Bengaluru ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ ತನ್ನದೂ ಸೇರಿ ಹುಡ್ಗೀರ 13,000 ನಗ್ನ ಫೋಟೋ ಪತ್ತೆ!

Published : Nov 29, 2023, 03:37 PM IST
Bengaluru ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ ತನ್ನದೂ ಸೇರಿ ಹುಡ್ಗೀರ 13,000 ನಗ್ನ ಫೋಟೋ ಪತ್ತೆ!

ಸಾರಾಂಶ

ಬೆಂಗಳೂರಿನ ಖಾಸಗಿ ಕಂಪನಿಯೊಂದಲ್ಲಿ ಕೆಲಸ ಮಾಡುವ ಯುವತಿ ತನ್ನ ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ ತನ್ನ ಸಹಿತ, ಕಂಪನಿಯ ಇತರೆ ಮಹಿಳಾ ಉದ್ಯೋಗಿಗಳ 13,000 ನಗ್ನ ಫೋಟೋಗಳನ್ನು ನೊಡಿ ಶಾಕ್‌ಗೆ ಒಳಗಾಗಿದ್ದಾರೆ.

ಬೆಂಗಳೂರು (ನ.29): ಬೆಂಗಳೂರಿನ ಬೆಳ್ಳಂದೂರಲ್ಲಿರುವ ಬಿಪಿಒ ಕಂಪನಿಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ 22 ಪ್ರಾಯದ ಯುವತಿ ತಾವು ಸಂಬಂಧ ಹೊಂದಿದ್ದ ಸಹೋದ್ಯೋಗಿಯ ಫೋನ್ ಗ್ಯಾಲರಿಯಲ್ಲಿ ತನ್ನದೂ ಸೇರಿದಂತೆ ತನ್ನದೇ ಕಂಪನಿಯ ಮಹಿಳಾ ಸಹೋದ್ಯೋಗಿಗಳು ಹಾಗೂ ಇತರೆ ಮಹಿಳೆಯರದ್ದೂ ಸೇರಿದಂತೆ 13,000 ನಗ್ನ ಫೋಟೋಗಳನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾಳೆ.

ಸಾಮಾನ್ಯವಾಗಿ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರು ಆಕರ್ಷಣೆಗೆ ಒಳಗಾಗಿ ತಮ್ಮ ಸಹೋದ್ಯೋಗಿಗಳೊಂದಿಗೆ ಸಂಬಂಧ ಹೊಂದುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನು ಮದುವೆಯಾಗದವರು ಅವರನ್ನೇ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಅನೈತಿಕವಾಗಿ ಸಂಬಂಧ ಇಟ್ಟುಕೊಂಡು ನಂತರ ಕಡಿದುಕೊಳ್ಳುತ್ತಾರೆ. ಇಲ್ಲಿಯೂ ಕೂಡ ಬೆಳ್ಳಂದೂರಿನ ಬಿಬಿಒ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿ ಕೂಡ ತನ್ನ ಸಹೋದ್ಯೋಗಿಯೊಂದಿಗೆ ಸಂಬಂಧವನ್ನು ಹೊಂದಿದ್ದಳು. ಇಬ್ಬರ ಸಂಬಂಧದಲ್ಲಿ ಎಲ್ಲವೂ ಸರಿಯಾಗಿತ್ತು ಎಂದು ಆಕೆ ಭಾವಿಸಿದ್ದಳು. ಬಾಯ್‌ಫ್ರೆಂಡ್ ಜೊತೆಯಲ್ಲಿದ್ದಾಗ ಆತನ ಮೊಬೈಲ್‌ ಗ್ಯಾಲರಿಯನ್ನು ತೆಗೆದು ನೋಡಿದ ಯುವತಿಗೆ ಶಾಕ್ ಉಂಟಾಗಿದೆ.

