ವರದಕ್ಷಿಣೆಗಾಗಿ ಬೈಕ್ ಬೇಕೆಂದು ಪಟ್ಟು ಹಿಡಿದ ಯುವಕ/ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಯುವತಿ ಕುಟುಂಬ/ ಮದುವೆ ನಿಂತ ಕಾರಣ ಯುವತಿ ಆತ್ಮಹತ್ಯೆಗೆ ಶರಣು
ಬರೇಲಿ (ಮಾ. 11)ಎಂಥದ್ದೇ ಕಾನೂನು ತಂದರೂ ವರದಕ್ಷಿಣೆ ಕಿರುಕುಳ ಪ್ರಕರಣ ಮಾತ್ರ ನಿಲ್ಲುತ್ತಿಲ್ಲ. ಮದುವೆಯಾಗಬೇಕಿದ್ದ ಯುವಕ ಕೊನೆ ಕ್ಷಣದಲ್ಲಿ ಬೈಕ್ ಕೊಡಿಸುವಂತೆ ಹೆಣ್ಣಿನ ಮನೆಯವರಲ್ಲಿ ಬೇಡಿಕೆ ಇಟ್ಟಿದ್ದ. ಇದರಿಂದ ನೊಂದ ವಧು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೈಕ್ ಕೇಳಿದ್ದಕ್ಕೆ ಯುವತಿ ಮನೆಯವರು ಸಾಧ್ಯ ಇಲ್ಲ ಎಂದಿದ್ದಾರೆ. ಈ ಕಾರಣ ಮದುವೆ ನಿಂತುಹೋಗಿದೆ. ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬುಡಾನ್‌ನ ಉಜಾನಿ ಪ್ರದೇಶದಲ್ಲಿ ಸೋಮವಾರ ಘಟನೆ ನಡೆದಿದೆ.
undefined
ಹ್ಯಾಪಿನೆಸ್ ಗಾಗಿ ಆನ್‌ಲೈನ್ ಸರ್ಚ್, ಕೊನೆಗೆ ರಾಯಚೂರು ಹುಡುಗ ಸುಸೈಡ್
ಸಕ್ರಿ ಜಂಗಲ್ ಗ್ರಾಮದ ನಿವಾಸಿ ಶಾಮಾ ಜಹಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯನೇ ಆಗಿದ್ದಅತೀಕ್ ಎಂಬಾತನನ್ನು ಜತೆ ಯುವತಿಗೆ ಪ್ರೇಮಾಂಕುರವಾಗಿತ್ತು. ಈ ಸಂಗತಿ ಎರಡೂ ಮನೆಯಲ್ಲಿ ಗೊತ್ತಾಗಿ ಮದುವೆ ನಿಶ್ಚಯ ಮಾಡಿದ್ದರು.
ಊರ ಹಿರಿಯರ ಸಮ್ಮುಖದಲ್ಲಿ ಮದುವೆ ಮಾತುಕತೆ ನಡೆದಿದ್ದು ಈ ವೇಳೆ ಗಂಡಿನ ಕುಟುಂಬದವರು ಬೈಕ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಬೈಕ್ ಇಲ್ಲದೆ ಮದುವೆ ಇಲ್ಲ ಎಂದು ಅತೀಕ್ ಹೇಳಿದ್ದಾನೆ.
ಯುವತಿಯ ತಂದೆ ತೀರಿಹೋಗಿ ವರುಷಗಳೆ ಉರುಳಿದ್ದವು. ಆಕೆಯ ಸಹೋದರರು ದೆಹಲಿಯಲ್ಲಿ ಸಣ್ಣ ಕೆಲಸ ಮಾಡಿಕೊಂಡು ಇದ್ದಾರೆ. ಮದುವೆಗೆ ಕುಟುಂಬ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿತ್ತು.
ಈ ಎಲ್ಲ ಘಟನೆಗಳಿಂದ ನೊಂದ ಯುವತಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆಯಾಗಬೇಕಿದ್ದ ಅತೀಕ್ ಪರಾರಿಯಾಗಿದ್ದು ಪೊಲೀಸರು ಬಲೆ ಬೀಸಿದ್ದಾರೆ.