ಹಾಸನದಲ್ಲಿ ಯೋಧ ಕಿರಣ್ ಕುಮಾರ್ ಎಂಬಾತ ಎರಡನೇ ಮದುವೆ ರಾದ್ದಾಂತವಾಗಿ ಮೊದಲ ಪತ್ನಿ ಜತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಪ್ರಕರಣದಲ್ಲಿ ಮಧುಮಗ ಆತ್ಮಹತ್ಯೆಗೂ ಮುನ್ನ ಅಣ್ಣನಿಗೆ ಆಡಿಯೋ ಕಳಿಹಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹಾಸನ (ನ.12): ಹಾಸನದಲ್ಲಿ ಯೋಧ ಕಿರಣ್ ಕುಮಾರ್ ಎಂಬಾತನ ಎರಡನೇ ಮದುವೆ ರಾದ್ದಾಂತವಾಗಿ ಆತ ಮತ್ತು ಆತನ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಪ್ರಕರಣದಲ್ಲಿ ಮಧುಮಗ ಆತ್ಮಹತ್ಯೆಗೂ ಮುನ್ನ ಅಣ್ಣನಿಗೆ ಆಡಿಯೋ ಕಳಿಹಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸಾಯೋ ಮುನ್ನ ಮಧುಮಗ ಕಳುಹಿಸಿದ್ದ ಫೋಟೋ ಹಾಗೂ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಆಡಿಯೋ ಜೊತೆಗೆ ಕುತ್ತಿಗೆಗೆ ಹಗ್ಗವನ್ನು ಹಾಕಿಕೊಂಡಿರೋ ಫೋಟೋ ಕೂಡಾ ಕಳುಹಿಸಿದ್ದ. ಆ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದ. ತನ್ನ ಆಡಿಯೋದಲ್ಲಿ " ಅಣ್ಣಯ್ಯ ನನ್ನದು ತಪ್ಪಾಗಿದೆ, sorry , ನಾನು ಇಷ್ಟೆಲ್ಲಾ ಮಾನ ಮರ್ಯಾದೆಗಾಗಿ ಮಾಡಿ, ಆ ತರದ್ದು ಏನೂ ಕೆಲ್ಸ ಮಾಡಿಲ್ಲ, ಚೀಟಿ ವಿಚಾರಕ್ಕಾಗಿ, ನಾನು ಸಾಯ್ತಾ ಇದ್ದೀನಿ, ಏನ್ ನನ್ನದು ದುಡ್ಡು ಬರುತ್ತೆ ಅದನ್ನ ಇದ್ಮಾಡಿ, ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೋ ಎಂದು ಹೇಳಿದ್ದಾನೆ.
ಕಿರಣ್ ಹಾಗೂ ಮೊದಲ ಪತ್ನಿ ಎಂದು ಹೇಳಿಕೊಂಡಿದ್ದ ಆಶಾ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರೂ ಕೂಡಾ ಬೈಕ್ ನಲ್ಲಿ ತೆರಳಿ ಫಾರೆಸ್ಟ್ ನಲ್ಲಿ ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ನ.10ರಂದು ಕಿರಣ್ ಕುಮಾರ್ ಎಂಬ ಯೋಧ ನಗರದ ಬೂವನಹಳ್ಳಿ ಬೈಪಾಸ್ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮದುವೆಯಾಗುತ್ತಿದ್ದ. ಈ ಸಂದರ್ಭ ಅಲ್ಲಿಗೆ ಪೊಲೀಸರೊಂದಿಗೆ ಬಂದ ಆಶಾ ಬಂದು ತಾನು ಮತ್ತು ಕಿರಣ್ ಈಗಾಗಲೇ ಮದುವೆ ಆಗಿದ್ದು, ಈಗ ನನ್ನನ್ನು ವಂಚಿಸಿ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ.
ಅತಿಯಾಗಿ ಮೊಬೈಲ್ ಬಳಸುತ್ತಿದ್ದದಕ್ಕೆ ಪಾಸ್‌ವರ್ಡ್ ಹಾಕಿದ ತಮ್ಮ, ಮನನೊಂದ ಅಕ್ಕ ನೇಣಿಗೆ ಶರಣು!
