ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿ ಸೇರಿಕೊಂಡು ಕಿರುಕುಳ ಕೊಡುತ್ತಿದ್ದಾರೆ ಎಂದು ಬೇಸತ್ತು ಅದೇ ಶಾಲೆಯ ಸಹ ಶಿಕ್ಷಕಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ರೈಲಿಗೆ ತಲೆಯೊಡ್ಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿ (ಮಾ.05): ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿ ಸೇರಿಕೊಂಡು ಕಿರುಕುಳ ಕೊಡುತ್ತಿದ್ದಾರೆ ಎಂದು ಬೇಸತ್ತು ಅದೇ ಶಾಲೆಯ ಸಹ ಶಿಕ್ಷಕಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ರೈಲಿಗೆ ತಲೆಯೊಡ್ಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ರಾಯಬಾಗ ರೈಲು ನಿಲ್ದಾಣದ ಸಮೀತ ಈ ದುರ್ಘಟನೆ ಸಂಭವಿಸಿದೆ. ಅನ್ನಪೂರ್ಣ ರಾಜು ಬಸಾಪೂರೆ (55) ಎಂಬ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ನಿವಾಸಿ ಆಗಿದ್ದು, ಖಾಸಗಿ ಅನುದಾನಿತ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಖಾಸಗಿ ಶಿಕ್ಷಣ ಸಂಸ್ಥೆಯ ಹೆಡ್ ಮಾಸ್ಟರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಡೆತ್‌ನೋಟ್ ಬರೆದಿಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಮುಖ್ಯಶಿಕ್ಷಕಿ ಹಾಗೂ ಸಹ ಶಿಕ್ಷಕಿಯ ಹೆಸರನ್ನೂ ಬರೆದಿಟ್ಟಿದ್ದಾರೆ.
BIG3: ಬಾಕಿ ವೇತನ & ಪಿಂಚಣಿ ಹಣಕ್ಕಾಗಿ ನಿವೃತ್ತ ಶಿಕ್ಷಕಿಯ ಅಲೆದಾಟ: ವಯೋವೃದ್ಧೆ ಕಷ್ಟಕ್ಕೆ ಕೊನೆ ಯಾವಾಗ?
ಡೆತ್ ನೋಟ್‌ನಲ್ಲಿ ಏನಿದೆ?:
ಮೃತ ಶಿಕ್ಷಕಿ ಬರೆದ ಡೆತ್ ನೋಟ್ ನಲ್ಲಿ "ನನ್ನ ಸಾವಿಗೆ ಹೆಡ್ ಮಾಸ್ಟರ್ ಜಮಾದರ್ ಸರ್, ಉಮಾ ಟೀಚರ್, ಮಯೂರಿ ಕುಡುಚಿ" ಕಾರಣರು ಎಂದು ಬರೆದಿಟ್ಟಿದ್ದಾರೆ. ಇವರೇ ತನ್ನ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಘಟನೆ ರಾಯಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ರಾಮಸ್ಥರಿಂದ ಪ್ರತಿಭಟನೆ: ಇನ್ನು ಖಾಸಗಿ ಶಾಲೆಯ ಶಿಕ್ಷಕಿ ಸಾವನ್ನಪ್ಪಿದ್ದು, ಅವರು ಬರೆದಿಟ್ಟಿದದಾರೆನ್ನಲಾದ ಡೆತ್‌ನೋಟ್ ಹಿಡಿದುಕೊಂಡು ಖಾಸಗಿ ಶಾಲೆಯ ಮುಂದೆ ಶಿಕ್ಷಕಿಯ ಶವವನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ. ಮುಖ್ಯ ಶಿಕ್ಷಕ ಹಾಗೂ ಅವರೊಂದಿಗೆ ಕಿರುಕುಳ ನೀಡಿದ ತರೆ ಶಿಕ್ಷಕಿಯರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮತ್ತು ಮೃತ ಶಿಕ್ಷಕಿಯ ಕಟುಂಬಸ್ಥರು ಶಾಲೆಯ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಅಶ್ಲೀಲ ಗೋಡೆಬರಹ ಬರೆದು ಶಿಕ್ಷಕಿಗೆ ಚಾರಿತ್ರ್ಯವಧೆ ಮಾಡಿದ್ದ ಸಹಶಿಕ್ಷಕ ನಿಸ್ಸಾರ ಅಹ್ಮದ್‌ಗೆ ಜೈಲೂಟ
53 ಲಕ್ಷ ರೂ. ಪಿಂಚಣಿ ಕೊಡದ ಅಧಿಕಾರಿಗಳು: ದಾವಣಗೆರೆ: ದಾವಣಗೆರೆ ನಗರದಲ್ಲಿ ವಾಸಕ್ಕೆ ಸೂರಿಲ್ಲದೇ ಕುಸಿದು ಬೀಳುವ ಸ್ಥಿತಿಯಲ್ಲಿರುವ ಪುಟ್ಟ ಮನೆಯಲ್ಲಿ ಕಳೆದ 25 ವರ್ಷಗಳಿಂದ ನಿವೃತ್ತ ಶಿಕ್ಷಕಿ ಪದ್ಮಾವತಿ ವಾಸವಾಗಿದ್ದಾರೆ. ತಮಗಾದ ಅನ್ಯಾಯಕ್ಕೆ ಬೇಸತ್ತು 33 ವರ್ಷಗಳಿಂದ ಶಾಲಾ ಆಡಳಿತ ಮಂಡಳಿಯ ವ್ಯವಸ್ಥೆ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಬಾಕಿ ವೇತನ ಹಾಗೂ ಪಿಂಚಣಿ ಹಣಕ್ಕಾಗಿ ಸತತ 33 ವರ್ಷಗಳಿಂದ ಸಂಬಂಧಿಸಿದ ಕಚೇರಿಗೆ ಅಲೆದು ಅಲೆದು ಬೇಸತ್ತಿದ್ದಾರೆ. ಪದ್ಮಾವತಿ ಅವರಿಗೆ ವಯಸ್ಸಾಗಿದ್ದು, ತನ್ನ ವಿಕಲಚೇತನ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ಕಷ್ಟಕರ ಜೀವನ ನಡೆಸುತ್ತಿದ್ದು ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿದ್ದಾರೆ. ಪದ್ಮಾವತಿ ಅವರಿಗೆ 53.45 ಲಕ್ಷ ಬರಬೇಕಾಗಿದ್ದು, ಅಧಿಕಾರಿಗಳು ಉಡಾಫೆ ಉತ್ತರ ನಿಡ್ತಿದ್ದಾರಂತೆ.