ಹರ್ಯಾಣ 19 ವರ್ಷದ ಗ್ಯಾಂಗ್‌ಸ್ಟರ್‌ ಕಡ್ಯಾನ್‌ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌, ಅಮೆರಿಕಕ್ಕೆ ಪರಾರಿ

By Kannadaprabha News  |  First Published Oct 28, 2023, 11:44 AM IST

 ಖಲಿಸ್ತಾನ್‌ ಜೊತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ 19 ವರ್ಷದ ಕ್ರಿಮಿನಲ್‌  ಹರ್ಯಾಣದ ಗ್ಯಾಂಗ್‌ಸ್ಟರ್‌ ಯೋಗೇಶ್‌ ಕಡ್ಯಾನ್‌ ವಿರುದ್ಧ ರೆಡ್‌ ಕಾರ್ನರ್‌ ನೊಟೀಸ್ ನೀಡಲಾಗಿದ್ದು ಅಮೆರಿಕಕ್ಕೆ ಪರಾರಿಯಾಗಿದ್ದಾನೆನ್ನಲಾಗಿದೆ.


ನವದೆಹಲಿ: ಭಾರತ-ಕೆನಡಾ ನಡುವೆ ಖಲಿಸ್ತಾನ ವಿಚಾರವಾಗಿ ಸಂಘರ್ಷ ತಾರಕಕ್ಕೇರುತ್ತಿರುವ ನಡುವೆಯೇ ಖಲಿಸ್ತಾನಿ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಹರ್ಯಾಣದ ಗ್ಯಾಂಗ್‌ಸ್ಟರ್‌ ಯೋಗೇಶ್‌ ಕಡ್ಯಾನ್‌ (19) ವಿರುದ್ಧ ಇಂಟರ್‌ಪೋಲ್‌ ರೆಡ್‌ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ. 

ಕೊಲೆ ಯತ್ನ, ಅಪರಾಧ ಪಿತೂರಿ ಹಾಗೂ ಶಸ್ತ್ರಾಸ್ತ್ರ ಕಾಯಿದೆಗಳ ಸೇರಿದಂತೆ ಹಲವು ಅಪರಾಧಗಳ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ)ಗೆ ಯೋಗೇಶ್‌ ಭಾರತದಿಂದ ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪಲಾಯನಗೈದು ಅಮೆರಿಕದಲ್ಲಿ ನೆಲೆಸಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಆತನ ಮನೆ ಹಾಗೂ ಸಂಭಾವ್ಯ ಅಡಗುತಾಣಗಳ ಮೇಲೆ ಎನ್‌ಐಎ ದಾಳಿ ನಡೆಸಿ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ಅಲ್ಲದೆ ಆತನ ಬಗ್ಗೆ ಸುಳಿವು ನೀಡಿದವರಿಗೆ 1.5 ಲಕ್ಷ ರು. ಬಹುಮಾನ ಪ್ರಕಟಿಸಲಾಗಿತ್ತು.

Tap to resize

Latest Videos

ಪಿತೂರಿಯಿಂದ ವರ್ತೂರು ಬಂಧನ, ಅರಣ್ಯ ಇಲಾಖೆ ಎಡವಟ್ಟು ಎಳೆಎಳೆಯಾಗಿ ಬಿಚ್ಚಿಟ್ಟ ಸಂತೋಷ್‌ ಪರ ವಕೀಲ

ನಿಷೇಧಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪ ಕೂಡ ಇದ್ದು, ಇಳಿವಯಸ್ಸಿನ ಹೊರತಾಗಿಯೂ ಯೋಗೇಶ್ ಆಧುನಿಕ ಆಯುಧಗಳನ್ನು ಬಳಸುವುದರಲ್ಲಿ ನುರಿತ ಎಂದು ಪರಿಗಣಿಸಲಾಗಿದೆ.

ಹರಿಯಾಣ ಮೂಲದ ಈತ ಪಂಜಾಬ್‌ನ ಕುಖ್ಯಾತ ಬಾಂಬಿಹಾ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಅವರು ಹಲವಾರು ಗ್ಯಾಂಗ್-ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದು, ದೆಹಲಿಯ ಕುಖ್ಯಾತ ದರೋಡೆಕೋರ ನೀರಜ್ ಬವಾನಾ ಅವರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ವರದಿಯಾಗಿದೆ.

ನಿಮ್ಮ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ

ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಜಗಳದ ನಡುವೆ ಈ ಬೆಳವಣಿಗೆ ನಡೆದಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತೀಯ ಏಜೆಂಟ್‌ಗಳು ಮತ್ತು ಖಲಿಸ್ತಾನಿ ಬೆಂಬಲಿಗ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆ ಮಾಡಿದ್ದಾರೆ ಎಂದು ಹೇಳಿದಾಗ ಎರಡೂ ದೇಶಗಳ ನಡುವೆ ವಿವಾದ ಪ್ರಾರಂಭವಾಯಿತು. ವ್ಯಾಂಕೋವರ್ ಉಪನಗರದಲ್ಲಿ ಅಪರಿಚಿತ ವ್ಯಕ್ತಿಗಳಿಂದ ನಿಜ್ಜರ್  ಗುಂಡು ಹಾರಿಸಿ ಕೊಲ್ಲಲಾಯ್ತು.

click me!