಸುತ್ತಿದ್ದ ಹಿಂದೂ- ಮುಸ್ಲಿಂ ಪ್ರೇಮಿಗಳು, ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಧಾರವಾಡ (ಮಾ.29): ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಪೋಷಕರ ವಿರೋಧದ ನಡುವೆಯೂ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ ಮದುವೆಯನ್ನೂ ಆಗಿದ್ದರು. ಮದುವೆಯಾದರೂ ಪೋಷಕರ ವಿರೋಧದ ಮುಂದುವರಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಜ್ಯಾದ್ಯಂತ ಹಿಂದೂ- ಮುಸ್ಲಿಮರ ನಡುವೆ ಧರ್ಮದಂಗಲ್ ಕಿಚ್ಚು ಹೊತ್ತಿದೆ. ಜೊತೆಗೆ, ಲವ್ ಜಿಹಾದ್‌ನಂತಹ ಘಟನೆಗಳು ಕೂಡ ನಡೆಯುತ್ತಿವೆ. ಆದರೆ, ಧಾರವಾಡ ತಾಲೂಕಿನ ಹೆಬ್ಬಳ್ಳಿಯಲ್ಲಿ ಹಿಂದೂ ಧರ್ಮದ ಹುಡುಗ ಮತ್ತು ಮುಸ್ಲಿಂ ಧರ್ಮದ ಹುಡಿಗಿ ಮದುವೆ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರ, ಇಬ್ಬರೂ ಪ್ರೀತಿ ಮಾಡುವುದನ್ನು ತಿಳಿದು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಪ್ರೀತಿಗೆ ಪೋಷಕರು ವಿರೋಧ ಮಾಡಿದ ಹಿನ್ನಲೆಯಲ್ಲಿ, ಪ್ರೇಮಿಗಳ್ಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವರ್ಷದ ಬಳಿಕ ಮಡಹಳ್ಳಿ ಗುಡ್ಡ ಕುಸಿತ ಆರೋಪಿಗಳ ಬಂಧನ: ಕೇರಳದಲ್ಲಿ ಅರೆಸ್ಟ್
ಗುಡ್ಡದ ಪಾಳು ಮನೆಯಲ್ಲಿ ನೇಣಿಗೆ ಶರಣು: ಗ್ರಾಮದ ಮೈಲಾರಿ ಕಾಲಾಳದ (23) ಹಾಗೂ ಮದೀನಾ ಕೊಣ್ಣೂರು ಮೃತಪಟ್ಟವರು. ಕೆಲ ವರ್ಷದಿಂದ ಪ್ರೀತಿಯಲ್ಲಿದ್ದ ಈ ಜೋಡಿಗೆ ಪೋಷಕರ ವಿರೋಧ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಓಡಿ ಹೋಗಿದ್ದ ಈ ಜೋಡಿಯು ಮದುವೆಯನ್ನೂ ಆಗಿದ್ದರು. ಆದರೆ, ಈಗ ಇದ್ದಕ್ಕಿದ್ದಂತೆ ಹೆಬ್ಬಳ್ಳಿ ಗ್ರಾಮದ ಗುಡ್ಡದಲ್ಲಿರುವ ಪಾಳು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ ರಾತ್ರಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಈ ಜೋಡಿಗಳ ಮೃತ ದೇಹವನ್ನು ಗ್ರಾಮಸ್ಥರು ಬುಧವಾರ ಬೆಳಗ್ಗೆ ಕಂಡು ಬೆಚ್ಚಿ ಬಿದ್ದಿದ್ದಾರೆ.
ಓಡಿ ಹೋಗಿದ್ದರೂ ಗ್ರಾಮಕ್ಕೆ ಬಂದಿದ್ದೇಕೆ?: ಈ ಘಟನೆಯ ಕುರಿತಂತೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಇದು ಆತ್ಮಹತ್ಯೆ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆಯನ್ನೂ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದು ತಿಳಿದುಬಂದಿದ್ದು, ಅವರು ಓಡಿ ಹೋಗಿದ್ದರೂ ಪುನಃ ಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವನ್ನು ಹುಡುಕುತ್ತಿದ್ದಾರೆ. ಇನ್ನು ಘಟನೆಯ ಕುರಿತಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಸಂಬಂಧ ಶಂಕೆ: ವಿವಾಹಿತ ಸೋದರಿಯನ್ನೇ ಕೊಂದು ನದಿಗೆಸೆದ ಸೋದರರು!
ಬೈಕ್‌ಗಳ ಮುಖಾಮುಖಿ ಡಿಕ್ಕಿ: ಟ್ಯಾಕ್ಟರ್ ಹರಿದು ಮಹಿಳೆ ಸಾವು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ನೀರಮಾನ್ವಿ ಬಳಿ ಬೈಕ್‌ಗಳೆರೆಡು ಮುಖಾಮುಖಿ ಡಿಕ್ಕಿಯಾಗಿವೆ. ಬೈಕ್ ಡಿಕ್ಕಿಯ ನಂತರ ರಸ್ತೆ ಮೇಲೆ ಬಿದ್ದ ಹಿಂಬದಿ ಸವಾರ ಮಹಿಳೆಯ ತಲೆಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಬೈಕ್ ಸವಾರನಿಗೆ ತೀವ್ರ ಗಾಯವಾಗಿದೆ. ಬೈಕ್‌ನ ಹಿಂಬದಿಯಲ್ಲಿ ಕುಳಿತ ಸುವರ್ಣ(28) ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಳ ಪತಿ ರಾಘವೇಂದ್ರಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ಕೂಡಲೇ ಗಾಯಾಳುವನ್ನು ಮಾನ್ವಿ ತಾಲೂಕು ದಾಖಲುಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತಂದತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಇನ್ನು ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ ಪೊಲೀಸರು, ರಸ್ತೆಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ತೆರವು ಮಾಡಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.