ಬಲವಂತದ ಮತಾಂತರ ಆರೋಪ, ಕ್ರಿಸ್ಮಸ್ ಸಂಭ್ರಮಾಚರಣೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿತ!

By Suvarna News  |  First Published Dec 24, 2022, 8:48 PM IST

ಕ್ರಿಸ್ಮಸ್ ಹಬ್ಬದ ಹೆಸರಿನಲ್ಲಿ ಗ್ರಾಮಕ್ಕೆ ತೆರಳಿ ಬಲವಂತದ ಮತಾಂತರ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಡಿಗೆ, ದೊಣ್ಣೆ ಹಿಡಿದು ನೇರವಾಗಿ ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದಲ್ಲಿಗೆ ತೆರಳಿ ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ.
 


ಉತ್ತರಕಾಶಿ(ಡಿ.24): ಕ್ರಿಸ್ಮಸ್ ಹಬ್ಬದ ಹೆಸರಿನಲ್ಲಿ ಕಳೆದ ಕೆಲ ದಿನಗಳಿಂದ ಬಲವಂತದ ಮತಾಂತರ ಆರೋಪ ಮಾಡುತ್ತಿರುವ ಆರೋಪ ಬಲವಾಗಿ ಕೇಳಿಬಂದಿದೆ. ಕ್ರಿಸ್ಮಸ್ ಹೆಸರಿನಲ್ಲಿ ಗ್ರಾಮ ಗ್ರಾಮಕ್ಕೆ ತೆರಳಿದ ಹಲವು ಕ್ರಿಶ್ಚಿಯನ್ ಮತಾಂತರಿಗಳು, ಹಿಂದೂ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಮತಾಂತರ ಮಾಡಿದ್ದಾರೆ. ಇದು ಹಿಂದೂ ಸಂಘಟನೆಗಳ ಗಮನಕ್ಕೆ ಬಂದಿದೆ. ಇದರಿಂದ ರೊಚ್ಚಿಗೆದ್ದ ಹಿಂದೂ ಸಂಘಟನೆ ಸದಸ್ಯರು ನೇರವಾಗಿ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಡೆದಿದೆ.

ಕ್ರಿಶ್ಚಿಯನ್ ಪಾದ್ರಿ ಲೇಜರಸ್ ಕಾರ್ನೆಲಿಯಸ್ ಹಾಗೂ ಅವರ ಪತ್ನಿ ಸುಷ್ಮಾ ಕಾರ್ನೆಲಿಯಸ್ ಮೇಲೆ ಮಾತಂತರ ಮಾಡಿದ ಆರೋಪ ಕೇಳಿಬಂದಿದೆ. ಇದರಿಂದ ಉದ್ರಿಕ್ತಗೊಂಡ ಹಿಂದೂ ಸಂಘಟನೆ ದಾಳಿ ಮಾಡಿದೆ. ದಾಳಿ ಮಾಡಿದ ಹಿಂದೂ ಸಂಘಟನೆಗಳ ಹಲವು ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Tap to resize

Latest Videos

ಧರ್ಮ ಮುಚ್ಚಿಟ್ಟು ಹಿಂದೂ ಯುವತಿಯ ವಿವಾಹಕ್ಕೆ ಯತ್ನ: ಮದುವೆಗೆ ದಿನವಿರುವಾಗ ವರ ಅಂದರ್

ಉತ್ತರಖಂಡ ರಾಜಧಾನಿ ಡೆಹ್ರಡೂನ್‌ನಿಂದ 150 ಕಿಲೋಮೀಟರ್ ದೂರದಲ್ಲಿರುವ ಉತ್ತರಕಾಶಿ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಪಾದ್ರಿ ಹಾಗೂ  ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಹಲವು ಗ್ರಾಮಕ್ಕೆ ತೆರಳಿ ಬಲವಂತದ ಮತಾಂತರ ಮಾಡಿದ್ದಾರೆ. ಈ ಕುರಿತು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ಆದರೆ ಮತಾಂತರ ಎಗ್ಗಿಲ್ಲದೆ ನಡೆಯುತ್ತಿತ್ತು. ಆರ್ಥಿಕವಾಗಿ ದುರ್ಬಲವಾಗಿರುವ ಹಿಂದೂ ಕುಟುಂಬಗಳಿಗೆ ಹಣದ ಆಮಿಷ ಒಡ್ಡಿ, ಇನ್ನೂ ಕೆಲ ಕುಟುಂಬಗಳಿಗೆ ಕೇಸ್ ಸೇರಿದಂತೆ ಇತರ ಬೆದರಿಕೆ ಒಡ್ಡಿ ಬಲವಂತವಾಗಿ ಮತಾಂತರ ಮಾಡಿದ್ದಾರೆ. 

