
ಧಾಕಾ(ನ.05): ಬಾಂಗ್ಲಾದೇಶದ ಕುಮಿಲ್ಲಾ ನಗರದಲ್ಲಿ ಹಿಂದೂ ಜನರ ಮನೆಗಳಿಗೆ ಬೆಂಕಿ ಇಡಲಾಗಿದೆ. ಕೆಲವು ಮೂಲಭೂತವಾದಿ ಮುಸ್ಲಿಮರು ಫೇಸ್‌ಬುಕ್ ಪೋಸ್ಟ್ ವಿರೋಧಿಸಿ ಕೃತ್ಯ ಎಸಗಿದ್ದಾರೆ.
ಇಸ್ಲಾಂ ವಿರುದ್ಧ ಇದ್ದ ಫೇಸ್‌ಬುಕ್ ಪೋಸ್ಟ್ ಬಗ್ಗೆ ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಮನೆಗಳನ್ನು ಸುಟ್ಟು ಹಾಕಿದ್ದಾರೆ.
ಪ್ಯಾರಿಸ್‌ನಲ್ಲಿ ಶಿಕ್ಷಕನನ್ನು ಬಾಲಕ ಕೊಂದ ಘಟನೆ ಬೆನ್ನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರಾನ್ ತೆಗೆದುಕೊಂಡ ನಿರ್ಧಾರಗಳನ್ನು ಫ್ಯಾನ್ಸ್‌ನಲ್ಲಿರುವ ಬಾಂಗ್ಲಾದೇಶಿ ಪ್ರಜೆ ಹೊಗಳಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದ.
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಈ 5 ಕಾರಣಗಳಿಂದ ಇಷ್ಟೊಂದು ಮತ ಗಳಿಸಿದ್ದಾರೆ ಟ್ರಂಪ್!
ಇದರ ಬೆನ್ನಲ್ಲಿಯೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆದಿದೆ. ಹಿಂದೂಗಳ ಮನೆ ಮೇಲೆ ದಾಳಿ ಮಾಡಿ ಅವುಗಳನ್ನು ಕೆಡವಲಾಗಿದೆ. ಒಂದಷ್ಟು ಮನೆಗಳನ್ನು ಸುಟ್ಟು ಹಾಕಲಾಗಿದೆ.
ಕುಮಿಲ್ಲಾ ಮುರದ್‌ನಗರದಲ್ಲಿ ಘಟನೆ ನಡೆದಿದ್ದು, ಖಮರುಝಮಾನ್ ತಾಲುಕ್ದಾರ್ ಎಂಬಾಂತ ಫೇಸ್‌ಬುಕ್ ಪೋಸ್ಟ್ ಹಾಕಿದ್ದ. ಇಬ್ಬರನ್ನು ಬಂಧಿಸಲಾಗಿದ್ದು, ಇವರಿಬ್ಬರು ಸೇರಿ ಬಹಳಷ್ಟು ಜನರ ಮನೆಗೆ ಬೆಂಕಿ ಇಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