ಬೆಳಗಾವಿ ಹಿಂಡಲಗಾ ಜೈಲಲ್ಲಿ ಖೈದಿಗಳ ನಡುವೆ ಹೊಡೆದಾಟ: ಮಾತಾಡೋಕೆ ಫೋನ್ ಸಿಗಲಿಲ್ಲ ಅಂತ ತಲೆ ಜಜ್ಜಿಬಿಟ್ಟ!

Published : Jan 20, 2026, 05:05 PM IST
Hindalga Jail Clash Inmate Attacked Over Phone Usage Row Head Injured

ಸಾರಾಂಶ

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಫೋನ್ ಕಾಲ್ ಬಳಸುವ ವಿಚಾರಕ್ಕೆ ಇಬ್ಬರು ಖೈದಿಗಳ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿದೆ. ಫಯಾನ್ ಎಂಬ ಖೈದಿಯು ಸುರೇಶ್ ಎಂಬಾತನ ತಲೆಗೆ ಕಲ್ಲಿನಿಂದ ಜಜ್ಜಿ ಗಂಭೀರವಾಗಿ ಗಾಯಗೊಳಿಸಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ (ಜ.20): ರಾಜ್ಯದ ಹೈ ಸೆಕ್ಯೂರಿಟಿ ಜೈಲುಗಳಲ್ಲಿ ಒಂದಾದ ಬೆಳಗಾವಿ ತಾಲೂಕಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಖೈದಿಗಳ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿದೆ. ಫೋನ್ ಕಾಲ್ ವಿಚಾರವಾಗಿ ಆರಂಭವಾದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ, ಒಬ್ಬ ಖೈದಿಯ ಮೇಲೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ.

ಫೋನ್ ಕಾಲ್ ವಿಚಾರಕ್ಕೆ ಹೊಡೆದಾಟ

ಜೈಲಿನಲ್ಲಿರುವ ಎಸ್‌ಟಿಡಿ (STD) ಫೋನ್ ಸೌಲಭ್ಯವನ್ನು ಬಳಸುವ ವಿಚಾರದಲ್ಲಿ ಖೈದಿಗಳ ನಡುವೆ ವಾಗ್ವಾದ ಆರಂಭವಾಗಿದೆ. ಫೋನ್ ಮಾಡುವ ಸಮಯದಲ್ಲಿ ಒಬ್ಬರಿಗೊಬ್ಬರು ಕಿರಿಕ್ ಮಾಡಿಕೊಂಡಿದ್ದು, ಈ ಸಣ್ಣ ಕಾರಣವೇ ಹಿಂಸಾತ್ಮಕ ರೂಪ ಪಡೆದಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಖೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಅಪರಾಧಿ ಫಯಾನ್‌ನಿಂದ ಮಾರಣಾಂತಿಕ ಹಲ್ಲೆ

ಮಂಗಳೂರು ಮೂಲದ ಖೈದಿ ಫಯಾನ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅತ್ಯಾ೧ಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಹಿಂಡಲಗಾ ಜೈಲು ಸೇರಿರುವ ಫಯಾನ್, ಮುತ್ಯಾನಟ್ಟಿ ಗ್ರಾಮದ ಸುರೇಶ್ (32) ಎಂಬಾತನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಗಲಾಟೆಯ ಸಂದರ್ಭದಲ್ಲಿ ಫಯಾನ್ ಕಲ್ಲಿನಿಂದ ಸುರೇಶ್‌ನ ತಲೆ ಹಾಗೂ ಮೈಮೇಲೆ ಜಜ್ಜಿ ಗಂಭೀರ ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.

ಗಾಯಾಳು ಸುರೇಶ್ 'ಬಿಮ್ಸ್' ಆಸ್ಪತ್ರೆಗೆ ದಾಖಲು

ಹಲ್ಲೆಗೊಳಗಾದ ಸುರೇಶ್ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದವನಾಗಿದ್ದು, ಈತ ಕೂಡ ಅತ್ಯಾ೧ಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ. ಕಲ್ಲಿನ ಏಟಿನಿಂದ ತೀವ್ರವಾಗಿ ರಕ್ತಸ್ರಾವಕ್ಕೊಳಗಾದ ಸುರೇಶ್‌ನನ್ನು ತಕ್ಷಣವೇ ಜೈಲು ಸಿಬ್ಬಂದಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಘಟನೆ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾಲ ಕಟ್ಟುವ ಸಲುವಾಗಿ 100ಕ್ಕೂ ಅಧಿಕ ಪುರುಷರ ಜೊತೆ ಹೆಂಡ್ತಿಯ ಸೆ*ಕ್ಸ್‌; ವಿಡಿಯೋ ಮಾಡಿ ಹಣ ವಸೂಲಿ ಮಾಡ್ತಿದ್ದ ಗಂಡ!
ಮರಳು ದಂಧೆ ವಿರುದ್ಧ ಸಮರ ಸಾರಿದ ದೇವದುರ್ಗ ಶಾಸಕಿ ಮನೆಗೆ ಬಂದು ಧಮ್ಕಿ, ಕಾರಿನ ಮೇಲೆ ಟಿಪ್ಪರ್‌ ಹರಿಸಿ ಹತ್ಯೆಗೆ ಯತ್ನ!