Moral Policing: 'ಬಿರಿಯಾನಿ'ಗಾಗಿ ಮುಸ್ಲಿಂ ಸ್ನೇಹಿತೆ ಮನೆಗೆ ಬಂದಿದ್ದ ಹಿಂದೂ ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ!

By Ravi Nayak  |  First Published Jul 23, 2022, 10:07 AM IST

ತನ್ನ ಸಹೋದರಿಗೆ ಬಿರಿಯಾನಿ ತಿನ್ನುವ ಆಸೆ. ಅದಕ್ಕಾಗಿ ಮುಸ್ಲಿ ಗೆಳತಿಯ ಮನೆಗೆ ಬಂದಿದ್ದ ಕಾವ್ಯ ಮೇಲೆ ಹಿಂದು ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿ. ದೂರು ದಾಖಲು


ಮಂಗಳೂರು (ಜು.23): ತನ್ನ ಗರ್ಭಿಣಿ ಸಹೋದರಿಗೆ ಬಿರಿಯಾನಿ ತಿನ್ನುವ ಆಸೆಯಾಗಿದೆ ಅಂತ ಮುಸ್ಲಿಂ ಸ್ನೇಹಿತೆಯ ಮನೆಗೆ ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ದ ಹಿಂದೂ ಯುವತಿ ಮೇಲೆ ನೈತಿಕ ಪೊಲೀಸರು ಮುಗಿಬಿದ್ದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಗ್ರಾಮದಲ್ಲಿ ನಡೆದಿದ್ದು, ಸದ್ಯ ನೈತಿಕ ಪೊಲೀಸ್ ಗಿರಿ ನಡೆಸಿದ ಹಿಂದೂ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಾಗಿದೆ. ‌

ಕಳೆದ ಜುಲೈ 12ರಂದು ಕೊಯಿಲಾ(Koila)ದ ಮುಸ್ಲಿಂ(Muslim) ಸ್ನೇಹಿತೆ ಮನೆಗೆ ಹಿಂದೂ(Hindu) ಯುವತಿಯೊಬ್ಬಳು ತೆರಳಿದ್ದು, ಇದನ್ನ ಗಮನಿಸಿದ ಹಿಂದೂ ಕಾರ್ಯಕರ್ತರು ಹಿಂಬಾಲಿಸಿಕೊಂಡು ಸಾಗಿ ಅಡ್ಡ ಹಾಕಿ ನೈತಿಕ ಪೊಲೀಸ್ ಗಿರಿ ತೋರಿದ್ದರು.‌ ಸಂಶೀನಾ(Samshina) ಎಂಬಾಕೆಯ ಮನೆಗೆ ಆಕೆಯ ಸ್ನೇಹಿತೆ ಕಾವ್ಯ(Kavya) ಸಂಶೀನಾ ಜೊತೆಗೆ ಆಟೋದಲ್ಲಿ ಹೋಗಿದ್ದಾಳೆ. ಈ ವೇಳೆ ಬೈಕ್ ಮತ್ತು ಕಾರುಗಳಲ್ಲಿ ಹಿಂಬಾಲಿಸಿ ಬಂದಿದ್ದ ಹಿಂದೂ ಕಾರ್ಯಕರ್ತರು, ಸಂಶೀನಾ ಮನೆ ಬಳಿ ಬಂದು ಅವಾಚ್ಯವಾಗಿ ನಿಂದಿಸಿ ನೈತಿಕ ಪೊಲೀಸ್ ಗಿರಿ ಮಾಡಿದ್ದರು.  ಈ ಬಗ್ಗೆ ಸುದರ್ಶನ್ ಗೆಲ್ಗೊಡಿ(Sudarshan gellodi), ಪ್ರಶಾಂತ್ ಕೊಲ್ಯ(Prashant kolya), ತಮ್ಮ ಕಲ್ಕಡಿ ಹಾಗೂ ಪ್ರಸಾದ್ ಕೊಲ್ಯ(Prasada kolya) ವಿರುದ್ದ ಕಡಬ ಪೊಲೀಸ್ ಠಾಣೆ(Kadaba Police Station)ಗೆ ಸಂಶೀನಾ ದೂರು ನೀಡಿದ್ದರು. ಸದ್ಯ ಪ್ರಕರಣ ದಾಖಲಿಸಿರುವ ಕಡಬ ಪೊಲೀಸರು, ತಲೆಮರೆಸಿಕೊಂಡಿರುವ  ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಪ್ರತಿನಿತ್ಯ ಒಂದಲ್ಲ ಒಂದು ಕಡೆ ನೈತಿಕ ಪೊಲೀಸ್ ಗಿರಿ ನಡೆಯುತ್ತಲೇ ಇದೆ. ಇದಕ್ಕೆ ಮಂಗಳೂರು ಪೊಲೀಸರು ಕಡಿವಾಣ ಹಾಕಬೇಕಾಗಿದೆ.

Tap to resize

Latest Videos

ಮಂಗಳೂರು: ನೈತಿಕ ಪೊಲೀಸ್‌ಗಿರಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್

ಗರ್ಭಿಣಿ ಅಕ್ಕನಿಗೆ ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ದಳು!

ಉಳ್ಳಾಲದಲ್ಲಿ ನೈತಿಕ ಪೊಲೀಸ್ ಗಿರಿ

ಸದ್ಯ ಸಂಶೀನಾ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಶೀನಾ ನೀಡಿದ ದೂರಿನಂತೆ, ಸ್ನೇಹಿತೆ ಕಾವ್ಯಳ ಅಕ್ಕ ಗರ್ಬಿಣಿಯಾಗಿದ್ದು ಬಿರಿಯಾನಿ ತಿನ್ನುವ ಆಸೆ ಇದ್ದ ಕಾರಣ ಕಾವ್ಯ ಮತ್ತು ನಾನು ಬಿರಿಯಾನಿ ತೆಗೆದುಕೊಂಡು ಹೋಗಲು ಜುಲೈ 12ರಂದು ಆಟೋರಿಕ್ಷಾದಲ್ಲಿ ಮನೆಗೆ ಬಂದಿದ್ದೇವೆ. ಈ ವೇಳೆ ಸುದರ್ಶನ್‌ ಗೆಲ್ಗೋಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ಹಾಗೂ ಇತರರು  ಕಾರು ಮತ್ತು ಬೈಕ್‌ನಲ್ಲಿ  ನಮ್ಮನ್ನು ಹಿಂಬಾಲಿಸಿ ನಂತರ ನಮ್ಮ ಮನೆಯ ಮುಂದೆ ಅಕ್ರಮ ಕೂಟ ಸೇರಿಕೊಂಡು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆವೊಡ್ಡಿ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎಂದು ದೂರು ನೀಡಿದ್ದಾರೆ.

click me!