Latest Videos

ಹಾಸನ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: ಬಿಜೆಪಿ ನಾಯಕ ಪ್ರೀತಂ ಗೌಡ ಬಂಧಿಸದಂತೆ ಹೈಕೋರ್ಟ್ ಆದೇಶ

By Gowthami KFirst Published Jun 28, 2024, 5:30 PM IST
Highlights

ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಸಂಕಷ್ಟದಲ್ಲಿರುವ ಮಾಜಿ ಶಾಸಕ ಪ್ರೀತಂ ಗೌಡ ಬಂಧಿಸದಂತೆ ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರು (ಜೂ.28): ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಸಂಕಷ್ಟದಲ್ಲಿರುವ ಮಾಜಿ ಶಾಸಕ ಪ್ರೀತಂ ಗೌಡ ಬಂಧಿಸದಂತೆ ಹೈಕೋರ್ಟ್ ಆದೇಶ ನೀಡಿದೆ. ಜೊತೆಗೆ ತನಿಖೆ ಮುಂದುವರಿಸಲು ಎಸ್ಐಟಿ  ಹೈಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆಗೆ ಸಹಕರಿಸಲು ಅರ್ಜಿದಾರ ಪ್ರೀತಂ ಗೌಡಗೆ ಹೈಕೋರ್ಟ್ ಸೂಚನೆ ನೀಡಿದೆ. 

ಪ್ರೀತಮ್‌ಗೌಡ ಪರ ವಾದಕ್ಕೆ ಎಸ್ ಪಿಪಿ ರವಿವರ್ಮ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಸಂತ್ರಸ್ತೆಯ ವಿಡಿಯೋ ಹಂಚಿದ ಗಂಭೀರ ಆರೋಪವಿದೆ. ಹೀಗಾಗಿ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡುತ್ತೇನೆ. ಜನ ಮಾತನಾಡಿಕೊಳ್ಳುತ್ತಿರುವ ಕಾರಣಕ್ಕೆ ದೂರು ನೀಡಿದ್ದಾರೆ. ಸರ್ಕಾರದವರೇ 3 ಲಕ್ಷ ಪೆನ್ ಡ್ರೈವ್ ಹಂಚಿದ್ದಾರೆಂದು ಜನ ಮಾತನಾಡುತ್ತಿದ್ದಾರೆ ಎಂದರು.

ಪೆನ್‌ಡ್ರೈವ್ ಪ್ರಕರಣ: ಈಗ ಬಿಜೆಪಿ ಪ್ರೀತಂಗೌಡ ವಿರುದ್ಧವೂ ಎಫ್‌ಐಆರ್..!

ಇದಕ್ಕೆ ಹಾಗಿದ್ದರೆ ಸರ್ಕಾರದವರ ಮೇಲೂ ಎಫ್ಐಆರ್ ಮಾಡುತ್ತಾರಾ? ಎಂದು ಪ್ರೀತಮ್ ಗೌಡ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು. ವಿಡಿಯೋ ಹಂಚುವುದರಿಂದ  ಮಹಿಳೆಯ ಗೌರವಕ್ಕೆ ಹಾನಿಯಾಗುತ್ತೆ. ವಿಡಿಯೋ ಹಂಚಿಕೆಯೂ ಗಂಭೀರ ಅಪರಾಧವೆಂದು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ದೃಶ್ಯಾವಳಿಗಳು ತುಂಬಿದ ಪೆನ್‌ಡ್ರೈವ್ ಹಂಚಿಕೆ ಪ್ರಕರಣ ರೋಚಕ ತಿರುವು ಪಡೆದಿದ್ದು, ಪ್ರಕರಣದಲ್ಲಿ ಪ್ರಜ್ವಲ್‌ ಅವರ ರಾಜಕೀಯ ಕಡು ವಿರೋಧಿಯೇ ಆರೋಪಿಯಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಪೆನ್‌ಡ್ರೈವ್‌ ಬಹಿರಂಗ ಪ್ರಕರಣದಲ್ಲಿ  ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಪಾತ್ರ ಇದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಅವರು ಎಫ್‌ಐಆರ್‌ ದಾಖಲಾಗಿತ್ತು.

ಮೂರನೇ ಅತ್ಯಾಚಾರ ಪ್ರಕರಣ: ಮತ್ತೆ ಪ್ರಜ್ವಲ್ ನ್ಯಾಯಾಂಗ ಬಂಧನ, ಜುಲೈ 8ರವರೆಗೆ ಪರಪ್ಪನ ಅಗ್ರಹಾರ

ಐಪಿಸಿ 354 (ಲೈಂಗಿಕ ಕಿರುಕುಳ), ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣ ಸೇರಿದಂತೆ ಇತರೆ ಆರೋಪಗಳಡಿ ಸಿಐಡಿ ಠಾಣೆಯಲ್ಲಿ ಎಸ್‌ಐಟಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಪ್ರಜ್ವಲ್‌ ಎ1 ಆರೋಪಿಯಾಗಿದ್ದರೆ, ಮಾಜಿ ಶಾಸಕ ಪ್ರೀತಂಗೌಡ ಎ4 ಆರೋಪಿಯಾಗಿದ್ದಾರೆ. ಇನ್ನುಳಿದ ಪ್ರೀತಂಗೌಡ ಸಹಚರರಾದ ಕಿರಣ್ (ಎ-2) ಹಾಗೂ ಕ್ವಾಲಿಟಿ ಬಾರ್ ಶರತ್ (ಎ3) ಹೆಸರು ಉಲ್ಲೇಖವಾಗಿದೆ.

 

click me!