Heroin Seized: 5.3 ಕೋಟಿ ಹೆರಾಯಿನ್.. ದುಬೈನಿಂದ  ಬೆಂಗ್ಳೂರಿಗೆ ಬಂದಿದ್ದೇ ರೋಚಕ

By Suvarna NewsFirst Published Jan 26, 2022, 1:22 AM IST
Highlights

* ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ
 *.3. ಕೋಟಿ ಬೆಲೆ ಬಾಳುವ 754 ಗ್ರಾಂ ಹೆರಾಯಿನ್ ವಶ
* ದುಬೈನಿಂದ ಆಮದು ಮಾಡಿಕೊಳ್ಳಲಾಗಿತ್ತು
* ಡಾಕ್ಯೂಮೆಂಟ್ ಫೈಲ್ ನಲ್ಲಿ ಮಾದಕ ವಸ್ತು ತರಿಸಿಕೊಳ್ಳಲಾಗಿತ್ತು

ಬೆಂಗಳೂರು(ಜ. 26) ಬೆಂಗಳೂರು (Bengaluru) ವಿಮಾನ ನಿಲ್ದಾಣದಲ್ಲಿ(Kempegowda International Airport Bengaluru)  ಕಸ್ಟಮ್ಸ್ (customs officers) ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು ಕೋಟ್ಯಂತರ ಮೌಲ್ಯದ ಹೆರಾಯಿನ್ (heroin) ಪತ್ತೆಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

 ದುಬೈ ನಿಂದ ಕೊರಿಯರ್ ಮೂಲಕ ಆಮದಾಗಿತ್ತು ಡಾಕ್ಯುಮೆಂಟ್ ಫೈಲ್ ನಲ್ಲಿ ಹೆರಾಯಿನ್ ಆಮದು ಮಾಡಿಕೊಂಡಿದ್ದ ಪೆಡ್ಲರ್ ಗಳ ಚಾಲಾಕಿತನ ಕಂಡು ಅಧಿಕಾರಿಗಳೆ ದಂಗಾಗಿದ್ದಾರೆ. ಪರಿಶೀಲಿಸಿದಾಗ 5.3. ಕೋಟಿ ಬೆಲೆ ಬಾಳುವ 754 ಗ್ರಾಂ ಹೆರಾಯಿನ್ ಪತ್ತೆಯಾಗಿದೆ.

ಮಾದಕ ವಸ್ತು ಹೆರಾಯಿನ್ ರಿಸೀವ್ ಮಾಡಲು ಬಂದ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ.  ಹೆಚ್ಚಿನ ವಿಚಾರಣೆ ಅಗತ್ಯ ಹಿನ್ನಲೆ  ಆರೋಪಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನಂತರ ಪೊಲೀಸರು ತಮ್ಮ ಬಂಧನಕ್ಕೆ ತೆಗೆದುಕೊಂಡಿದ್ದಾರೆ. 

Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್‌ ಕೊಡಿಸಲು ಶಿಷ್ಯರಿಂದ ಡ್ರಗ್ಸ್‌ ದಂಧೆ

ಸಹೋದರರ ಕಮಾಲ್:  ತಮ್ಮ ಮನೆಯಲ್ಲೇ ಡ್ರಗ್ಸ್‌ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಚಾಲಾಕಿ ವಿದೇಶಿ ಸೋದರರ ಪೈಕಿ ಕಿರಿಯ ಸೋದರ ಸಿಸಿಬಿ(CCB) ಬಲೆಗೆ ಬಿದ್ದಿದ್ದ  ಸೋಲದೇವನಹಳ್ಳಿ ಸಮೀಪದ ತರಬನಹಳ್ಳಿ ನಿವಾಸಿ ರಿಚರ್ಡ್‌ ಬಂಧಿಸಲಾಗಿತ್ತು.  50 ಲಕ್ಷ ಮೌಲ್ಯದ 900 ಗ್ರಾಂ ಕೊಕೇನ್‌, 50 ಗ್ರಾಂ ಎಂಡಿಎಂ ಕ್ರಿಸ್ಟೆಲ್‌ ಹಾಗೂ ಎಂಡಿಎಂಎ ತಯಾರು ಮಾಡಲು ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಹಾಗೂ 10 ಲೀಟರ್‌ ಕುಕ್ಕರ್‌ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. 