ಡಿ.ಕೆ. ಶಿವಕುಮಾರ್ ಮೇಲೆ ತೂಗುಗತ್ತಿ: ಅಕ್ರಮ ಆಸ್ತಿ ಗಳಿಕೆ ಕೇಸ್ ಮುಂದುವರಿಕೆ ಸಾಧ್ಯತೆ!

ಹೌದು, ಯುವತಿಯ ಬಾಯ್‌ಫ್ರೆಂಟ್ ಆಕೆಯ ಮತ್ತು ಇತರ ಕೆಲವು ಸಹೋದ್ಯೋಗಿಗಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13,000 ನಗ್ನ ಫೋಟೋಗಳು ಕಂಡುಬಂದಿವೆ. ಇದರಿಂದ ಆತಂಕಕ್ಕೊಳಗಾದ ತನ್ವಿ (ಹೆಸರು ಬದಲಾಯಿಸಲಾಗಿದೆ) ಅವನೊಂದಿಗಿನ ಸ್ನೇಹವನ್ನು ಕಡಿದುಕೊಂಡಿದ್ದಾಳೆ. ಮುಂದುವರೆದು ನವೆಂಬರ್ 20 ರಂದು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನು ಎಚ್ಚರಿಸಿದಳು.ಮುಂದಿನ ದಿನಗಳಲ್ಲಿ ತನ್ನ ಸಹೋದ್ಯೋಗಿಗಳನ್ನು ತೊಂದರೆಯಿಂದ ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾಳೆ.

ಬೆಳ್ಳಂದೂರಿನಲ್ಲಿರುವ ಬಿಪಿಒದ ಕಾನೂನು ಮುಖ್ಯಸ್ಥೆ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಅವರು ಆದಿತ್ಯ ಸಂತೋಷ್ (25) ವಿರುದ್ಧ ನವೆಂಬರ್ 23 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತೋಷ್ ಮತ್ತು ತನ್ವಿ ನಾಲ್ಕು ತಿಂಗಳಿನಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಇವರು ತಮ್ಮ ಆತ್ಮೀಯ ಕ್ಷಣಗಳನ್ನು ಫೋಟೋ ಹಾಗೂ ವಿಡಿಯೋ ತೆಗೆದುಕೊಂಡು ಇಟ್ಟುಕೊಂಡಿದ್ದರು. ಆದರೆ, ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಮಾಡಿದ ತನ್ವಿ ತಮ್ಮ ಖಾಸಗಿ ಕ್ಷಣಗಳ ಫೋಟೋ, ವಿಡಿಯೋವನ್ನು ಡಿಲೀಟ್ ಮಾಡಬೇಕೆಂದು ತನ್ನ ಬಾಯ್‌ಫ್ರೆಂಡ್‌ ಸಂತೋಷ್ ಗೆ ತಿಳಿಯದಂತೆ ಅವನ ಫೋನ್ ತೆಗೆದುಕೊಂಡು ಗ್ಯಾಲರಿ ತೆಗೆದು ನೋಡಿದ್ದಾಳೆ. ಕೆಲವು ಫೋಟೋಗಳನ್ನು ತಿರುಚಿದ ಬಗ್ಗೆ ತನ್ವಿಗೆ ಕಂಡುಬಂದಿದೆ. ನಂತರ ತನ್ನದೂ ಸೇರಿದಂತೆ ಇತರೆ ಮಹಿಳಾ ಸಹೋದ್ಯೋಗಿಗಳು ಹಾಗೂ ಬೇರೆ ಬೇರೆ ಯುವತಿಯರ ನಗ್ನ ಫೋಟೋಗಳನ್ನು ನೋಡಿ ಬೆರಗಾಗಿದ್ದಾರೆ.

