Crime News: ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್​, ಪಾಠ ಮಾಡೋ ಪೋಲಿ ಶಿಕ್ಷಕನ ಪುರಾಣ ಬಯಲು

By Suvarna NewsFirst Published Dec 1, 2021, 7:35 PM IST
Highlights

* ಇಲ್ಲೊಬ್ಬ ಶಿಕ್ಷಕ ಪಾಠ ಮಾಡು ಅಂದ್ರೆ ಕಿಸ್ ಬೇಕು ಎಂದ
* ಪಾಠ ಮಾಡೋ ಪೋಲಿ ಶಿಕ್ಷಕನ 'ಕಿಸ್​' ಪುರಾಣ ಬಯಲು
* ವಿದ್ಯಾರ್ಥಿನಿ ಮೊಬೈಲ್​ಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್​ಗಳು ವೈರಲ್​ 
 

ಹಾವೇರಿ, (ಡಿ.01): ಇಲ್ಲೊಬ್ಬ ಶಿಕ್ಷಕ (Teacher) ಪಾಠ ಮಾಡು ಅಂದ್ರೆ ಇಲ್ಲ ನನಗೆ ಮೊದಲು ಕಿಸ್ ಕೊಡು ಎಂದು ವಿದ್ಯಾರ್ಥಿನಿಗೆ ಪೀಡುಸುತ್ತಿರುವುದು ಬೆಳಕಿಗೆ ಬಂದಿದೆ.

ಹೌದು.. 'ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..' ಎಂದು ಪ್ರೌಢ ಶಾಲೆ  ಶಿಕ್ಷಕ (High School Teacher) ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್​ಗಳು(Message) ವೈರಲ್​ ಆಗಿವೆ.

Online Class : ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌

 'ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..' ಎಂದು ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ವಾಟ್ಸಪ್‌ (whats app)ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು(Ranebennur) ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿರುವ ಶಾಲಾ ಶಿಕ್ಷಕನ ವಿರುದ್ಧ ಈ ಗಂಭೀರ ಆರೋಪವೊಂದು ಕೇಳಿ ಬಂದಿದೆ.  

ದೇವರಗುಡ್ಡದ ಹೈಸ್ಕೂಲ್​ನ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ಕಳೆದ ವರ್ಷ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ವಿದ್ಯಾರ್ಥಿನಿಯ ಮೊಬೈಲ್​ ನಂಬರ್​ ಪಡೆದಿದ್ದ. ಆನ್​ಲೈನ್​ ಪಾಠ ಮಾಡುವ ನೆಪದಲ್ಲಿ ಪ್ರತಿನಿತ್ಯ ಚಾಟ್ ಮಾಡುತ್ತಿದ್ದ ಶಿಕ್ಷಕ, ಮಾತೆತ್ತಿದರೆ ಕಿಸ್ ಕೊಡು ಎಂದು ಪೀಡಿಸುತ್ತಿದ್ದ. ಈತ ಮಾಡಿರುವ ಚಾಟಿಂಗ್​ನ ಸ್ಕ್ರೀನ್ ಶಾಟ್‌ಗಳು ಎಲ್ಲೆಡೆ ವೈರಲ್ ಆಗಿವೆ.

ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನ್ನು ಬಂಧಿಸಬೇಕು. ಕೆಲಸದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಬೆಳಗ್ಗೆ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಶಾಲೆಗೆ ಬೀಗ ಜಡಿದು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

 ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿ  
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ (Private School) ಆನ್‌ಲೈನ್‌ ತರಗತಿ (online class) ವೇಳೆ ದಿಢೀರ್‌ ಅಪ್‌ಲೋಡ್‌ (upload) ಆದ ಲಿಂಕ್‌ ವೊಂದನ್ನು ಕ್ಲಿಕ್‌ ಮಾಡುತ್ತಿದ್ದಂತೆ ಅಶ್ಲೀಲ ವಿಡಿಯೋಗಳು (Video) ತೆರೆದುಕೊಂಡು ವಿದ್ಯಾರ್ಥಿಗಳು (Students), ಶಿಕ್ಷಕರು, ಪೋಷಕರು ಮುಜುಗರಕ್ಕೀಡಾಗಿ ಶಾಲೆಯವರು ತಕ್ಷಣ ಆನ್‌ಲೈನ್‌ ತರಗತಿಯನ್ನೇ ಬಂದ್‌ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೆಣ್ಣೂರು ಮುಖ್ಯರಸ್ತೆಯ ಲಿಂಗರಾಜಪುರ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು, ಕೆಲ ಪೋಷಕರು ಈ ಬಗ್ಗೆ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ (trust) ಗಮನಕ್ಕೆ ತಂದಿದ್ದರಿಂದ ಇದು ಬಹಿರಂಗವಾಗಿದೆ. ಆದರೆ, ಆಡಳಿತ ಮಂಡಳಿ ತಮ್ಮ ಶಾಲೆಯ (School) ಹೆಸರು ಹಾಳಾಗಬಹುದು ಎಂಬ ಕಾರಣಕ್ಕಾಗಿ ಈವರೆಗೆ ಯಾರಿಗೂ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