ನೈಜೀರಿಯಾ( ಮೂಲದ ರಿಚರ್ಡ್‌ ಹಾಗೂ ಆತನ ಹಿರಿಯ ಸಹೋದರ  2019ರಲ್ಲಿ ಬಿಸಿನೆಸ್‌ ವೀಸಾದಲ್ಲಿ ದೆಹಲಿಗೆ ಬಂದಿದ್ದರು. ಅನಂತರ 6 ತಿಂಗಳ ಹಿಂದೆ ಬೆಂಗಳೂರಿಗೆ ಬಂದ ಸೋದರರು, ಮೊದಲು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು. ತರುವಾಯ ಎರಡು ತಿಂಗಳ ಹಿಂದೆ ಸೋಲದೇವನಹಳ್ಳಿ ವ್ಯಾಪ್ತಿಗೆ ಅವರು ವಾಸ್ತವ್ಯ ಬದಲಾಯಿಸಿದ್ದರು. ತರಬನಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದ ಸೋದರರು, ಮಾಲಿಕರಿಗೆ ಗೊತ್ತಾಗದಂತೆ ಮನೆಯಲ್ಲೇ ಡ್ರಗ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಸಿಸಿಬಿ ನೀಡಿದೆ.

ಶಾರುಖ್ ಪುತ್ರನ ಪ್ರಕರಣ ಎಲ್ಲಿಗೆ ಬಂತು?  ಡ್ರಗ್ಸ್‌ ಪ್ರಕರಣದಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರನನ್ನು ಬಂಧಿಸುವ ಮೂಲಕ ದೇಶದ ಗಮನಸೆಳೆದಿದ್ದ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ದ ಮುಂಬೈ ವಲಯ ಮುಖ್ಯಸ್ಥ ಸಮೀರ್‌ ವಾಂಖೇಡೆ ಅವರನ್ನು ಮಾತೃ ಇಲಾಖೆಗೆ  ವಾಪಸ್ ಕರೆಸಿಕೊಳ್ಳಲಾಗಿತ್ತು.  ಎನ್‌ಸಿಬಿಯಲ್ಲಿ ಡಿ.31ರವರೆಗೆ ವಾಂಖೇಡೆ ಅವಧಿ ಇತ್ತು. ಅದನ್ನು ವಿಸ್ತರಿಸಲು ಅವರು ಯಾವುದೇ ಮನವಿ ಮಾಡಲಿಲ್ಲ. ಆದ ಕಾರಣ ವಾಂಖೇಡೆ ಅವರು ಮಾತೃ ಇಲಾಖೆಯಾದ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ  ಕರೆಸಿಕೊಳ್ಳಲಾಗಿತ್ತು. ಶಾರುಖ್ ಪುತ್ರ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇದೆ. 

ಹೊಸ ವರ್ಷದ ಆಚರಣೆ ಸಂದರ್ಭ ಬೆಂಗಳೂರಿನಲ್ಲಿ ಡ್ರಗ್ಸ್ ಘಾಟು ಕೇಳಿಬಂದಿದ್ದು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅನೇಕ ಪೆಡ್ಲರ್ ಗಳನ್ನು ಬಂಧಿಸಿದ್ದರು. ಬೆಂಗಳೂರಿನ ಎಲ್ಲ ವಲಯಗಳ ಪೊಲೀಸರು ಪೆಡ್ಲರ್ ಗಳನ್ನು ಬೇಟೆಯಾಡಿದ್ದರು.  ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ನಂತರ ಡ್ರಗ್ಸ್ ಪುಟಗಳು ತೆರೆದುಕೊಂಡಿದ್ದವು. ಸ್ಯಾಂಡಲ್ ವುಟ್ ನಟಿಯರಿಗೂ ಡ್ರಗ್ಸ್ ಘಾಟು ಸುತ್ತಿಕೊಂಡಿತ್ತು. ಪ್ರಕರಂಣವನ್ನು ವಿವಿಧ ಕೋನಗಳಲ್ಲಿ ವಿಚಾರಣೆ ಮಾಡಲಾಗುತ್ತಿದೆ.  

ಬಾಲಿವುಡ್, ಸ್ಯಾಂಡಲ್ ವುಡ್ ಜತೆಗೆ ಟಾಲಿವುಡ್ ನಟ ನಟಿಯರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿತ್ತು. ಮುಂಬೈನಲ್ಲಿ ಎನ್ ಸಿಬಿ ವಿಚಾರಣೆ ನಡೆಸುತ್ತಿದ್ದರೆ ಕರ್ನಾಟಕದಲ್ಲಿ ಸಿಸಿಬಿ ವಿಚಾರಣೆ ನಡೆಸುತ್ತಿದೆ. ಯಾವ ಪ್ರಕರಣಗಳು ಇನ್ನುವರೆಗೆ ತಾರ್ಕಿಕ ಅಂತ್ಯ ಕಂಡಿಲ್ಲ. 

 

click me!