Bengaluru: ಕಾರಿನೊಳಗೆ ಸುಟ್ಟು ಭಸ್ಮವಾದ ಅಪರಿಚಿತ ವ್ಯಕ್ತಿ, ಚಿಂದಿ ಆಯುವವನ ಪ್ರಾಣ ತೆಗೆದ ಬೀಡಿ!

By Gowthami K  |  First Published Mar 29, 2023, 5:51 PM IST

ಕಾರ್ ಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿಯೋರ್ವ  ಕಾರಿನಲ್ಲಿ ಸುಟ್ಟು ಭಸ್ಮವಾದ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವ್ಯಕ್ತಿ ಬೀಡಿ ಸೇದಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.


ಬೆಂಗಳೂರು (ಮಾ.29): ಕಾರ್ ಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿಯೋರ್ವ  ಕಾರಿನಲ್ಲಿ ಸುಟ್ಟು ಭಸ್ಮವಾದ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ  ಕಾರನ್ನು ಹತ್ತಿರ ಬಂದು ನೋಡಿದ ಸ್ಥಳೀಯರಿಗೆ ಕಾರ್ ನಲ್ಲಿ ವ್ಯಕ್ತಿ ಇರುವುದು ಪತ್ತೆಯಾಗಿದೆ. ತಕ್ಷಣ  ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ಕಾರ್ ನಲ್ಲಿ ಮಲಗಿದ್ದ ಭಿಕ್ಷುಕ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ವ್ಯಕ್ತಿಯ ಮಾಹಿತಿ ‌ಸಂಗ್ರಹಿಸುತ್ತಿದ್ದಾರೆ.

ಗುಜರಿ ವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಕಸ ಆಯುವ ಅಪರಿಚಿತ ವ್ಯಕ್ತಿ ರಾತ್ರಿ ಮಲಗಿದ್ದ ಬಗ್ಗೆ ಪೊಲೀಸರು  ಶಂಕೆ ವ್ಯಕ್ತಪಡಿಸಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಕಸ ಆಯ್ದ ಬಳಿಕ‌ ವ್ಯಕ್ತಿ ಸ್ಕ್ರಾಪ್ ಕಾರಿನಲ್ಲಿ ಮಲಗಿದ್ದ. ನಂತರ ರಸ್ತೆ ಬಳಿ ಬಂದು ಕುಳಿತಿದ್ದಾನೆ. ಬೀಡಿ ಹಚ್ಚಿಕೊಂಡು ಮತ್ತೆ ಕಾರಿನೊಳಗೆ ಹೋಗಿದ್ದಾನೆ. ಈ ವೇಳೆ ನಿಧಾನಕ್ಕೆ ಬೆಂಕಿ ಆವರಿಸಿಕೊಂಡಿದೆ. ಸಂಪೂರ್ಣ ಕಾರಿಗೆ ಬೆಂಕಿ ಆವರಿಸಿಕೊಂಡಿದೆ. ಒಮ್ಮೆಲೆ ಬೆಂಕಿ ಹೆಚ್ಚಾಗಿ ಕಾರಿನಲ್ಲಿದ್ದ ವ್ಯಕ್ತಿ ಸುಟ್ಟು ಕರಕಲು ಆಗಿದ್ದು, ಸಜೀವ ದಹನವಾಗಿದ್ದಾನೆ. ಮೃತ ವ್ಯಕ್ತಿ ಗುರುತು ಇನ್ನೂ ಪತ್ತೆಯಾಗಿಲ್ಲ.

Latest Videos

undefined

BENGALURU: ಆಗಷ್ಟೇ ಹುಟ್ಟಿದ ಮಗುವನ್ನು ದೇವಾಲಯದ ‌ಬಳಿ ಬಿಟ್ಟು ಹೋದ ಪಾಪಿಗಳು!

ಬಿಜೆಪಿ ಅಭ್ಯರ್ಥಿ ಉಡುಗೊರೆಗೆ ಬೆಂಕಿ
ಚನ್ನಪಟ್ಟಣ: ತಮ್ಮ ಸಮುದಾಯಕ್ಕೆ ಒಬಿಸಿ 2ಬಿ ಅಡಿಯಲ್ಲಿ ನೀಡಿದ್ದ ಶೇ.4 ರಷ್ಟುಮೀಸಲಾತಿಯನ್ನು ರದ್ದುಪಡಿಸಿರುವ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನಗೊಂಡಿರುವ ಮುಸ್ಲಿಂ ಸಮುದಾಯದವರು, ನಗರದಲ್ಲಿ ಬಿಜೆಪಿ ಅಭ್ಯರ್ಥಿ ಹಂಚಿಕೆ ಮಾಡಿದ್ದ ಸೀರೆಗಳಿಗೆ ಸಾರ್ವಜನಿಕವಾಗಿ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚಿಗಷ್ಟೇ ಒಬಿಸಿ 2ಬಿ ಅಡಿ ನೀಡಲಾಗಿದ್ದ ಮೀಸಲಾತಿಯನ್ನು ಸರ್ಕಾರ ರದ್ದುಪಡಿಸಿತ್ತು. ಇದಕ್ಕೆ ಮುಸ್ಲೀಂ ಸಮುದಾಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದು, ಬಿಜೆಪಿ ಅಭ್ಯರ್ಥಿ ನೀಡಿದ ಸೀರೆಗೆ ಬೆಂಕಿಹಚ್ಚಿ ತನ್ನ ವಿರೋಧ ವ್ಯಕ್ತಪಡಿಸಿದೆ.

Chitraduraga: ಗುಂಡಿಕೆರೆಯಲ್ಲಿ ಈಜಲು ತೆರಳಿದ್ದ 3 ವಿದ್ಯಾರ್ಥಿಗಳು, ಹೊನ್ನೇಕೆರೆಯಲ್ಲಿ ಓರ್ವ ವಿದ್ಯಾರ್ಥಿ

ವಿಧಾನಪರಿಷತ್‌ ಸದಸ್ಯ ಹಾಗೂ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ ಅವರ ಬೆಂಬಲಿಗರು ಚನ್ನಪಟ್ಟಣದ 17ನೇ ವಾರ್ಡ್‌ನಲ್ಲಿ ಸೀರೆಗಳನ್ನು ಹಂಚಿಕೆಮಾಡಿದ್ದರು. ರಂಜಾನ್‌ ಉಪವಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಡುಗೊರೆ ನೀಡುವುದನ್ನು ಸ್ಥಳೀಯರು ವಿರೋಧಿಸಿದ್ದರು. ಆದರೂ ಬಿಜೆಪಿ ಕಾರ‍್ಯಕರ್ತರು ಸೀರೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ನಗರಸಭಾ ಮಾಜಿ ಸದಸ್ಯ ಝಕಿ ನೇತೃತ್ವದಲ್ಲಿ ಸ್ಥಳೀಯರು ಸೀರೆಗಳಿಗೆ ಪೆಟ್ರೋಲ್‌ ಸುರಿದು ಬೆಂಕಿಹಾಕಿದ್ದಾರೆ. ಸೀರೆ ಸುಡುವ ದೃಶ್ಯವನ್ನು ಫೇಸ್‌ಬುಕ್‌ ಲೈವ್‌ ಮೂಲಕ ಪ್ರಸಾರ ಮಾಡಿದ್ದು, ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

click me!