Suvarna FIR: ಪ್ರಿಯಕರನಿಗೆ ಪತ್ನಿಯ ಬೆತ್ತಲೆ ಕರೆ... ಮಗನೊಂದಿಗೆ ಸುಸೈಡ್‌ಗೂ ಮುನ್ನ ಅದೊಂದು ವಿಡಿಯೋ ಮಾಡಿದ್ದ!

By Suvarna News  |  First Published Jan 25, 2022, 4:47 PM IST

* ಮಗು ಜತೆ ಕೆರೆಗೆ ಹಾರಿ ತಂದೆ ಆತ್ಮಹತ್ಯೆ
* ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿರಾಯ
*  ಮಗುವಿನೊಂದಿಗೆ ಕೆರೆಗೆ ಹಾರಿದ
* ಇನ್ನೊಂದು ಕಡೆ ಪತ್ನಿಯಿಂದ ಹೈಡ್ರಾಮಾ


ಮಂಡ್ಯ(ಜ. 25)  ಅಪ್ಪ (Father) ಮತ್ತು ಮಗನ ಆತ್ಮಹತ್ಯೆ (Suicide) ಸ್ಟೋರಿ. ಸಾವಿಗೂ ಮುನ್ನ ತಂದೆ ಅದೊಂದು ವಿಡಿಯೋ (Video)  ಜ. 13 ರಂದು ಮಗ ಜಶ್ವಿತ್ ಜೊತೆ ಕೆರೆಗೆ ಹಾರಿ ಗಂಗಾಧರ್ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಕಾರಣ ಏನು ಎಂದು ನೋಡುತ್ತಾ ಹೋದರೆ, ಎಲ್‌ಐಸಿ ಏಜೆಂಟ್ ಜೊತೆ ಪತ್ನಿಯ (Illicit Relationship)ಅಕ್ರಮ ಸಂಬಂಧ!  ಗಂಡನ ಸಾವಿನ ಸುದ್ದಿ ಕೇಳಿ ಪತ್ನಿಯೂ ಕೆರೆಗೆ ಹಾರುತ್ತಾಳೆ. 

"

ಹೆಂಡತಿಯ ತಂಗಿಯನ್ನೇ ಪ್ರೇಮದ ಬಲೆಗೆ ಬೀಳಿಸಿದ್ದ ಭಾವ: ಮದುವೆಗೆ ಒಪ್ಪದಿದ್ದಕ್ಕೆ ಕಿಡ್ನಾಪ್‌!

Tap to resize

Latest Videos

ಪತ್ನ ಹಾಗೂ ಗರುಡಾಪುರ ಗ್ರಾಮದ ಎಲ್‌ಐಸಿ ಏಜೆಂಟ್‌ ಜಿ.ಸಿ.ನಂಜುಂಡೇಗೌಡನ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರವಾಗಿ ಎಷ್ಟೇ ತಿಳುವಳಿಕೆ ಹೇಳಿದರೂ ತಮ್ಮ ಚಾಳಿ ಬಿಟ್ಟಿರಲಿಲ್ಲ. ಇದರಿಂದ ಬೇಸತ್ತು ತಮ್ಮ ಗಂಗಾಧರಗೌಡ ಮಗನೊಂದಿಗೆ ಜೀವ ಕಳೆದುಕೊಂಡಿದ್ದಾರೆ.  

ಸಿಂಧು ಹಾಗೂ ಗರುಡಾಪುರ ಗ್ರಾಮದ ಎಲ್‌ಐಸಿ ಏಜೆಂಟ್‌ ಜಿ.ಸಿ.ನಂಜುಂಡೇಗೌಡನ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರವಾಗಿ ಎಷ್ಟೇ ತಿಳುವಳಿಕೆ ಹೇಳಿದರೂ ತಮ್ಮ ಚಾಳಿ ಬಿಟ್ಟಿರಲಿಲ್ಲ. ಇದರಿಂದ ಬೇಸತ್ತು ತಮ್ಮ ಗಂಗಾಧರಗೌಡ ಮಗನೊಂದಿಗೆ ಜೀವ ಕಳೆದುಕೊಂಡಿದ್ದಾರೆಂದು ಸೋದರ ಬಿ.ಪಿ.ಮಂಜುನಾಥ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಟ್ಟೆ ಬಿಚ್ಚಿಸಿ ವಿಕೃತಿ:  ಶ್ರೀರಂಗಪಟ್ಟಣ(ಜ.07): ಶಾಲೆಗೆ ಮೊಬೈಲ್‌ ತಂದಿದ್ದ ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮುಖ್ಯಶಿಕ್ಷಕಿಯೊಬ್ಬರು ಅಮಾನವೀಯವಾಗಿ ಶಿಕ್ಷಿಸಿರುವ ಘಟನೆ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿತ್ತು. 