ತಾನು ವಿಧವೆ ಮತ್ತು ಇಬ್ಬರು ಮಕ್ಕಳಿದ್ದು ಕಿರಣ್ ಕೆಲ ತಿಂಗಳ ಹಿಂದೆ ತನ್ನ ಮನೆಯಲ್ಲೇ ತಾಳಿ ಕಟ್ಟಿದ್ದ ಎಂದು ಗಲಾಟೆ ನಡೆಸಿದ್ದಳು. ಅಷ್ಟೊತ್ತಿಗಾಗಲೇ ಕಿರಣ್ 2ನೇ ಹುಡುಗಿಗೆ ತಾಳಿ ಕಟ್ಟಿದ್ದ. ಆದರೆ ಇಷ್ಟೆಲ್ಲಾ ರಂಪಾಟ ನೋಡಿದ ವಧು ಈ ಮದುವೆ ಬೇಡ ಎಂದು ಹೇಳಿ, ತಾಳಿ ವಾಪಸ್ ಕಿತ್ತು ಹಾಕಿ ಸಂಬಂಧಿಕರ ಜೊತೆ ಹೋಗಿದ್ದಾಳೆ. ರಾಜಿ ಸಂಧಾನದ ನಂತರ ಕಿರಣ್ ಮನೆಗೆ ಹೊರಟವನೇ ಮತ್ತೆ ಆಶಾಳನ್ನು ಸಂಪರ್ಕಿಸಿದ್ದಾನೆ. ಇಬ್ಬರ ನಡುವೆ ಮನಸ್ತಾಪವೇರ್ಪಟ್ಟಿದ್ದು, ನಂತರ ಶಾಂತಿಗ್ರಾಮ ಸಮೀಪದ ಹೊಂಗೆರೆ ಬಳಿಯ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಇಬ್ಬರೂ ನೇಣು ಬಿಗಿದುಕೊಂಡಿದ್ದರು. ಮರ್ಯಾದೆ ಹಾಳಾಯಿತೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು.
2ನೇ ಮದುವೆ ವೇಳೆ ರಾದ್ಧಾಂತ: ಮೊದಲ ಪತ್ನಿ ಜತೆ ಯೋಧ ಆತ್ಮಹತ್ಯೆ
ಬಾದಾಮಿಯಿಂದ ಸಿದ್ದು ಸ್ಪರ್ಧಿಸದಿದ್ದರೆ ಆತ್ಮಹತ್ಯೆ: ಹಂಗರಗಿ
ಬಾಗಲಕೋಟೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಇಲ್ಲದಿದ್ದರೆ, ವಿಷ ಸೇವಿಸುವುದಾಗಿ ಕಾಂಗ್ರೆಸ್ ಮುಖಂಡ ಮುಚಖಂಡಯ್ಯ ಹಂಗರಗಿ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಧರಣಿ ಮಾಡಿಯಾದರೂ ಸಿದ್ದರಾಮಯ್ಯ ಅವರ ಮನವೊಲಿಸುವುದಾಗಿ ಹೇಳಿದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿದ್ದ ಬಾದಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತಗೌಡ ಯಕ್ಕಪ್ಪನವರ ಮತ್ತಿತರರು ಸಿದ್ದರಾಮಯ್ಯ ಅವರು ಬಾದಾಮಿಗೆ ಬಂದು ನಾಮಪತ್ರ ಸಲ್ಲಿಸಿ ಹೋದರೆ ಸಾಕು. ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವುದಾಗಿ ಶಪಥ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ಅವರ ನಾಲ್ಕು ವರ್ಷಗಳ ಜನಪರ ಆಡಳಿತದಿಂದ ಬಾದಾಮಿ ಕ್ಷೇತ್ರ ಎಲ್ಲ ಹಂತದಲ್ಲೂ ಅಭಿವೃದ್ಧಿ ಕಂಡಿದೆ ಎಂದರು. ಬಾದಾಮಿಯಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದರು.