
ಶಿವಮೊಗ್ಗ(ಡಿ. 22) ಮತದಾನಕ್ಕಾಗಿ ನಿನ್ನೆ ಕುಕ್ಕರ್ ಸಂಗ್ರಹಿಸಿದ ಬೆನ್ನಲ್ಲೇ ತಮ್ಮ ಕಡೆ ಮತಚಲಾಯಿಸಿದ ಮತದಾರರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿರುವ ಪ್ರಕರಣ ಬೆಳಗಿಗೆ ಬಂದಿದೆ.
ಮತದಾನ ನಡೆಯುತ್ತಿರುವ ವೇಳೆ ತಮ್ಮನ್ನ ಬೆಂಬಲಿಸಿ ಮತಚಲಾಯಿಸಿದವರಿಗೆ ಫಲಾವ್ ಮತ್ತು ನಾನ್ ವೆಜ್ ಊಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸ್ಥಳದ ಮೇಲೆ ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ವಿಲೀನ ಕತೆ ಎಲ್ಲಿಗೆ ಬಂತು?
ಊಟಕ್ಕೆ ಬಳಸಿದ ಪಾತ್ರೆ ಮತ್ತು ಇತರೆ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಪಂ ಚುನಾವಣೆಗೆ 150 ಕ್ಕೂ ಹೆಚ್ಚು ಜನರಿಗೆ ಫಲಾವ್ ಸಿದ್ದಪಡಿಸಲಾಗಿತ್ತು. ಮಾಂಸಹಾರಿ ಊಟವೂ ಸಿದ್ಧವಾಗಿತ್ತು.
ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ 30 ಕ್ಕೂ ಹೆಚ್ಚುಜನ ಪರಾರಿಯಾಗಿದ್ದಾರೆ. ಹೊಸಹಳ್ಳಿ ತೋಟವೊಂದರಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು. ಅಧಿಕಾರಿಗಳಾದ ಚಂದ್ರಪ್ಪ, ಇಒ ಡಾ.ಕಲ್ಲಪ್ಪ ನೇತೃತ್ವದಲ್ಲಿ ನಡೆದ ದಾಳಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