ವಿದ್ಯಾರ್ಥಿನಿಯರು ಶಾಲೆಗೆ ಮೊಬೈಲ್‌ ತೆಗೆದುಕೊಂಡು ಬಂದಿದ್ದ ವಿಚಾರ ತಿಳಿದ ಮುಖ್ಯಶಿಕ್ಷಕಿ ಕೊಠಡಿಗೆ ಕರೆಸಿ, ಯಾರೆಲ್ಲ ಮೊಬೈಲ್‌ ತಂದಿದ್ದೀರೋ ಎಲ್ಲರೂ ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮಗಳ ಬಟ್ಟೆಬಿಚ್ಚಿಸುತ್ತೇನೆ. ಹುಡುಗರಿಂದ ನಿಮ್ಮನ್ನು ಚೆಕ್‌ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಕೆಲ ವಿದ್ಯಾರ್ಥಿನಿಯರ ಬಳಿ ಮೊಬೈಲ್‌ ಇರುವುದು ತಿಳಿಯುತ್ತಿದ್ದಂತೆ, ಓರ್ವ ವಿದ್ಯಾರ್ಥಿನಿಯ ಬಟ್ಟೆಕಳಚಿ ಹಲ್ಲೆ ನಡೆಸಿದ್ದಾರೆ. ಕೆಲವರ ಸ್ವೆಟರ್‌ ಬಿಚ್ಚಿಸಿದರೆ, ಮತ್ತೋರ್ವಳ ಸ್ಕರ್ಟ್‌ ಹರಿದಿದ್ದಾರೆ. ನಗ್ನವಾದ ಹುಡುಗಿಯನ್ನು ನೆಲದ ಮೇಲೆ ಕೂರಿಸಿ ಚಳಿಯಾಗಲೆಂದು ಜೋರಾಗಿ ಫ್ಯಾನ್‌ ಹಾಕಿಸಿದ್ದಾರೆ. ಊಟ, ನೀರು ಕೊಡದೆ ಕೊಠಡಿಯಲ್ಲೇ ಇರಿಸಿದ್ದರು. ಸಂಜೆ ಮನೆಗೆ ಹೋದ ವಿದ್ಯಾರ್ಥಿನಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದಾದ ಮೇಲೆ  ಮುಖ್ಯ ಶಿಕ್ಷಕಿ ಸ್ನೇಹಲತಾ ವಿರುದ್ಧ ಬಿಇಒಗೆ ದೂರು ನೀಡಲಾಗಿದೆ.

ಆನೇಕಲ್ ಅರ್ಚನಾ ರೆಡ್ಡಿ ಪ್ರಕರಣ:  ಅರ್ಚನಾ ರೆಡ್ಡಿ ಕೊಲೆ ಪ್ರಕರಣ ಸಹ ಇಡೀ ಬೆಂಗಳೂರಿಗೆ ಶಾಕ್ ನೀಡಿತ್ತು. ಪುರಸಭೆಯ ಚುನಾವಣೆಗೆ ಮತದಾನ ಮಾಡಲು ಬಂದವಳನ್ನು ಆಕೆಯ ಎರಡನೇ ಗಂಡನೇ ಹತ್ಯೆ ಮಾಡಿದ್ದ. ಕಾರಿನಿಂದ ಇಳಿಸಿ ನಡು ರೋಡಿನಲ್ಲಿ ಹತ್ಯೆ ಮಾಡಲಾಗಿತ್ತು. ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ತೊಡಗಿಕೊಂಡಿದ್ದ ಅರ್ಚನಾಗೆ  ದೊಡ್ಡದೊಡ್ಡವರ ಕಾಂಟಾಕ್ಟ್ ಇತ್ತು. 

 

click me!