ಶೇಖರ ಸಣ್ತಮ್ಮ ಪಟಗಾರ ಬಂಧಿತ ಆರೋಪಿ| ವಾರದ ಹಿಂದೆ ಮಹಿಳೆಯೋರ್ವಳು ಸ್ನಾನ ಮಾಡುವಾಗ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ| ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು|
ಅಂಕೋಲಾ(ಮಾ.11): ಮಹಿಳೆ ಸ್ನಾನ ಮಾಡುವಾಗ ಅತ್ಯಾಚಾರಕ್ಕೆ ಪ್ರಯತ್ನಪಟ್ಟ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿರುವ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಅಚವೆ ಗ್ರಾಪಂ ಬೋರೊಳ್ಳಿ ನಿವಾಸಿ ಶೇಖರ ಸಣ್ತಮ್ಮ ಪಟಗಾರ ಬಂಧಿತ ಆರೋಪಿ. ಕಳೆದ ಒಂದು ವಾರದ ಹಿಂದೆ ಮಹಿಳೆಯೋರ್ವಳು ಸ್ನಾನ ಮಾಡುವಾಗ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಕುರಿತು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಣ್ಮರೆಯಾಗಿದ್ದು ಅಂಕೋಲಾ ಪೊಲೀಸ್ ತಾಲೂಕಿನ ಬಸ್ ನಿಲ್ದಾಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಮಹಿಳೆ ಮೇಲೆ 3 ದಿನ ಅತ್ಯಾಚಾರ ಎಸಗಿದ ಸಬ್ ಇನ್ಸ್ಪೆಕ್ಟರ್
ಸಿಪಿಐ ಕೃಷ್ಣಾನಂದ ನಾಯಕ, ಪಿಎಸೈ ಸಂಪತಕುಮಾರ ಮತ್ತು ಪ್ರೇಮನಗೌಡ ಪಾಟೀಲ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿದ್ದರು.