
ಬೆಂಗಳೂರು : ಕಾಫಿಶಾಪ್‌ನ ಮಹಿಳಾ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್ ಅಡಗಿಸಿ ಅಶ್ಲೀಲ ವಿಡಿಯೋ ಸೆರೆ ಹಿಡಿಯುತ್ತಿದ್ದ ಕಾಫಿ ಶಾಪ್‌ನ ಕೆಲಸಗಾರನೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರಮನೆ ರಸ್ತೆಯ ಗುಟ್ಟಹಳ್ಳಿ ನಿವಾಸಿ ಮನೋಜ್ ಬಂಧಿತನಾಗಿದ್ದು, ಆತನಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಸದಾಶಿವನಗರ ಸಮೀಪದ ಕಾಫಿ ಶಾಪ್‌ವೊಂದರಲ್ಲಿ ಕೃತ್ಯ ನಡೆದಿದೆ. ಆ ಶಾಪ್‌ಗೆ ಶನಿವಾರ ತೆರಳಿದ್ದ ಮಹಿಳೆಯೊಬ್ಬರು, ಅಲ್ಲಿನ ಮಹಿಳೆಯರ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್ ಕಂಡು ದಿಗಿಲುಗೊಂಡಿದ್ದಾರೆ. ಪೊಲೀಸರಿಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ತುಂಗಭದ್ರಾ ಡ್ಯಾಂ: ಕ್ರಸ್ಟ್ ಗೇಟ್ ಮುರಿದಿದ್ದು ಹೇಗೆ? ದುರಸ್ತಿಗೆ ಎಷ್ಟು ದಿನ ಬೇಕು? ನದಿಗೆ ಹರಿದುಹೋದ ನೀರೆಷ್ಟು?
ಕಳೆದೊಂದು ವರ್ಷದಿಂದ ಸದಾಶಿವನಗರ ಸಮೀಪದ ಕಾಫಿ ಶಾಪ್‌ವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾಡುತ್ತಿದ್ದ ಮನೋಜ್, ಗುಟ್ಟಹಳ್ಳಿ ಬಳಿ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದ. ಈತ ಮಹಿಳೆಯರ ಅಶ್ಲೀಲ ದೃಶ್ಯ ಸೆರೆ ಹಿಡಿಯುವ ವಿಕೃತ ಮನಸ್ಸಿನವನು. ಇದಕ್ಕಾಗಿ ತನ್ನ ಶಾಪ್‌ನ ಮಹಿಳೆಯರ ಶೌಚಾಲಯದ ಕಸದ ಬುಟ್ಟಿಯಲ್ಲಿ ಮೊಬೈಲ್ ಅಡಗಿಸಿ ಶಾಚಾಲಯಕ್ಕೆ ಬರುವ ಮಹಿಳೆಯರ ಅಶ್ಲೀಲ ದೃಶ್ಯಾವಳಿಯನ್ನು ಮನೋಜ್ ಚಿತ್ರೀಕರಿಸುತ್ತಿದ್ದ. ಶಾಪ್‌ಗೆ ಶನಿವಾರ ಮಹಿಳಾ ಗ್ರಾಹಕರೊಬ್ಬರ ಜಾಗ್ರತೆಯಿಂದ ದುಷ್ಕರ್ಮಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಯ್ಯೋ ದೇವ್ರೇ.. ತನ್ನ ಮಗುವನ್ನು ನೋಡಲು ಬಂದವನು ಮರ್ಡರ್..! ಕೊಂದದ್ದು 4 ದಿನದ ಬಾಣಂತಿ ಹೆಂಡತಿ..!
ಪೊಲೀಸರಿಂದ ಮೊಬೈಲ್ ಪರಿಶೀಲನೆ:
ಕಾಫಿ ಶಾಪ್‌ನಲ್ಲಿ 1 ವರ್ಷದಿಂದ ಆರೋಪಿ ಕೆಲಸ ಮಾಡಿದ್ದಾನೆ. ಹೀಗಾಗಿ ಹಲವು ದಿನಗಳಿಂದ ಆತ ಈ ರೀತಿಯ ಕೃತ್ಯದಲ್ಲಿ ತೊಡಗಿರುವ ಶಂಕೆ ಇದೆ. ಹೀಗಾಗಿ ಆರೋಪಿ ಮನೋಜ್ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಲಾಗುತ್ತಿದೆ. ಆದರೆ ಇದುವರೆಗೆ ಆತನ ಮೊಬೈಲ್‌ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