ಅಜ್ಜ ಮೊಬೈಲ್ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕೊಳಾಳ್ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ (ಅ.20): ಅಜ್ಜ ಮೊಬೈಲ್ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕೊಳಾಳ್ ಗ್ರಾಮದಲ್ಲಿ ನಡೆದಿದೆ.
ಯಶವಂತ(20) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ವಾರ ಅಕ್ಟೋಬರ್ 8ರಂದು ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನೆ ಹಬ್ಬದ ವೇಳೆ ಲಕ್ಷಾಂತರ ಜನರು ಸೇರಿದ್ದರು. ಈ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದ ಯುವಕ. ಮೊದಲೇ ಲಕ್ಷಾಂತರ ಜನರ ಸೇರಿರುವ ಶೋಭಾಯಾತ್ರೆ ವೇಳೆ ನೂಕುನುಗ್ಗಲಿನಲ್ಲಿ ಮೊಬೈಲ್ ಕಳೆದುಕೊಂಡಿದ್ದಾನೆ ಅಥವಾ ಯಾರೋ ಕಳ್ಳತನ ಮಾಡಿದ್ದಾರೆ.
undefined
ಮೊಬೈಲ್ ಅಡಿಕ್ಟ್ ತಾಯಿ, ತೋಳಲ್ಲೇ ಇದ್ದ ಮಗುವಿಗಾಗಿ ರೂಮೆಲ್ಲಾ ಹುಡುಕಾಡಿದ್ಲು!
ಮೊಬೈಲ್ ಇಲ್ಲದೆ ಕಂಗಾಲಾಗಿದ್ದ ಯುವಕ. ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ದುಂಬಾಲು ಬಿದ್ದಿದ್ದ. ಇದೇ ದಿನ ಬೇಕು ಅಂತಾ ಹಟಕ್ಕೆ ಬಿದ್ದಿ ಮೊಮ್ಮಗ. ಆದರೆ ರೈತಾಪಿ ಕುಟುಂಬ. ಈ ವರ್ಷವೂ ಬರಗಾಲ ಬಂದು ಹದಗೆಟ್ಟ ಆರ್ಥಿಕ ಸ್ಥಿತಿಯಲ್ಲಿ ಹತ್ತಾರು ಸಾವಿರು ರೂ. ಕೊಟ್ಟು ಹೊಸ ಮೊಬೈಲ್ ಖರೀದಿಸುವುದು ಎಲ್ಲಿಂದ. ಹೀಗಾಗಿ ಈರುಳ್ಳಿ ಬೆಳೆ ಬಂದ ಬಳಿಕ ಕೊಡಿಸೋಣ ಅಂತಾ ಸಮಾಧಾನ ಮಾಡಿದ್ದ ಅಜ್ಜ. ಆದರೆ ಬೆಳೆ ಬರುವವರೆಗೆ ಕಾಯದೇ ಅಕ್ಟೋಬರ್ 18ರಂದು ಮನೆಯಲ್ಲಿ ರಾಸಾಯನಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವಕ. ವಿಷಯ ತಿಳಿದು ಕೂಡಲೇ ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದ ವೈದ್ಯರು. ಯುವಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ನಿನ್ನೆ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಸಾಗಿಸಲಾಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಸಾವು. ಈ ಘಟನೆ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಗಳ ಬಳಿ ಫೋನ್ ಕಿತ್ತುಕೊಂಡ ತಾಯಿ ಕೊಲ್ಲಲು ಪದೇ ಪದೇ ಸಂಚು ಮಾಡಿದ 13 ವರ್ಷದ ಮೊಬೈಲ್ ವ್ಯಸನಿ!
ಮೊಬೈಲ್ ವ್ಯಸನ ಎಂಬುದು ಇಂದಿನ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಪೋಷಕರೇ ತಮ್ಮ ಅಪ್ರಾಪ್ತ ಮಕ್ಕಳಿಗೆ ಮೊಬೈಲ್ ಕೊಡಿಸುವ ಮೂಲಕ ಅನಾಹುತಕ್ಕೆ ಕಾರಣರಾಗುತ್ತಿದ್ದಾರೆ ಎಂಬುದು ಇನ್ನೂ ಆತಂಕಪಡುವ ವಿಷಯವಾಗಿದೆ. ಚಿಕ್ಕಮಕ್ಕಳು ವಿದ್ಯಾರ್ಥಿಗಳ ಕೈಗೆ ಮೊಬೈಲ್ ಕೊಡುವುದು ಅಪಾಯ. ವಿದ್ಯಾಭ್ಯಾಸದ ಕಡೆ ಗಮನ ಕೊಡದೇ ಮೊಬೈಲ್ ವಿಡಿಯೋ ಗೇಮ್‌ಗೆ ಅಡಿಕ್ಟ್ ಆಗಿ ಮಾನಸಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಪಬ್‌ಜಿಯಂತ ಗೇಮ್‌ಗಳಿಗೆ ಅಡಿಕ್ಟ್ ಆಗಿ ಜೀವ ಕಳೆದುಕೊಂಡ ಎಷ್ಟೋ ಉದಾಹರಣೆಗಳು ಕಣ್ಣಮುಂದಿವೆ. ಒಮ್ಮೆ ಮಕ್ಕಳು ಅಥವಾ ಯುವಕರು ಮೊಬೈಲ್ ವ್ಯಸನಕ್ಕೆ ತುತ್ತಾದರೆಂದರೆ ಅವರಿಗೆ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಬದುಕಲಾಗುವುದಿಲ್ಲ. ಹೀಗಾಗಿ ಅಂಥ ಮಕ್ಕಳು ಆತ್ಮಹತ್ಯೆಗೂ ಮುಂದಾಗಿಬಿಡುತ್ತಾರೆ. ಮೊಬೈಲ್ ಕೊಡಿಸಲು ವಿಳಂಬವಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಈ ಘಟನೆ ಪೋಷಕರಿಗೆ ಒಂದು ಪಾಠವಾಗಲಿ.