ಲಿಂಕ್‌ ಅಪ್‌ಲೋಡ್‌ ಆಗಿದ್ದೇಗೆ?
ಸರ್ಕಾರ (govt) ಭೌತಿಕ ತರಗತಿ ನಡೆಸಲು ಅನುಮತಿ ನೀಡಿದ್ದರೂ ಸದರಿ ಶಾಲೆ ಆನ್‌ ಲೈನ್‌ ಮೂಲಕವೇ ತರಗತಿ ನಡೆಸುತ್ತಿದೆ. ಎರಡು ದಿನಗಳ ಹಿಂದೆ ಶಾಲೆಯ ಎಲ್ಲ ಮಕ್ಕಳು ತಮ್ಮ ಲಾಗಿನ್‌ ಮೂಲಕ ಆನ್‌ಲೈನ್‌ ತರಗತಿಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ, ವಿದ್ಯಾರ್ಥಿನಿಯೊಬ್ಬಳು (Student) ನೆಟ್‌ವರ್ಕ್ (Network) ಸಮಸ್ಯೆಯಿಂದ ಕೆಲ ನಿಮಿಷ ನಿರ್ಗಮಿಸಿದ್ದಾಳೆ. 

ಇದಾದ ಕೆಲ ಹೊತ್ತಲ್ಲೇ ಆ ವಿದ್ಯಾರ್ಥಿನಿ ಲಾಗಿನ್‌ನಿಂದ ಆನ್‌ಲೈನ್‌ ತರಗತಿಗೆ ಸೇರಲು ಮನವಿ ಬಂದಿದೆ. ಅದನ್ನು ತರಗತಿ ಶಿಕ್ಷಕರು (Teachers) ಸ್ವೀಕರಿಸಿದ್ದಾರೆ. ತಕ್ಷಣ ಅಶ್ಲೀಲ ವಿಡಿಯೋಗಳ (Video) ಲಿಂಕ್‌ ಅಪ್‌ಲೋಡ್‌ ಆಗಿ ಆನ್‌ಲೈನ್‌ನಲ್ಲಿದ್ದ ಎಲ್ಲ ಮಕ್ಕಳಿಗೂ ತಲುಪಿವೆ. ಇದರ ಅರಿವಿಲ್ಲದೆ ಆ ಲಿಂಕ್‌ಗಳನ್ನು ಕ್ಲಿಕ್‌ ಮಾಡುತ್ತಿದ್ದಂತೆ ಅಶ್ಲೀಲ ವಿಡಿಯೋಗಳು ತೆರೆದುಕೊಂಡಿವೆ.

 ಇದರಿಂದ ಮಕ್ಕಳು, ಮಕ್ಕಳೊಂದಿಗೆ ಆನ್‌ಲೈನ್‌ ತರಗತಿಯಲ್ಲಿ ಕುಳಿತಿದ್ದ ಪೋಷಕರು, ತರಗತಿ ನಡೆಸುತ್ತಿದ್ದ ಶಿಕ್ಷಕರು ಗಾಬರಿ ಆಗಿದ್ದಾರೆ. ತಕ್ಷಣ ಶಾಲೆಯವರ ಗಮನಕ್ಕೆ ಬಂದಾಗ ಆನ್‌ಲೈನ್‌ ತರಗತಿಯನ್ನು ಸಂಪೂರ್ಣ ಬಂದ್‌ ಮಾಡಿದರು. ನಂತರ ಶಾಲಾ ಆಡಳಿತ ಮಂಡಳಿ ಮುಂದೆ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದೆ ಎಂದು ಆ ಶಾಲೆಯ ಕೆಲ ಪೋಷಕರು ಮಾಹಿತಿ ನೀಡಿದ್ದಾರೆ.

click me!