ಇನ್ನು ಕಂಪನಿಯಲ್ಲಿ ಕೆಲಸ ಮಾಡುವ ಇತರ ಮಹಿಳೆಯರ ಸುರಕ್ಷತೆಯನ್ನು ಪರಿಗಣಿಸಿ, ಇಂಡಿಯಾ ರೀಜನ್ ಮುಖ್ಯಸ್ಥರು ಅರ್ಚನಾ ಅವರಿಗೆ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಮನವಿ ಮಾಡಿದರು. ನಂತರ ಈ ಕುರಿತು ಮಾತನಾಡಿದ ಕಂಪನಿಯ ವಕ್ತಾರರು 'ಇದು ಕಂಪನಿಯ ಹಲವು ಮಹಿಳೆಯರ ಮೇಲೆ ಪರಿಣಾಮ ಬೀರಬಹುದು. ಕಚೇರಿಯಲ್ಲಿ ಕೆಲವು ಹೆಂಗಸರು ಯಾವುದೇ ಇಂತಹ ಅನೈತಿಕ ಕೆಲಸಕ್ಕೆ ಮುಂದಾಗದಿದ್ದರೂ ಅವನ ಮೊಬೈಲ್‌ನಲ್ಲಿ ಹೇಗೆ ನಗ್ನ ಫೋಟೋಗಳು ಬಂದಿವೆ ಎಂಬುದು ಗೊತ್ತಿಲ್ಲ. ಜೊತೆಗೆ, ಆತನ ಉದ್ದೇಶ ಏನಾಗಿದೆ ಎಂಬುದು ಕೂಡ ಯಾರಿಗೂ ಗೊತ್ತಿರಲಿಲ್ಲ. ಮಹಿಳೆಯರ ಖಾಸಗಿ ಫೋಟೋಗಳು ಹೇಗೆ ಲೀಕ್ ಆಗಿವೆ ಎನ್ನುವುದು ಮಹಿಳೆಯರಿಗೆ ಆಘಾತವನ್ನುಂಟು ಮಾಡಿದೆ. 

ನಮ್ಮ ಮೆಟ್ರೋ 3ನೇ ಹಂತದ ಭೂಸ್ವಾದೀನಕ್ಕೆ ಸಿದ್ಧತೆ, 100 ಎಕರೆ ಗುರುತಿಸಿದ ಬಿಎಂಆರ್‌ಸಿಎಲ್‌

ಇದು ಗಂಭೀರವಾದ ಸಮಸ್ಯೆ ಎಂದು ನಾವು ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಸಂತೋಷ್ ಕಳೆದ 5 ತಿಂಗಳಿನಿಂದ ಗ್ರಾಹಕ ಸೇವಾ ಏಜೆಂಟ್ ಆಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಛಾಯಾಚಿತ್ರಗಳನ್ನು ಮಾರ್ಫ್ ಮಾಡಲು ಸಂಸ್ಥೆಯ ಯಾವುದೇ ಸಾಧನಗಳನ್ನು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸಂತೋಷ್ ವಿರುದ್ಧ ಪ್ರಕರಣವನ್ನು ಕೈಗೆತ್ತಿಕೊಂಡು ಆತನ ಕಚೇರಿಯಿಂದಲೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಆರೋಪಿ ಸ್ಥಾನದಲ್ಲಿರುವ ಸಂತೋಷ್‌ ಇಷ್ಟೊಂದು ಫೋಟೋಗಳನ್ನು ಏಕೆ ಇಟ್ಟುಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ನಮಗೆ ಸ್ವಲ್ಪ ಸಮಯ ಬೇಕು. ಅವುಗಳಲ್ಲಿ ಕೆಲವು ಮಾರ್ಫ್ ಆಗಿವೆ ಮತ್ತು ಕೆಲವು ನೈಜವಾಗಿವೆ. ಅವರನ್ನು ಬಳಸಿಕೊಂಡು ಯಾವುದೇ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಅವರ ಚಾಟ್ ಇತಿಹಾಸ ಮತ್ತು ಫೋನ್ ಕರೆಗಳು ಸಹ ಪರಿಶೀಲನೆಯಲ್ಲಿವೆ' ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