ಈ ವಿಚಾರ ತಿಳಿದ ಹಿಂದೂ ಸಂಘಟನೆ ಸದಸ್ಯರು ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಪಾದ್ರಿ ಸೇರಿದಂತೆ ಹಲವು ಮತಾಂತರಿಗಳಿಗೆ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಉತ್ತರಖಂಡದಲ್ಲಿ ಮತಾಂತರ ವಿರೋಧಿ ಕಾಯ್ದಿಗೆ ರಾಜ್ಯಪಾಲರ ಅಂಕಿತ ಬಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಮಹಿಳೆ, ಮಕ್ಕಳೇ ವಿದೇಶಿ ದೇಣಿಗೆ ಪಡೆದ ಸಂಸ್ಥೆಗಳ ಮತಾಂತರ ಟಾರ್ಗೆಟ್‌: ಸುಪ್ರೀಂಕೋರ್ಟ್‌ಗೆ ಹೇಳಿಕೆ

 ಕಾನೂ​ನು​ಬಾ​ಹಿರ ಮತಾಂತ​ರವನ್ನು 10 ವರ್ಷ​ಗಳವರೆಗೆ ಜೈಲು ಶಿಕ್ಷೆ ನೀಡ​ಬಲ್ಲ ಜಾಮೀನು ರಹಿತ ಅಪ​ರಾಧವನ್ನಾ​ಗಿಸುವ ಧಾರ್ಮಿಕ ಸ್ವಾತಂತ್ರ್ಯ ತಿದ್ದುಪಡಿ ಕಾಯ್ದೆ 2022ಕ್ಕೆ ಉತ್ತ​ರಾ​ಖಂಡದ ರಾಜ್ಯ​ಪಾಲ ಲೆ. ಜನ​ರಲ್‌ (ನಿ​ವೃ​ತ್ತ) ಗುರ್ಮಿತ್‌ ಸಿಂಗ್‌ ಅವರ ಅಂಕಿತ ಸಿಕ್ಕಿ​ದೆ. ನ.30ರಂದು ರಾಜ್ಯ ವಿಧಾ​ನ​ಸ​ಭೆ​ಯಲ್ಲಿ ಈ ಮಸೂ​ದೆ​ಯನ್ನು ಅಂಗೀ​ಕ​ರಿ​ಸ​ಲಾ​ಗಿ​ತ್ತು. ಶನಿ​ವಾ​ರ ಇದಕ್ಕೆ ರಾಜ್ಯ​ಪಾ​ಲರ ಒಪ್ಪಿಗೆ ಸಿಕ್ಕಿದೆ ಎಂದು ಅಧಿ​ಕೃತ ಮೂಲ​ಗಳು ತಿಳಿ​ಸಿ​ವೆ. ರಾಜ್ಯ​ದಲ್ಲಿ ಇನ್ನು ಬಲ​ವಂತದ ಮತಾಂತರ ಮಾಡಿ​ದ್ದಲ್ಲಿ 10 ವರ್ಷ ಶಿಕ್ಷೆ ಮಾತ್ರ​ವ​ಲ್ಲದೇ 50,000 ರು. ದಂಡ​ವನ್ನು ವಿಧಿ​ಸ​ಲಾ​ಗು​ವುದು ಎಂದು ಕಾಯ್ದೆ ತಿಳಿ​ಸಿ​ದೆ.

ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲೂ ಇಂಥದ್ದೇ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಅಲ್ಲಿ ಬಲವಂತದ ಮತಾಂತರದ ವಿವಿಧ ಪ್ರಕರಣಗಳಿಗೆ 5ರಿಂದ 10 ವರ್ಷ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿತ್ತು.

ಮದುವೆಗಾಗಿ ಮತಾಂತರ ಇನ್ನು ಹರಾರ‍ಯಣದಲ್ಲಿ ಅಕ್ರಮ
 ಹರಾರ‍ಯಣದಲ್ಲಿ ಇನ್ನು ವಿವಾಹಕ್ಕಾಗಿ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದ್ದು, ಈ ಕುರಿತ ಮಸೂದೆಗೆ ರಾಜ್ಯಪಾಲರ ಅಂತಿಮ ಸಹಿ ಬಿದ್ದಿದೆ. ಈ ನಿಯಮ ಉಲ್ಲಂಘಿಸಿದರೆ 3 ರಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರಾಜ್ಯದಲ್ಲಿ ವಿವಾಹದ ಉದ್ದೇಶದಿಂದ ಹೆಚ್ಚುತ್ತಿರುವ ಮತಾಂತರದ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ನೇತೃತ್ವದ ಸರ್ಕಾರ ಮತಾಂತರ ತಡೆ ಮಸೂದೆ-2022ರ ಅನ್ನು ರೂಪಿಸಿತ್ತು. ಇದಕ್ಕೆ ವಿಧಾನಸಭೆ ಒಪ್ಪಿಗೆಗೂ ದೊರಕಿತ್ತು.

click me!